Advertisement

ಶಿವಪಾಡಿಯಲ್ಲಿ ಶಿವ ಚಿತ್ತಾರ: ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ

12:37 PM Feb 01, 2023 | Team Udayavani |

ಉಡುಪಿ: ಉಡುಪಿ ತಾಲೂಕು ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ʼಶಿವಪಾಡಿಯಲ್ಲಿ ಶಿವ ಚಿತ್ತಾರʼ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗುತ್ತಿದೆ.

Advertisement

ಅತಿರುದ್ರ ಮಹಾಯಾಗ ಸಮಿತಿ ಶ್ರೀ ಕ್ಷೇತ್ರ ಶಿವಪಾಡಿ ಉಮಾಮಹೇಶ್ವರ ದೇವಸ್ಥಾನದಲ್ಲಿ ಫೆ.22 ರಿಂದ ಮಾರ್ಚ್ 5 ರವರೆಗೆ ಆಯೋಜಿಸುತ್ತಿರುವ ಅತಿರುದ್ರ ಮಹಾಯಾಗದ ಪ್ರಯುಕ್ತ ಫೆ.5 ರಂದು ಉಡುಪಿ ತಾಲೂಕು ಮಟ್ಟದ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ಈ ಸ್ಪರ್ಧೆಯು 3 ವಿಭಾಗಗಳಲ್ಲಿ ನಡೆಯುತ್ತಿದ್ದು, ಈ ವಿವರ ಇಂತಿವೆ:

ವಿಭಾಗ 1:  5 ಮತ್ತು 6ನೇ ವರ್ಗ          

ವಿಷಯ: ಐಚ್ಛಿಕ                        

Advertisement

1ನೇ ಬಹುಮಾನ 4000

2ನೇ ಬಹುಮಾನ 3000

3ನೇ ಬಹುಮಾನ 2000

ವಿಭಾಗ 2:  7 ಮತ್ತು 8 ವರ್ಗ

ವಿಷಯ: ಐಚ್ಛಿಕ

1ನೇ ಬಹುಮಾನ 5000

2ನೇ ಬಹುಮಾನ 4000

3ನೇ ಬಹುಮಾನ 3000

ವಿಭಾಗ 3: 9 ಮತ್ತು 10ನೇ ವರ್ಗ

ವಿಷಯ: ತಾಂಡವ ಶಿವ / ಶಾಂತ ಶಿವ / ರುದ್ರ ಶಿವ

1ನೇ ಬಹುಮಾನ 6000

2ನೇ ಬಹುಮಾನ 5000

3ನೇ ಬಹುಮಾನ 4000

ಪ್ರತಿ ವಿಭಾಗದಲ್ಲಿ 3 ನಗದು ಬಹುಮಾನ ಮತ್ತು 10 ಸಮಾಧಾನಕರ ಬಹುಮಾನಗಳಿವೆ.

ಸ್ಪರ್ಧಿಗಳಿಗಿರುವ ನಿಯಮಗಳು ಇಂತಿವೆ:

ಸ್ಪರ್ಧಿಗಳು ಬಳಪ, ಸ್ಕೆಚ್ ಪೆನ್, ವಾಟರ್ ಕಲರ್ ಇತ್ಯಾದಿಗಳನ್ನು ಬಳಸಬಹುದು. ಡ್ರಾಯಿಂಗ್ ಶೀಟ್ ಅನ್ನು ಸ್ಥಳದಲ್ಲೇ ನೀಡಲಾಗುವುದು.

ಬೆಳಿಗ್ಗೆ 9-9.30 ರೊಳಗೆ ಸ್ಪರ್ಧಿಗಳು ನೋಂದಣಿ ಮಾಡಿಕೊಳ್ಳಬೇಕು.

ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.

ಫಲಿತಾಂಶಗಳನ್ನು ತಕ್ಷಣವೇ ಪ್ರಕಟಿಸಲಾಗುವುದು ಮತ್ತು ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಗುವುದು.

ಭಾಗವಹಿಸುವ ಎಲ್ಲರಿಗೂ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ.

ಎಲ್ಲರಿಗೂ ಊಟದ ಮತ್ತು ಉಪಹಾರದ ವ್ಯವಸ್ಥೆ ಮಾಡಲಾಗುವುದು.

ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಲು ಮತ್ತು ಮಾಹಿತಿಗಾಗಿ ಸಂಘಟಕರನ್ನು ಸಂಪರ್ಕಿಸಲು ಅಧ್ಯಕ್ಷ ಕೆ. ರಘುಪತಿ ಭಟ್, ಮಹೇಶ್ ಠಾಕೂರ್ ಸೂಚಿಸಿದ್ದಾರೆ.

ಸಂಚಾಲಕರ ದೂರವಾಣಿ ಸಂಖ್ಯೆ ಈ ಕೆಳಗಿನಂತಿವೆ:

ರಶ್ಮಿತಾ ಬಾಲಕೃಷ್ಣ ಹೆಗ್ಡೆ:  9110831417

ಸುಚೇತಾ ನಾಯಕ್:  9611800009

ಆಶಾ ಪಾಟೀಲ್:  9900405740

Advertisement

Udayavani is now on Telegram. Click here to join our channel and stay updated with the latest news.

Next