Advertisement
ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿ ಶನಿವಾರದಿಂದ ಆರಂಭಗೊಂಡ 11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಈ ಚಿಂತೆಯೇ ನುಣುಚಿಕೊಳ್ಳುವ ಉಪಾಯವೂ ಆಗಬಾರದು. ನ್ಯಾಯಾಲಯದ ನ್ಯಾಯದೇವತೆಯ ತಕ್ಕಡಿಯ ಪ್ರತಿಮೆ ನಮ್ಮ ಸಾಹಿತಿಗಳಿಗೆ ಮಾರ್ಗದರ್ಶಿ ಪ್ರತಿಮೆಯಾಗಬೇಕು ಎಂದರು.
Related Articles
Advertisement
ಮಾನವೀಯ ಸಂವೇದನೆಗಳೇ ಸತ್ತು ಹೋಗುತ್ತಿರುವ ವರ್ತಮಾನದ ವ್ಯಾವಹಾರಿಕ ಹಾಗೂ ಗ್ರಾಹಕ ಸಂಸ್ಕೃತಿಯು, ಸಂಕುಚಿತ ಮತ್ತು ಸ್ವಾರ್ಥದ ಮಾನವ ಬೆಳೆಯನ್ನು ಪೊಗದಸ್ತಾಗಿ ಬೆಳೆಯುತ್ತಿದೆ. ಇಂತಹದರಲ್ಲಿ ಮಾನವರಲ್ಲಿ ಮೊದಲು ಮಾನವೀಯ ಸಂವೇದನೆಗಳನ್ನು ಜಾಗೃತ ಗೊಳಿಸುವುದು ಅಗತ್ಯವಿದ್ದು, ಇದು ಬರಹಗಾರನ ಆದ್ಯತೆಯ ಕೆಲಸವಾಗಬೇಕು ಎಂದು ಸಲಹೆ ನೀಡಿದರು.
ಕನ್ನಡ ಕುಲಂ ಗೆಲ್ಗೆ: ಸಮ್ಮೇಳನದ ಆಶಯ ನುಡಿಗಳನ್ನಾಡಿದ ಸಾಹಿತಿ ಡಾ| ಶಾಂತಿನಾಥ ದಿಬ್ಬದ, ಉತ್ತಮ ಕನ್ನಡ ಸಾಹಿತ್ಯ ಕೃತಿಗಳಗೆ ಯಾವುದೇ ಜಾತಿ-ಕುಲ-ಗೋತ್ರ ಹಾಗೂ ಕಟ್ಟು ಪಾಡುಗಳಿಲ್ಲ. ಇಂಥ ಸಾಹಿತ್ಯದಿಂದ ಸಮಾಜದ ಅಂಕು- ಡೊಂಕು, ಸಮಸ್ಯೆ ತಿದ್ದುವ ಕೆಲಸ ಆಗಬೇಕು.
ಉದಾರೀಕರಣ, ಆಧುನಿಕರಣ ಭರಾಟೆಯಲ್ಲಿ ಕನ್ನಡಕ್ಕೆ ಆಗುವ ಅನ್ಯಾಯ ತಡೆಯಬೇಕು ಎಂದರು. ಒಂದು ಕಾಲದಲ್ಲಿ ಸಾಹಿತ್ಯ ಕೇವಲ ಮನರಂಜನೆ ಆಗಿತ್ತು. ಇದೀಗ ಸಾಹಿತಿಗಳ ಸಂಖ್ಯೆ ಹೆಚ್ಚಿದರೆ ಸಾಲದು. ಸ್ವಂತಿಕೆ, ಸತ್ವ, ಜೀವನ ಮೌಲ್ಯಗಳನ್ನು, ಹೆಚ್ಚಿಸಬೇಕು. ಸಮಾಜ ಅಂಕು ಡೊಂಕು ತಿದ್ದುವ ನಿಟ್ಟಿನಲ್ಲಿ ಸಾಹಿತ್ಯ ಕೆಲಸ ಮಾಡಬೇಕು.
ಮನರಂಜನೆಯ ಜೊತೆಗೆ ಈಗ ಶಿಕ್ಷಣ ಅದು ಮೌಲಿಕ ಶಿಕ್ಷಣ ಜ್ಞಾನ ನೀಡುವಲ್ಲಿ ಸಾಹಿತ್ಯ ಕೆಲಸ ಮಾಡಬೇಕು. ಇದರಿಂದ ಓರ್ವ ಸಾಹಿತಿ, ವೈಚಾರಿಕ, ಮನಸ್ಸು ಮಾಡಿದರೆ ಅಲ್ಪವಾದರೂ ಸಮಾಜ ತಿದ್ದಬಹುದು ಎಂದರು. ಕಸಾಪ ಧ್ವಜ ಹಸ್ತಾಂತರಿಸಿದ ಹಿಂದಿನ ಸಮ್ಮೇಳನಾಧ್ಯಕ್ಷ ಡಾ|ರಾಜೇಂದ್ರ ಚೆನ್ನಿ ಮಾತನಾಡಿ, ಸಮುದಾಯದ ಸಂಕಷ್ಟಗಳು ಕನ್ನಡ ವ್ಯಾಪ್ತಿಯಲ್ಲಿ ಮೂಡ ಬರಬೇಕಿದೆ.
