Advertisement
ಒಂದೇ ಬದಿ ಚರಂಡಿಪುರಸಭೆಯ ಕಂದಾಯ ವಾರ್ಡ್ 5 ಹಾಗೂ ಜನಪ್ರತಿನಿಧಿ ವಾರ್ಡ್ 10ನ್ನು ಉದಯವಾಣಿ ಮಳೆಗಾಲದ ಸಿದ್ಧತೆ ವೀಕ್ಷಣೆಗೆ ಆಯ್ಕೆ ಮಾಡಲಾಗಿತ್ತು. ಚರ್ಚ್ ಕ್ರಾಸ್‌ನಿಂದ ಆರಂಭವಾಗುತ್ತದೆ. ಇಲ್ಲಿನ ಮುಖ್ಯರಸ್ತೆಯ ಪಾರಿಜಾತ ಸರ್ಕಲ್ ನ ಚರ್ಚ್ ರಸ್ತೆಯಿಂದ ಬರೆಕಟ್ಟೆವರೆಗೆ ಈ ವಾರ್ಡ್‌ನ ವ್ಯಾಪ್ತಿ ಇದೆ. ಮನೆಗಳು, ವಾಣಿಜ್ಯ ಮಳಿಗೆಗಳು ಎಲ್ಲ ಇವೆ. ಆದರೆ ಚರಂಡಿ ಮಾತ್ರ ಒಂದೇ ಬದಿ ಇದೆ. ಆದರೆ ಈವರೆಗೆ ಅಂತಹ ದೊಡ್ಡ ಪ್ರಮಾಣದ ಸಮಸ್ಯೆ ಆಗಿಲ್ಲ.
ಮಳೆಗಾಲ ಆರಂಭವಾಗುವ ಮುನ್ನ ನಡೆಸಬೇಕಿದ್ದ ಕಾಮಗಾರಿಯನ್ನು ಮಳೆ ಆರಂಭವಾದ ಬಳಿಕ ಮಾಡಲಾಗಿದೆ. ಇಷ್ಟಾದರೂ ಆಗಿದೆ ಎಂಬ ಸಮಾಧಾನ ಇಲ್ಲಿನ ಜನರದ್ದು. ಚರಂಡಿ ಕಾಮಗಾರಿಗಾಗಿ 12 ಲಕ್ಷ ರೂ. ಮಂಜೂರಾಗಿದ್ದು ಕಾಮಗಾರಿಗೆ ಚಾಲನೆ ನೀಡಲಾಗಿದೆ. ನೀರಿನ ಸಮಸ್ಯೆ ಇದೆ
ಈ ಭಾಗದಲ್ಲಿ ಒಂದಷ್ಟು ಕುಡಿಯುವ ನೀರಿನ ಸಮಸ್ಯೆ ಇದೆ. ಕುಡಿಯಲು ಪುರಸಭೆಯ ನಳ್ಳಿ ನೀರು. ಆದರೆ ಕೆಂಪು ನೀರು ಬರುತ್ತದೆ. ಇದಕ್ಕೆ ಇನ್ನೂ ಪರಿಹಾರ ಸಿಕ್ಕಿಲ್ಲ. ಕೆಲವರು ಬಾವಿ ತೋಡಲು ಯತ್ನಿಸಿದರೂ ತೈಲಮಿಶ್ರಿತ ನೀರು ಬರಲಾರಂಭಿಸಿತು. ಆದ್ದರಿಂದ ಬಾವಿಯ ಯೋಜನೆ ಕೈ ಬಿಟ್ಟಿದ್ದಾರೆ.
Related Articles
ಮಳೆಗಾಲದಲ್ಲಿ ಕಾಮಗಾರಿ ಆರಂಭಿಸುವ ಬದಲು ಮಳೆ ಆರಂಭಕ್ಕೆ ಮುನ್ನವೇ ಕಾಮಗಾರಿ ನಡೆಸಬಹುದಿತ್ತು. ಉಳಿದಂತೆ ಮಳೆಗಾಲದಲ್ಲಿ ನೀರು ನಿಲ್ಲುವ ಆತಂಕದ ಸಮಸ್ಯೆಗಳು ಇಲ್ಲಿ ಇಲ್ಲ.
– ಪ್ರವೀಣ್ ಕುಮಾರ್ ಟಿ.
Advertisement
ನೀತಿ ಸಂಹಿತೆಯ ತಡೆಚುನಾವಣಾ ನೀತಿ ಸಂಹಿತೆಯಿಂದಾಗಿ ಕಾಮಗಾರಿ ವಿಳಂಬವಾಗಿದೆ. ಆದಷ್ಟು ಶೀಘ್ರ ಕಾಮಗಾರಿ ಮುಗಿಸಿ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುವುದು.
– ರಾಜೇಶ್ ಕಾವೇರಿ, ಪುರಸಭೆ ಉಪಾಧ್ಯಕ್ಷ — ಲಕ್ಷ್ಮೀ ಮಚ್ಚಿನ