Advertisement
ಉಡುಪಿ/ಮಂಗಳೂರು: ಕರಾವಳಿ ಯಲ್ಲಿ ಈಗಾಗಲೇ ಮಳೆ ಆರಂಭವಾಗಿರು ವುದಿಂದ ದ.ಕ., ಉಡುಪಿ ಜಿಲ್ಲೆಯ ಕೆಲವೆಡೆ ಕೃಷಿ ಚಟುವಟಿಕೆಗೆ ಚಾಲನೆ ಸಿಕ್ಕಿದೆ. ಈಗಾಗಲೇ ಕೆಲವೆಡೆ ನೇಜಿ ತಯಾರಿ ನಡೆದಿದೆ. ಒಂದೆರಡು ದಿನಗಳಲ್ಲಿ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜದ ವಿತರಣೆ ಪ್ರಕ್ರಿಯೆ ಆರಂಭವಾಗಲಿದೆ.
Related Articles
ಬಿತ್ತನೆ ಬೀಜ ಎಲ್ಲರಿಗೂ ನೀಡಲಾಗುತ್ತದೆ. ಆದರೆ ಮೊದಲು ಹೊಸಬರಿಗೆ ಆದ್ಯತೆ ಇರುತ್ತದೆ. ಒಮ್ಮೆ ಬೀಜ ತೆಗೆದುಕೊಂಡರೆ ಮೂರು ವರ್ಷ ಬಳಕೆ ಮಾಡಬಹುದು. ಮೂರು ವರ್ಷಕ್ಕೊಮ್ಮೆ ಬದಲಾವಣೆ ಮಾಡಬಹುದಾಗಿದೆ. ಜತೆಗೆ ಪ್ರತಿ ವರ್ಷ ಶೇ. 38ರಷ್ಟು ಬದಲಾವಣೆಗೆ ಅವಕಾಶ ಇರುತ್ತದೆ. ಈಗಾಗಲೇ ಬೀಜ ಪಡೆದವರಿಗೆ ಕಡ್ಡಾಯವಾಗಿ ನೀಡುವುದಿಲ್ಲ ಎಂಬ ಯಾವ ನಿಯಮವೂ ಇಲ್ಲ. ಲಭ್ಯವಿರುವ ಬೀಜದಲ್ಲಿ ಹೊಂದಿಸಿ ನೀಡಲಿದ್ದೇವೆ ಎಂದರು.
Advertisement
ಗುರಿ ಹೆಚ್ಚಳಜಿಲ್ಲೆಯಲ್ಲಿ ಮುಂಗಾರು ಅವಧಿಯಲ್ಲಿ ಸರಾಸರಿ 36 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗುತ್ತಿತ್ತು. ಕಳೆದ ವರ್ಷ 37,290 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಈ ವರ್ಷ 38 ಸಾವಿರ ಗುರಿ ಇಟ್ಟುಕೊಂಡಿದ್ದೇವೆ. ಒಟ್ಟಾರೆಯಾಗಿ ಕಳೆದ ಎರಡು ವರ್ಷದಲ್ಲಿ ಎರಡು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹೆಚ್ಚುವರಿಯಾಗಿ ಬಿತ್ತನೆಯಾಗಿದೆ ಎಂದು ಅಧಿಕಾರಿಯೊಬ್ಬರು ವಿವರಿಸಿದರು. ದ.