Advertisement

ಕರಾಯ: ಸ್ಥಳೀಯಾಡಳಿತದಿಂದ ಕುಡಿಯುವ ನೀರಿನ ವ್ಯವಸ್ಥೆ

10:27 PM Apr 08, 2019 | mahesh |

ಉಪ್ಪಿನಂಗಡಿ: ಕರಾಯ ಗ್ರಾಮದ ಪಡಾಯಿಬೆಟ್ಟುವಿನಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಮೂಲ ಸೌಕರ್ಯದಡಿ ಸ್ಥಳೀಯ ಆಡಳಿತವು ಪರ್ಯಾಯ ವ್ಯವಸ್ಥೆ ಮಾಡಿದೆ.

Advertisement

ಇಲ್ಲಿನ ಸಮಸ್ಯೆಗಳ ಕುರಿತು ನಾಲ್ಕು ದಿನಗಳ ಹಿಂದೆ “ಉದಯವಾಣಿ’ ಸುದಿನ ಸಚಿತ್ರ ವರದಿಯನ್ನು ಪ್ರಕಟಿಸಿತ್ತು. ಇದನ್ನು ಮನಗಂಡ ಪಂಚಾಯತ್‌ ತತ್‌ಕ್ಷಣವೇ ಸ್ಪಂದಿಸಿದೆ. ಗ್ರಾಹಕರ ಬೇಡಿಕೆಗೆ ತುರ್ಕಳಿಕೆ ಭಾಗದ ಸಂಪರ್ಕವನ್ನು ಜೋಡಣೆಗೈಯುವ ಮೂಲಕ ಕುಡಿಯುವ ನೀರು ಒದಗಿಸುವಲ್ಲಿ ಹರಸಾಹಸ ಪಡಬೇಕಾಯಿತು ಎಂದು ಅಯೂಬ್‌ ಡಿ.ಕೆ. ತಿಳಿಸಿದ್ದಾರೆ.

ಪಂಚಾಯತ್‌ ಅಧ್ಯಕ್ಷ ಜಯವಿಕ್ರಮ ಕಲ್ಲಾಪು ಅವರು ಪ್ರತಿಕ್ರಿಯಿಸಿ, ಇಲ್ಲಿ ವಾಸವಾಗಿರುವ ಪರಿಶಿಷ್ಟ ಜಾತಿ ವರ್ಗದ ಗ್ರಾಹಕರಿಗೆ ಸಮಾಜ ಕಲ್ಯಾಣ ಇಲಾಖೆಯ ಗಂಗಾ ಕಲ್ಯಾಣ ಕೊಳವೆ ಬಾವಿ ಪ್ರತ್ಯೇಕವಾಗಿದ್ದು, ಬಾವಿಯಲ್ಲಿ ನೀರು ಕಡಿಮೆಯಾಗಿದೆ. ಈ ಬಗ್ಗೆ ಆಯಾ ಇಲಾಖೆಗೆ ದೂರು ಸಲ್ಲಿಸಬೇಕಾಗಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next