Advertisement

ಹೈಟೆಕ್‌ ಆ್ಯಂಬುಲೆನ್ಸ್‌  ಸೇವೆಗೆ ಚಾಲನೆ

07:30 AM Aug 11, 2017 | Team Udayavani |

ಮಡಿಕೇರಿ: ನಗರದ ಜಿಲ್ಲಾ ಆಸ್ಪತ್ರೆ ಅತ್ಯಾಧುನಿಕ ಸಲಕರಣೆಗಳನ್ನು ಹೊಂದಿದ್ದು, ಬಡ ರೋಗಿಗಳಿಗೆ ತುರ್ತು ಸೇವೆ ನೀಡಲು ವೈದ್ಯರು ಹಾಗೂ ಸಿಬಂದಿ ಸದಾ ಸಿದ್ಧರಿರಬೇಕು ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್‌ ಕರೆ ನೀಡಿದ್ದಾರೆ. ನಗರದ ಜಿಲ್ಲಾ ಆಸ್ಪತ್ರೆಯ ಅಪಘಾತ ಮತ್ತು ತುರ್ತು ವಿಭಾಗದ ಮುಂಭಾಗದಲ್ಲಿ ಹೈಟೆಕ್‌ ಆ್ಯಂಬುಲೆನ್ಸ್‌ ಸೇವೆಗೆ ಶಾಸಕರು ಚಾಲನೆ ನೀಡಿ ಮಾತನಾಡಿದರು. 

Advertisement

ಅನಂತರ ಮಾತನಾಡಿದ ಶಾಸಕರು ಜಿಲ್ಲಾ ಆಸ್ಪತ್ರೆ ಅತ್ಯಾಧುನಿಕ ಸಲಕರಣೆಗಳನ್ನು ಒಳಗೊಂಡಿದ್ದು, ತುರ್ತು ಸೇವೆಗಳು ಬಡಜನರಿಗೆ ತಲುಪಿಸುವ ಉದ್ದೇಶದಿಂದ ಶಾಸಕರ ಅನುದಾನದಡಿ ಹೈಟೆಕ್‌ ಆ್ಯಂಬುಲೆನ್ಸ್‌ ಒದಗಿಸಲಾಗಿದೆ. ಇದರಲ್ಲಿ ಎಲ್ಲÉ ಸೌಲಭ್ಯಗಳು ಒಳಗೊಂಡಿವೆ.  ಶಾಸಕರ ಅನುದಾನದಡಿ 29 ಲಕ್ಷ ರೂ. ಒದಗಿಸಲಾಗಿದೆ ಎಂದರು. 

ಜಿಲ್ಲಾಧಿಕಾರಿ ಡಾ| ರಿಚರ್ಡ್‌ ವಿನ್ಸೆಂಟ್‌ ಡಿ’ಸೋಜಾ, ಅಪರ ಜಿಲ್ಲಾಧಿಕಾರಿ ಎಂ. ಸತೀಶ್‌ ಕುಮಾರ್‌, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡೀನ್‌ ಡಾ| ಮಹೇಂದ್ರ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ| ಅಬ್ದುಲ್‌ ಅಜೀಜ್‌, ವೈದ್ಯಕೀಯ ಸಿಬಂದಿ ಇತರರು ಪಾಲ್ಗೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next