Advertisement

Waqf Property: ಆಡು ಮುಟ್ಟದ ಸೊಪ್ಪಿಲ್ಲ, ವಕ್ಫ್‌ ಮುಟ್ಟದ ಸ್ವತ್ತಿಲ್ಲ: ತೇಜಸ್ವಿ ಸೂರ್ಯ

10:33 PM Nov 07, 2024 | Team Udayavani |

ಬೆಳಗಾವಿ: ಆಡು ಮುಟ್ಟದ ಸೊಪ್ಪಿಲ್ಲ, ವಕ್ಫ್‌ ಮುಟ್ಟದ ಸ್ವತ್ತಿಲ್ಲ. ಇದು ಕರ್ನಾಟಕದಲ್ಲಿ ಇರುವ ಹೊಸ ಗಾದೆ ಮಾತು ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಹೇಳಿದರು.

Advertisement

ಸುದ್ದಿಗಾರರ ಜತೆ ಗುರುವಾರ ಮಾತನಾಡಿ, ರಾಜ್ಯದಲ್ಲಿ ಈಗ ಎಲ್ಲಿ ನೋಡಿದರೂ ಇದು ವಕ್ಫ್‌  ಆಸ್ತಿ ಎನ್ನುತ್ತಿದ್ದಾರೆ. ಇದರಿಂದ ಜನರು ಆತಂಕಗೊಂಡಿದ್ದಾರೆ. ಗ್ರಾಮೀಣ ಪ್ರದೇಶದ ಜನರು, ವಿಶೇಷವಾಗಿ ರೈತರು ಬಹಳ ಹೆದರಿದ್ದಾರೆ. ಇದು ಸರ್ಕಾರಕ್ಕೆ ಕಾಣಿಸುತ್ತಿಲ್ಲವೇ ಎಂದು ಪ್ರಶ್ನಿಸಿದರು.

ಕರ್ನಾಟಕದಲ್ಲಿ ಒಂದು ಲಕ್ಷ ವಕ್ಪ್ ಎಕರೆಗೂ ಅಧಿಕ ಆಸ್ತಿ ಇದೆ. ಅದರಲ್ಲಿ 23 ಸಾವಿರ ಎಕರೆ ಮಾತ್ರ ನಮ್ಮ ಕೈಯಲ್ಲಿ ಇದೆ. ಉಳಿದ ಆಸ್ತಿ ಅತಿಕ್ರಮಣ ಆಗಿದೆ ಎಂದು ಹೇಳುತ್ತಾರೆ. ಅದೇ ರೀತಿ ಮುಜರಾಯಿ ಇಲಾಖೆಯಲ್ಲೂ ಅತಿಕ್ರಮಣ ಆಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ಪ್ರತಿಶತ 80ರಷ್ಟು ಮಂದಿ ಇರುವ ಜನರ ಬಳಿ 30 ಸಾವಿರ ಎಕರೆ ಆಸ್ತಿ ಇದೆ. ಆದರೆ ಶೇ. 15ರಷ್ಟು ಇರುವ ಜನರ ಬಳಿ ಒಂದು ಲಕ್ಷ ಆಸ್ತಿ ಇರಲು ಸಾಧ್ಯವೇ?. ಸಾವಿರಾರು ವರ್ಷಗಳಿಂದ ಮಂದಿರ, ಮಠಗಳು ನಡೆದುಕೊಂಡು ಬಂದಿವೆ. ಇವೆಲ್ಲ ವಕ್ಪ್ ಆಸ್ತಿ ಎಂದರೆ ಹೇಗೆ ಎಂದು ಪ್ರಶ್ನಿಸಿದರು

Advertisement

Udayavani is now on Telegram. Click here to join our channel and stay updated with the latest news.

Next