ಜನಪರ ಸಂಸ್ಕೃತಿ ಮಾಧ್ಯಮ ಕಾಣೆಯಾಗಿ, ಜನಪ್ರಿಯ ಮಾಧ್ಯಮ ಪ್ರಭಾವಗಳು ಅಪಪ್ರಚಾರ ನಡೆಸಿವೆ. ಕಲಬುರ್ಗಿ ಹತ್ಯೆಯಲ್ಲಿ ಮಾಧ್ಯಮದ ಪಾತ್ರವಿದೆ ಎಂಬ ನೋವು ವ್ಯಕ್ತಪಡಿಸಿದ ಅವರು, ಪ್ರಭುತ್ವದ ಬೆದರಿಕೆಗೆ ವಿಚಲಿತರಾಗದೆ ನೈತಿಕ ಶಕ್ತಿ ಹೆಚ್ಚಿಸಿಕೊಳ್ಳಬೇಕು. ಅಂದಾಗ ಕಲ್ಯಾಣ ಸಮಾಜ ಕಟ್ಟಬಹುದು ಎಂದರು.
ಐರ”ಸಂಗ’ ಕವಿ: ಅಧ್ಯಕ್ಷತೆ ವಹಿಸಿದ್ದ ಕವಿ ಡಾ| ಸಿದ್ಧಲಿಂಗ ಪಟ್ಟಣಶೆಟ್ಟಿ ಮಾತನಾಡಿ, ಕೌತಕ ಮೂಡಿಸುವುದು ಕವಿಯ ಕೆಲಸ. ಅದು ಕವಿಯ ನಿತ್ಯದ ಕಾಯಕವಾಗಬೇಕು. ಇದನ್ನು ಉಳಿಸಿಕೊಂಡಿದ್ದು,ಕೆ.ಎಸ್.ನರಸಿಂಹಸ್ವಾಮಿ ಬಿಟ್ಟರೆ, ವಿ.ಸಿ.ಐರಸಿಂಗ ಅವರು ಮಾತ್ರ.
ಬಾನುಲಿ ಕವಿಯಾದ ಇವರು, 87ರ ಚಿರಯುವಕ. ಇಂಥ ಇಳಿ ವಯಸ್ಸಿನಲ್ಲಿ ಪ್ರೇಮ ಕತೆಗಳನ್ನು ಬರೆಯುವ ಅವರ ಅಭಿರುಚಿ ಭತ್ತಲಾರದಜೀವಸೆಲೆ.ಇಂಥ ವ್ಯಕ್ತಿಯ ಸರಳತೆ ಅಳವಡಿಸಿಕೊಳ್ಳಬೇಕು ಎಂದರು. ಇದಕ್ಕೂ ಮುನ್ನ ಕಸಾಪದ ನೂತನ ಕಟ್ಟಡವನ್ನು ಸಚಿವ ವಿನಯ ಕುಲಕರ್ಣಿ ಉದ್ಘಾಟಿಸಿದರು. ಈ ವೇಳೆ ಬಯಲು ರಂಗಮಂದಿರಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು.
ಸಾಹಿತಿಗಳಾದ ರಾಘವೇಂದ್ರ ಪಾಟೀಲ, ಡಾ|ಮಲ್ಲಿಕಾರ್ಜುನ ಹಿರೇಮಠ, ಡಾ| ಎಚ್.ಎಂ. ಬಿಳಗಿ, ಕಸಾಪ ಜಿಲ್ಲಾಧ್ಯಕ್ಷ ಡಾ|ಲಿಂಗರಾಜ ಅಂಗಡಿ, ಪೊÅ|ಕೆ. ಎಸ್.ಕೌಜಲಗಿ, ಡಾ|ಜಿನದತ್ತ ಹಡಗಲಿ, ಪೊÅ|ಎಸ್.ಎಸ್ .ದೊಡಮನಿ ಇದ್ದರು. ನಂತರ ವೀರೇಶ ಬಡಿಗೇರ ಸಂಗಡಿಗರಿಂದ ತತ್ವಪದ ಹಾಗೂ ಲಾವಣಿ ಪದಗಳ ಕಾರ್ಯಕ್ರಮ ನಡೆದವು.