Advertisement

ಫ‌ುಟ್‌ಪಾತ್‌ ಕಾಮಗಾರಿಯಿಂದ ಪೋಲಾಗುತ್ತಿದೆ ಕುಡಿವ ನೀರು

02:55 PM Nov 18, 2021 | Shwetha M |

ಇಂಡಿ: ಇಂಡಿ ಪಟ್ಟಣದ ನಾಗರಿಕರ ಅನುಕೂಲಕ್ಕಾಗಿ ಶಾಸಕ ಯಶವಂತರಾಯಗೌಡ ಪಾಟೀಲರ ಪರಿಶ್ರಮದಿಂದ ನಗರದಲ್ಲಿ 24×7 ಶುದ್ಧ ಕುಡಿಯವ ನೀರಿನ ಸೌಲಭ್ಯ ಕಲ್ಪಿಸಲಾಗಿದೆ.

Advertisement

ಕಳೆದ ಒಂದು ವರ್ಷಗಳಿಂದ 24×7 ನಲ್ಲಿ ನೀರು ಸರಬರಾಜು ಮಾಡುಲಾಗುತ್ತಿದೆ. ಪಟ್ಟಣದ ಬಸವೇಶ್ವರ ವೃತ್ತದಿಂದ ಸಿಂದಗಿ ರಸ್ತೆಯ ಶಾಂತೇಶ್ವರ ಮಂಗಲ ಕಾರ್ಯಾಲಯದವರೆಗಿನ ಮನೆಗಳಿಗೆ ಕೊಟ್ಟಿರುವ ನಲ್ಲಿಗಳು ಫುಟ್‌ಪಾತ್‌ ಮಾಡುವಾಗ ಹಾಳಾಗಿವೆ. ಹಾಳಾಗಿರುವ ನಲ್ಲಿಗಳಗೆ ಕಳೆದ ಒಂದು ವರ್ಷದಿಂದಲೂ ಮೀಟರ್‌ ಮತ್ತು ಟ್ಯಾಪ್‌ ಅಳವಡಿಸಿಲ್ಲ. ಇದರಿಂದ ನೀರು ಪಡೆಯುತ್ತಿರುವ ಗ್ರಾಹಕರಿಂದ ಬಿಲ್‌ ವಸೂಲಿ ಮಾಡುತ್ತಿಲ್ಲ ಮತ್ತು ಟ್ಯಾಪ್‌ ಇಲ್ಲದ ಕಾರಣ ನಲ್ಲಿಗಳಲ್ಲಿ ವ್ಯರ್ಥವಾಗಿ ನೀರು ಹರಿದು ಹೋಗುತ್ತಿದೆ. ಈ ಬಗ್ಗೆ ಸಂಬಂಧ ಪಟ್ಟವರಿಗೆ ವಿಚಾರಿಸಿದರೆ ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ಪುರಸಭೆ ಸದಸ್ಯ ಅನಿಲಗೌಡ ಬಿರಾದಾರ ಆರೋಪಿಸಿದ್ದಾರೆ.

ಕಳೆದ ಒಂದು ವರ್ಷದಿಂದ ನಲ್ಲಿ ನೀರಿಗೆ ಬಿಲ್‌ ಇಲ್ಲದಿರುವುದರಿಂದ ಪ್ರತಿ ತಿಂಗಳು ಸುಮಾರು 27 ಸಾವಿರ ರೂ., ಪುರಸಭೆಗೆ ಹಾನಿಯಾಗುತ್ತಿದೆ. ಈ ಹಾನಿಯನ್ನು ಯಾರು ಭರಿಸುತ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನೂ ಮೇಲಾದರು ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನ ನೀಡಿ ವ್ಯರ್ಥವಾಗಿ ಹರಿದು ಹೋಗುತ್ತಿರುವ ನಲ್ಲಿ ನೀರನ್ನು ತಡೆಯಬೇಕು ಮತ್ತು ನಲ್ಲಿಗಳಿಗೆ ಮೀಟರ್‌ ಅಳವಡಿಸಿ ನೀರು ಪಡೆಯುತ್ತಿರುವ ನಾಗರಿಕರಿಗೆ ಬಿಲ್‌ ಪಾವತಿಸುವಂತೆ ಸೂಚನೆ ನೀಡಬೇಕೆಂದು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next