Advertisement
ಕುಂದಾಪುರ ಪುರಸಭೆಯ ಹೆಚ್ಚಿನ ಎಲ್ಲ ವಾರ್ಡಿನ ಚರಂಡಿ ನೀರೆಲ್ಲ ಬಹುದ್ದೂರ್ ಷಾ ವಾರ್ಡಿನ ಸುಡುಗಾಡು ತೋಡಿಗೆ ಹರಿದು ಬರುತ್ತಿದ್ದು, ಈ ಬಾರಿಯೂ ಪುರಸಭೆ ಹೆಚ್ಚಿನ ಮುಂಜಾಗ್ರತೆ ವಹಿಸಿಲ್ಲ. ಈ ವ್ಯಾಪ್ತಿಯಲ್ಲಿ ಸುಮಾರು 100ಕ್ಕೂ ಹೆಚ್ಚು ಮನೆಗಳಿದ್ದು, ಮುಳುಗಡೆ ಭೀತಿ ಆವರಿಸಿದೆ.
ಸುಡುಗಾಡು ತೋಡಿನಲ್ಲಿ ಮಳೆ ನೀರು ಮಾತ್ರ ಹರಿದು ಬರುತ್ತಿಲ್ಲ, ಬದಲಾಗಿ ತ್ಯಾಜ್ಯ ನೀರು ಕೂಡ ಹರಿದು ಬರುತ್ತಿದ್ದು, ಇದರಿಂದ ಆ ತೋಡಿನಲ್ಲಿ ನೀರು ಹೋಗಲು ಜಾಗವಿಲ್ಲದೆ, ಅಲ್ಲೇ ನಿಂತು, ಸೊಳ್ಳೆ ಉತ್ಪತ್ತಿ ಕೇಂದ್ರವಾಗಿ ಮಾರ್ಪಡುವ ಸಾಧ್ಯತೆಯಿದ್ದು, ಇದರಿಂದ ಸಾಂಕ್ರಮಿಕ ರೋಗಗಳು ಕಾಣಿಸಿಕೊಳ್ಳುವ ಭೀತಿ ಇಲ್ಲಿನ ಜನರದ್ದು.
Related Articles
ಈ ವಾರ್ಡಿನಲ್ಲಿರುವ ಅನೇಕ ಚರಂಡಿಗಳಲ್ಲಿ ಸ್ವತ್ಛ ಮಾಡುವ ಕಾರ್ಯ ಇನ್ನೂ ಆಗಿಲ್ಲ. ಸ್ವಚ್ಛತಾ ಸಪ್ತಾಹದಡಿ ಅಲ್ಲಲ್ಲಿ ಕೆಲವೆಡೆ ಮಾತ್ರ ಕ್ಲೀನ್ ಮಾಡಲಾಗಿದೆ. ಮಳೆಯಿಂದಾಗಿ ಚರಂಡಿ ಸ್ವತ್ಛತಾ ಕಾರ್ಯಕ್ಕೆ ಅಡೆಚಣೆ ಉಂಟಾಗಿದೆ ಎನ್ನುವುದು ಪುರಸಭೆ ಅಧಿಕಾರಿಗಳ ವಾದ. ಇನ್ನೂ ಕೆಲವು ಕಡೆಗಳ ರಸ್ತೆಗೆ ನೀರು ಹರಿದು ಹೋಗಲು ಚರಂಡಿ ಅಥವಾ ತೋಡಿನ ವ್ಯವಸ್ಥೆಯೇ ಇಲ್ಲ. ಇದರಿಂದ ಮಳೆ ನೀರೆಲ್ಲ ರಸ್ತೆಯಲ್ಲೇ ಹರಿದು ಹೋಗುತ್ತಿದ್ದು, ಪಾದಚಾರಿಗಳಿಗೆ ನಿತ್ಯ ನೀರಾಭಿಷೇಕವಾಗುತ್ತಿದೆ.
Advertisement
ಶೀಘ್ರ ಟೆಂಡರ್ಸುಡುಗಾಡು ತೋಡಿಗೆ ಸ್ಲ್ಯಾಬ್ ನಿರ್ಮಿಸುವ ಸಂಬಂಧ ನೀತಿ ಸಂಹಿತೆ ಅಡ್ಡಿಯಾಗಿದ್ದು, ಅನುದಾನದ ಕೊರತೆಯೂ ಇತ್ತು. ಇನ್ನೆರಡು ದಿನಗಳಲ್ಲಿ ಈ ಬಗ್ಗೆ ಟೆಂಡರ್ ಕರೆದು ಕಾಮಗಾರಿ ಆರಂಭಿಸಲಾಗುವುದು.
– ಚಂದ್ರಶೇಖರ ಖಾರ್ವಿ,
ಸ್ಥಳೀಯ ವಾರ್ಡ್ ಸದಸ್ಯ ಮುಳುಗುವ ಆತಂಕ
ಈ ಪ್ರದೇಶದಲ್ಲಿರುವ ನಮ್ಮ ಮನೆಯೂ ಇನ್ನು ಒಂದೆರಡು ಮಳೆಗೆ ಮುಳುಗುತ್ತದೆ. ಇದಕ್ಕೆ ಮುಖ್ಯ ಕಾರಣ ನೀರು ಹೋಗಲು ಸರಿಯಾದ ವ್ಯವಸ್ಥೆ ಇಲ್ಲ. ಪ್ರತಿ ಬಾರಿಯೂ ಮುಳುಗುತ್ತದೆ. ಈ ಬಾರಿಯೂ ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿಲ್ಲ.
– ದೇವೇಂದ್ರ, ಸ್ಥಳೀಯರು – ಪ್ರಶಾಂತ್ ಪಾದೆ