ಕುಂದಾಪುರ: ಕಾಯಕವೇ ಕೈಲಾಸವೆಂದು ನಂಬಿದ ಡಾ| ಶಿವರಾಮ ಕಾರಂತರು ತಮ್ಮ ಜೀವಿತಾವಧಿಯ ಸಾರ್ಥಕ್ಯವನ್ನು ಕಂಡವರು ಎಂದು ಖ್ಯಾತ ಚಿಂತಕ ಜಿ. ರಾಜಶೇಖರ ಅಭಿಪ್ರಾಯಪಟ್ಟರು.
ಅವರು ಆ. 30ರಂದು ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ| ರೇಖಾ ಬನ್ನಾಡಿ ಅವರ “ಕಾರಂತ ದುಡಿಮೆ ಪ್ರಪಂಚ’ ವಿಮಶಾì ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದರು.
ಇದೊಂದು ವಿಮಶಾì ಕೃತಿಯಲ್ಲ. ಇದೊಂದು ಸಮಕಾಲೀನ ಸಾಹಿತ್ಯದ ದಿಕ್ಸೂಚಿಯಾಗಿದೆ. ಇಲ್ಲಿ ಬರುವಂತಹ ಸಂದಭೋìಚಿತ ಸಂಗತಿಗಳು, ಅದರ ನಿರ್ಧಾರ ಮತ್ತು ನಿಯಮಗಳು ಅಂತಿಮವಲ್ಲ ಎಂದು ಹೇಳಿದರು.
“ಕಾರಂತ ದುಡಿಮೆ ಪ್ರಪಂಚ’ ವಿಮಶಾì ಸಂಕಲನ ಕೃತಿಯ ಕುರಿತು ಲೇಖಕಿ ಜ್ಯೋತಿ ಚೆಳಾÂರು ಅವರು ಮಾತನಾಡಿ, ಸಾಹಿತ್ಯ, ಸಂಸ್ಕೃತಿ ಮತ್ತು ಬದುಕು ಇವುಗಳು ಒಂದನ್ನೊಂದು ಬಿಟ್ಟಿರಲು ಸಾಧ್ಯವಿಲ್ಲ. ಅವು ಈ ಕೃತಿಯಲ್ಲಿ ಹಲವು ಸಂದರ್ಭಗಳಲ್ಲಿ ಬಿಂಬಿತವಾಗಿವೆ. ತನ್ಮೂಲಕ ಹೊಸ ತಾತ್ವಿಕತೆಯನ್ನು ನಮ್ಮಲ್ಲಿ ಹುಟ್ಟುಹಾಕುತ್ತದೆ ಎಂದು ಹೇಳಿದರು.ಪ.ಪೂ. ಕಾಲೇಜಿನ ಪ್ರಾಂಶುಪಾಲರಾದ ಜಿ.ಎಂ. ಗೊಂಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪದವಿ ಕಾಲೇಜಿನ ಪ್ರಾಂಶುಪಾಲ ಡಾ| ಎನ್.ಪಿ. ನಾರಾಯಣ ಶೆಟ್ಟಿ ಉಪಸ್ಥಿತರಿದ್ದರು.
ಡಾ| ರೇಖಾ ಬನ್ನಾಡಿ ಸ್ವಾಗತಿಸಿದರು. ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ| ಅರುಣ್ ಕುಮಾರ್ ಎಸ್.ಆರ್. ವಂದಿಸಿದರು. ವಿದ್ಯಾರ್ಥಿನಿ ಮಹಾಲಕ್ಷಿ$¾à ಕಾರ್ಯಕ್ರಮ ನಿರ್ವಹಿಸಿದರು.