Advertisement
ಎಂಜಿಎಂ ಕಾಲೇಜು, ಎನ್‌ಎಸ್‌ಎಸ್‌ಘಟಕ, ಮಹಾತ್ಮಾಗಾಂಧಿ ರೋವರ್ ಘಟಕ, ಕಸ್ತೂರ್ಬಾ ರೇಂಜರ್ ಘಟಕದಿಂದಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಹಮ್ಮಿಕೊಂಡಿದ್ದ “ಆರೇಂಜ್ ಈಸ್ ನಾಟ್‌ಜೆಸ್ಟ್ ಎ ಫ್ರೂಟ್ ‘ ಅಭಿನಂದನ ಸಮಾರಂಭದಲ್ಲಿ ಹರೇಕಳ ಹಾಜಬ್ಬ ಅವರನ್ನು ಸಮ್ಮಾನಿಸಲಾಯಿತು. ಆನಂತರ ವಿದ್ಯಾರ್ಥಿಗಳು ಅವರೊಂದಿಗೆ ಸಂವಾದ ನಡೆಸಿದರು.
Related Articles
Advertisement
ಸಮಾಜದ ಕಳಕಳಿಯೂ ಬೇಕುಶಿಕ್ಷಣದಿಂದ ಸಮಾಜದಲ್ಲಿ ಪರಿವರ್ತನೆ ತರಲು ಸಾಧ್ಯವಿದೆ. ಶಿಕ್ಷಣ ಪಡೆದವರಿಗೆ ಉದ್ಯೋಗಾವಕಾಶ ಕಲ್ಪಿಸುವುದು ಸರಕಾರಗಳ ಕರ್ತವ್ಯವಾಗಿದೆ. ಜನತೆಯ ಉತ್ತಮ ಆರೋಗ್ಯಕ್ಕೂ ಸಹಕಾರ ನೀಡ ಬೇಕು. ಇಲ್ಲಿ ಸಮಾಜದ ಕಳಕಳಿಯೂ ಮುಖ್ಯವಾಗಿದೆ ಎಂದು ಹೇಳಿದರು. ಜಿಲ್ಲಾಧಿಕಾರಿ ಕೂರ್ಮಾ ರಾವ್ ಮಾತನಾಡಿ, ಹಾಜಬ್ಬರು ಕಂಡಂಥ ಕನಸನ್ನು ಎಲ್ಲರ ಪಾಲ್ಗೊಳ್ಳುವಿಕೆಯ ಮೂಲಕ ನನಸು ಮಾಡುತ್ತಿದ್ದಾರೆ. ಅವರ ಸಾಧನೆ ಎಲ್ಲರಿಗೂ ಸ್ಫೂರ್ತಿ ಮತ್ತು ಪ್ರೇರಣೆಯಾಗಿದೆ ಎಂದು ಹೇಳಿದರು. ಪದವಿ ಕಾಲೇಜಿನ ಪ್ರಾಂಶುಪಾಲ ಡಾ| ದೇವಿದಾಸ್ ನಾಯ್ಕ್ , ಪಿಯು ಕಾಲೇಜಿನ ಮಾಲತಿದೇವಿ ಉಪಸ್ಥಿತರಿದ್ದರು. ಡಾ| ಗೋವಿಂದ ಪೈ ಸಂಶೋಧನ ಸಂಸ್ಥೆಯಿಂದ ಆಡಳಿತಾಧಿಕಾರಿ ಡಾ| ಜಗದೀಶ ಶೆಟ್ಟಿ ಅವರು ಸಮ್ಮಾನಿಸಿದರು. ಎನ್‌ಎಸ್‌ಎಸ್ ಯೋಜನಾಧಿಕಾರಿ ಸುಚಿತ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು. ರೋವರ್ ಸ್ಕೌಟ್ ಲೀಡರ್ ಅವಿನಾಶ್ ಆಚಾರ್ಯ ವಂದಿಸಿದರು. ವಿ.ವಿ. ಪಠ್ಯವಾಗಿರುವುದೇ ಹೆಮ್ಮೆ: ಹಾಜಬ್ಬ
ಅಕ್ಷರವೇ ಕಲಿಯದ ನಾನು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ಪಠ್ಯಪುಸ್ತಕದ ಪಾಠವಾಗಿದ್ದೇನೆ ಎಂಬುದೇ ದೊಡ್ಡ ಹೆಮ್ಮೆ. ಕುವೆಂಪು ವಿಶ್ವವಿದ್ಯಾನಿಲಯ ಬಿ.ಕಾಂ ವಿದ್ಯಾರ್ಥಿಗಳ ಕನ್ನಡ ಪಾಠದಲ್ಲಿ ನನ್ನ ಬಗ್ಗೆ ಸೇರಿಸಿತ್ತು ಎಂಬುದನ್ನು ಹಾಜಬ್ಬ ಸ್ಮರಿಸಿಕೊಂಡರು. ಶಾಲೆಯ ಬೀಗ ತೆಗೆಯುತ್ತಿದ್ದ ನನಗೆ ಪದ್ಮಶ್ರೀ ಪ್ರಶಸ್ತಿಗಾಗಿ ಕೇಂದ್ರ ಸರಕಾರದಿಂದ ಕರೆ ಬಂದಿದ್ದ ದಿನ ಮರೆಯಲು ಸಾಧ್ಯವಿಲ್ಲ. ವಿದ್ಯಾರ್ಥಿಗಳು ಕೂಡ ಚೆನ್ನಾಗಿ ಓದಿ ಸಾಧನೆ ಮಾಡಬೇಕು ಎಂದು ಕಿವಿಮಾತು ಹೇಳಿದರು. ಗಾರ್ಡ್ ಆಫ್ ಹಾನರ್
ಹರೇಕಳ ಹಾಜಬ್ಬ, ಲೋಕಾಯುಕ್ತರು, ಜಿಲ್ಲಾಧಿ ಕಾರಿ, ತಹಶೀಲ್ದಾರ್ ಪ್ರದೀಪ್ ಕುಡೇìಕರ್ ಸಹಿತವಾಗಿ ಗಣ್ಯರನ್ನು ಕಾಲೇಜಿನ ಮುಖ್ಯದ್ವಾರದಿಂದ ಎನ್‌ಸಿಸಿ ಕೆಡೆಟ್‌ಗಳು ಗಾರ್ಡ್ ಆಫ್ ಹಾನರ್ ಮೂಲಕ ವೇದಿಕೆಗೆ ಸ್ವಾಗತಿಸಿದರು.