Advertisement

ಅ.10: ನೇರ ನಡೆ-ನುಡಿಯ ಶಿಸ್ತಿನ ಸಿಪಾಯಿ ಡಾ.ಕಾರಂತರು ಒಂದು ನೆನಪು

05:52 PM Oct 10, 2024 | Team Udayavani |

ನಮ್ಮ ಕಾರಂತರು ಅಂದ ತಕ್ಷಣವೇ ನೆನಪಾಗುವುದು ಅವರ ನೇರ ನಡೆ ನುಡಿ… ಮುಖಸ್ತುತಿ ಇಲ್ಲದ ಮಾತು..ನಾನು ಎಂಜಿಎಂ. ಕಾಲೇಜಿನಲ್ಲಿ ಇರ ಬೇಕಾದರೆ ಒಂದು ದಿನ ಮಧ್ಯಾಹ್ನ ಡಾ.ಶಿವರಾಮ ಕಾರಂತರು ನಮ್ಮ ಕಾಲೇಜಿನ ಅರ್ಥ ಶಾಸ್ತ್ರ ವಿಭಾಗದಲ್ಲಿ ಕೂತಿದ್ದರು..ನಮಸ್ತೇ ಸರ್ ಅಂದೆ ತಕ್ಷಣವೇ ಅವರು “ನೀವು ಎಲ್ಲಿಯವರು ಅಂತ ಕೇಳಿದರು..ನಾನು ಕೊಕ್ಕರ್ಣೆಯವನು ಅಂದೆ..ತಕ್ಷಣವೇ ಕಾರಂತರು..”ಸೂರಾಲಿನ ಜಾತ್ರೆ ಬಗ್ಗೆ ಮಾತನಾಡುತ್ತಾ..ನೀವೆಲ್ಲ ಸಂಜೆಯ ಹೊತ್ತಿಗೆ ಜಾತ್ರೆಗೆ ಬಂದು ಮುಖ ತೇೂರಿಸುತ್ತೀರಿ ಅಲ್ವಾ. ಕೇಳಿದರು..ನಮಗೆ ಅದು ಹೌದು ಅನ್ನಿಸಿತು..

Advertisement

ಎರಡನೇ ಬಾರಿ ನನಗೆ ಕಾರಂತರ ದರ್ಶ ನವಾಗಿದ್ದು ಅವರ ಸಾಲಿಗ್ರಾಮದ “ಸುಹಾಸ” ದಲ್ಲಿ ಮಂಗಳೂರು ವಿ.ವಿ.ಯಲ್ಲಿ ನಾನು ಸ್ನಾತಕೋತ್ತರ ಓದುತ್ತಿದ್ದ ಸಂದರ್ಭದಲ್ಲಿ ನಮ್ಮ ರಾಜಕೀಯ ಶಾಸ್ತ್ರ ವಿಭಾಗದ ಕಾರ್ಯಕ್ರಮದ ಉದ್ಘಾಟನೆಗೆ ಆಮಂತ್ರಿಸಲು ಹೇೂಗಿದ್ದೆ ..ಆಗ ಅವರು ಕೇಳಿದ್ದು ಇಷ್ಟೇ “ನೀವು ರಾಜಕೀಯದವರು ..ನಾನು ನಿಮಗ್ಯಾಕೆ ಅಂತ ಕೇಳಿದರು”..ಸರ್ ನಿಮ್ಮ ಮಾತು ರಾಜಕೀಯ ಕ್ಷೇತ್ರಕ್ಕೂ ಇಂದು ಬೇಕಾಗಿದೆ ಅಂದೆ, ತಕ್ಷಣವೇ ಅದಕ್ಕೆ ಒಪ್ಪಿ ಬಂದರು. ಅಂದು ನಮ್ಮ ವಿಭಾಗದ ಮುಖ್ಯಸ್ಥರಾಗಿದ್ದ ಪ್ರೊ.ಮಲ್ಲಯ್ಯ ನವರು ಕಾರಂತರನ್ನು ಸಂಬೋಧಿಸುವ ಸಂದರ್ಭದಲ್ಲಿ ಕಾರಂತರು ಅನ್ನುವುದನ್ನು ತಪ್ಪಿ..ನಮ್ಮ ಕಾಮತ್ ರು ಅಂದರು..ತಕ್ಷಣವೇ ಕಾರಂತರ ಮುಖ ನೇೂಡ ಬೇಕಿತ್ತು?

ಕಾರಂತರು ನಮ್ಮ ಸಮಾಜವನ್ನು ಯಥಾವತ್ತಾಗಿ ನೇೂಡಿ ಗ್ರಹಿಸಿದವರು..ಅವರ ಕೃತಿಯಲ್ಲಿ ಯಾವುದೇ ಕ್ರಾಂತಿಕಾರಿ ಪದಗಳು ಬರುವುದೇ ಇಲ್ಲ..ಅದನ್ನು ನಾವು ಚೇೂಮನ ದುಡಿಯ ನುಡಿಯಲ್ಲೂ ನೇೂಡಿದ್ದೇವೆ. ವೇದಿಕೆಯ ಕೆಳಗೆ ಸರಾಗವಾಗಿ ಕುಂದಾಪುರ ಕನ್ನಡದಲ್ಲಿ ಮಾತನಾಡುವ ಕಾರಂತರು ತಮ್ಮ ನೈಜ ಬದುಕಿನಲ್ಲಿ ಕ್ರಾಂತಿಕಾರಿ ಹೆಜ್ಜೆ ಇಟ್ಟವರು..ಅನ್ನುವುದರಲ್ಲಿ ಎರಡು ಮಾತಿಲ್ಲ..

ನಮ್ಮ ಕಾರಂತರು ನಾಸ್ತಿಕರು ಅನ್ನುವವರು ಇದ್ದಾರೆ..ಆದರೆ ಇದು ತಪ್ಪು ನಿಜಕ್ಕೂ ನೇೂಡಿದರೆ ದೇವರನ್ನು ಹತ್ತಿರದಲ್ಲೇ ಕಂಡವರಿದ್ದರೆ ಅದು ಕಾರಂತರು..ಇಡಿ ಜೀವ ಜಗತ್ತನ್ನು ಪ್ರೀತಿಸಿದವರು. ಅವರ ದೇವರು ಅನ್ನುವ ಲೇಖನದ ಪಾಠವನ್ನು ನಾನು ಸಣ್ಣ ತರಗತಿಯಲ್ಲಿ ಓದಿದ ನೆನಪು ಸದಾ ನನ್ನಲ್ಲಿದೆ.

Advertisement

“ಮನುಷ್ಯ ತಾನು ದೊಡ್ಡವನಾಗದೆ ತನ್ನ ದೇವರನ್ನು ದೊಡ್ಢದಾಗಿ ಮಾಡಲಾರ” ಅನ್ನುವ ಡಾ. ಕಾರಂತರ ಮಾತು ಇಂದಿಗೂ ಜೀವಂತ.. ಇಂದು ದಿವಂಗತ ಕೇೂಟ.ಡಾ.ಶಿವರಾಮ ಕಾರಂತರ ಜನುಮ ದಿನ.ಈ ಮಹಾನ್ ಚೇತನಕ್ಕೆ ನಮ್ಮೆಲ್ಲರ ನುಡಿ ನಮನ.

*ಪ್ರೊ.ಕೊಕ್ಕರ್ಣೆ ಸುರೇಂದ್ರ ನಾಥ ಶೆಟ್ಟಿ ಉಡುಪಿ.

Advertisement

Udayavani is now on Telegram. Click here to join our channel and stay updated with the latest news.

Next