Advertisement
ಡ್ರೈನೇಜ್ ನೀರು ಇಲ್ಲಿನ ಖಾಸಗಿ ಬಸ್ ನಿಲ್ದಾಣದಿಂದ ಹಾದು ಬೋರ್ಡ್ ಸ್ಕೂಲ್‌ನ ಮುಂಭಾಗದಿಂದ ಕಿದಿಯೂರು ಹೋಟೆಲ್ ಮಾರ್ಗವಾಗಿ ಮಳೆನೀರು ಹರಿಯುವ ಚರಂಡಿಯಲ್ಲಿ ಸಾಗಿ, ಶಿರಿಬೀಡು ಇಷ್ಟಸಿದ್ದಿವಿನಾಯಕ ದೇವಸ್ಥಾನದವರೆಗೂ ಹರಿಯುತ್ತದೆ. ಕೆಲವೆಡೆ ಚರಂಡಿ ತೆರೆದುಕೊಂಡಿದ್ದು, ಗಬ್ಬುವಾಸನೆ ಹರಡಿಕೊಂಡಿದೆ.
ಈ ಚರಂಡಿ ನೀರಿನಿಂದಾಗಿ ಸುತ್ತಮುತ್ತಲಿನ 200ರಿಂದ 250 ಮನೆಗಳಿಗೆ ತೊಂದರೆಯಾಗಿದೆ ಎಂದು ಸ್ಥಳೀಯರಾದ ಸುರೇಶ್ ಶೇರಿಗಾರ್ ಅವರು ಆರೊಪಿಸಿದ್ದಾರೆ. ಈ ಹಿಂದೆ ರಾತ್ರಿ ಹೊತ್ತು ಡ್ರೈನೇಜ್ ನೀರನ್ನು ಬಿಡುತ್ತಿದ್ದರು. ಆದರೆ ಈಗ ಹಗಲಿನಲ್ಲಿಯೇ ನೀರು ಬಿಡುತ್ತಿದ್ದು, ವಾಸನೆ ಹರಡುತ್ತಿದೆ. ಈ ಬಗ್ಗೆ ಕೆಲ ತಿಂಗಳ ಹಿಂದೆ ನಗರಸಭೆಗೆ ದೂರು ನೀಡಿದ್ದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂಬುದು ಸ್ಥಳೀಯರ ಆರೋಪ. ಅನೇಕ ಬಾರಿ ಪುರಸಭೆಯ ಗಮನಕ್ಕೆ ತಂದಿದ್ದರೂ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಸಮಸ್ಯೆ ಶೀಘ್ರವಾಗಿ ಬಗೆಹರಿಯದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಶಿರಿಬೀಡು-ಬನ್ನಂಜೆ ನಿವಾಸಿಗಳು ತಿಳಿಸಿದ್ದಾರೆ.
Related Articles
Advertisement
ಬಾವಿಗಳೂ ಕಲುಷಿತಈ ಪ್ರದೇಶದಲ್ಲಿ ಒಳಚರಂಡಿಯ ತ್ಯಾಜ್ಯ ನೀರಿನ ಹರಿವಿಗೆ ವೈಜ್ಞಾನಿಕವಾದ ಸೂಕ್ತ ವ್ಯವಸ್ಥೆಯೇ ಇಲ್ಲ. ತೆರೆದ ಚರಂಡಿಯಲ್ಲಿಯೇ ತ್ಯಾಜ್ಯದ ನೀರು ಹರಿದು ಸುತ್ತಮುತ್ತಲ ಪ್ರದೇಶದಲ್ಲಿ ದುರ್ನಾತ ಬೀರಿ, ವಾತಾವರಣ ಹದಗೆಟ್ಟಿದೆ. ಪರಿಸರದಲ್ಲಿದ್ದ ಬಹುತೇಕ ಬಾವಿಗಳ ನೀರು ಕಲುಷಿತಗೊಂಡಿದೆ.
– ಮಹೇಶ ಪೂಜಾರಿ, ಬನ್ನಂಜೆ