ಕ.: 9,435 ಹೆಕ್ಟೇರ್ ಭತ್ತದ ಕೃಷಿ ಗುರಿ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಧಾನಕ್ಕೆ ಕೃಷಿ ಕಾರ್ಯ ಆರಂಭವಾಗುತ್ತಿದೆ. ನೇರ ಬಿತ್ತನೆ ಕಾರ್ಯ ಮಳೆಗಾಲ ಆರಂಭಗೊಂಡ ಅನಂತರವೇ ಇಲ್ಲಿ ಶುರುವಾಗುವ ಸಾಧ್ಯತೆ ಇದೆ. ಕೃಷಿ ಇಲಾಖೆಯವರು ಈ ವರ್ಷ 9,435 ಹೆಕ್ಟೇರ್ ಗದ್ದೆಯಲ್ಲಿ ಭತ್ತದ ಕೃಷಿ ಕೈಗೊಳ್ಳುವ ಗುರಿ ಇರಿಸಿಕೊಂಡಿದ್ದಾರೆ. ಪ್ರಸ್ತುತ 833 ಕ್ವಿಂಟಾಲ್ ಭತ್ತದ ಬೀಜಕ್ಕೆ ಇಂಡೆಂಟ್ ಬಂದಿದೆ. ಜಿಲ್ಲೆಯಲ್ಲಿ 3297.95 ಮೆಟ್ರಿಕ್ ಟನ್ ರಸಗೊಬ್ಬರದ ದಾಸ್ತಾನು ಲಭ್ಯವಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ. ಯಂತ್ರಶ್ರೀ ಕೃಷಿ ಕ್ರಾಂತಿ
ಭತ್ತದ ಕೃಷಿಯಲ್ಲಿ ಕ್ರಾಂತಿ ಮಾಡುವ ಉದ್ದೇಶದಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಯಂತ್ರಶ್ರೀ ಕಾರ್ಯಕ್ರಮವನ್ನು ಕಳೆದ 3 ವರ್ಷಗಳಿಂದ ಮಾಡುತ್ತಿದ್ದು, ಪ್ರಸ್ತುತ ಸಾಲಿನಲ್ಲಿ ಕುಂದಾಪುರದಾದ್ಯಂತ 1,000 ಎಕರೆ ಗುರಿಯನ್ನು ನಿಗದಿಗೊಳಿಸಿದೆ. ಯಂತ್ರಶ್ರೀ ಕಾರ್ಯಕ್ರಮದ ಭಾಗವಾಗಿ ಈಗ ಕಾಳಾವರದಲ್ಲಿ ಕೃಷಿಕರಾದ ಸುಜಿತ್ ಕುಮಾರ್ ಶೆಟ್ಟಿ ಅವರ ನೇತೃತ್ವದಲ್ಲಿ 309 ಎಕರೆ ಭತ್ತದ ನರ್ಸರಿ ಹಾಗೂ ಬೆಳ್ವೆಯಲ್ಲಿ ಕೃಷ್ಣ ನಾಯ್ಕ ಅವರ ನೇತೃತ್ವದಲ್ಲಿ 100 ಎಕರೆಗೆ ಬೇಕಾಗುವ ಸಸಿಮಡಿಗೆ ಮಣ್ಣು ತಯಾರಿ/ಬೀಜ ಸಂಗ್ರಹಿಸಲಾಗಿದೆ. ಈ ಬಗ್ಗೆ ಈಗಾಗಲೇ ಯೋಜನೆಯಿಂದ ಬೇರೆ – ಬೇರೆ ಭಾಗದ ರೈತರಿಗೆ ಮಾಹಿತಿ ನೀಡಲಾಗಿದೆ. ಬಿತ್ತನೆ ಬೀಜ ಖರೀದಿ, ಹಸಿರೆಲೆ ಗೊಬ್ಬರ ಬಳಕೆ, ಗದ್ದೆ ಉಳುಮೆ ಬಗ್ಗೆ ಮಾಹಿತಿ ನೀಡಲಾಗಿದೆ. ಪ್ರಸ್ತುತ ಎರಡು ನರ್ಸರಿಗಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯಂತ್ರಶ್ರೀ ಕಾರ್ಯಕ್ರಮದ ಮಾರ್ಗದರ್ಶನದಲ್ಲಿ ಮಾಡುತ್ತಿದ್ದು, ಆಸಕ್ತ ರೈತರು ಈ ಬಗ್ಗೆ ಅವರನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು.