Advertisement
ಪಟ್ಟಣದ 20ನೇ ವಾರ್ಡ್‌ನ ಕೆಆರ್‌ಎಸ್ ಆಗ್ರಹಾರದ ಸರ್ಕಾರಿ ಬಾಲಕರ ವಿದ್ಯಾರ್ಥಿ ನಿಲಯದಿಂದ ಐಡಿಬಿಐ ಬ್ಯಾಂಕ್ ಬಿಎಂರಸ್ತೆ ವರೆಗೆ ಪೈಪ್‌ಲೈನ್ ಹಾಳಾಗಿ ಈ ಭಾಗದ ಜನರ ಕುಡಿಯುವ ನೀರಿಗೆ ತೀವ್ರ ತೊಂದರೆ ಉಂಟಾಗಿತ್ತು. ಈ ಸಂಬಂಧ ಸ್ಥಳೀಯರು ಹಲವು ಭಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿರಲಿಲ್ಲ. ಸದಸ್ಯ ಆನಂದ್‌ಕುಮಾರ್ ತಮ್ಮ ಸ್ವಂತ ಹಣ 18 ಸಾವಿರ ರೂ ವಿನಿಯೋಗಿಸಿ ಪೈಪ್ ಲೈನ್ ದುರಸ್ತಿ ಕಾಮಗಾರಿ ಮಾಡಿಸಿ ಈ ಭಾಗದ ಜನರ ಕುಡಿಯುವ ನೀರಿನ ವ್ಯವಸ್ಥೆ ಮಾಡಿ ಜನರ ಮೆಚ್ಚಿಗೆಗೆ ಪಾತ್ರರಾಗಿದ್ದಾರೆ.
ಸಾರ್ವಜನಿಕರ ಕುಡಿವ ನೀರಿನ ವ್ಯವಸ್ಥೆ ಮಾಡುವಂತೆ ಪುರಸಭಾ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಇದರ ಬಗ್ಗೆ ಅಧಿಕಾರಿಗಳು ಬೇಜವಾಬ್ದಾರಿ ತಾಳಿದ ಪರಿಣಾಮ ಜನರು ನೀರಿಗಾಗಿ ಪರದಾಡಿದರು. ಕೊನೆಗೆ ನನ್ನ ಸ್ವಂತ ಖರ್ಚಿನಿಂದ ಸುಮಾರು 120 ಅಡಿಗೂ ಅಧಿಕ ಪೈಪ್ ಲೈನ್ ಕಾಮಗಾರಿ ಮಾಡಿಸಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.