Advertisement

ಸಾಹಸ ದೃಶ್ಯಗಳ ಹಿಂದೆ ಅಣ್ಣಾವ್ರ ಶ್ರಮ

03:16 PM Apr 17, 2021 | Team Udayavani |

ರಾಜ್‌ ಅವರಿಗೆ ದೈವಭಕ್ತಿ ಎಷ್ಟಿತ್ತೋ ಅಷ್ಟೇ ಕರ್ತವ್ಯ ನಿಷ್ಠೆ ಕೂಡ ಇತ್ತು. ಅದಕ್ಕೆ ಅತ್ಯುತ್ತಮ ನಿದರ್ಶನವೆಂದರೆ “ಕಂಠೀರವ’ ಚಿತ್ರದ ಚಿತ್ರೀಕರಣದ ಸನ್ನಿವೇಶ. ಮಹಾರಾಜಕಂಠೀರವ ಅವರು ಕೋಣವನ್ನುಭುಜದ ಮೇಲೆ ಹೊತ್ತು ಮೈಸೂರಿನಚಾಮುಂಡಿ ಬೆಟ್ಟದ ಸಾವಿರಮೆಟ್ಟಿಲುಗಳನ್ನು ಏರುತ್ತಿದ್ದರು ಎಂಬ ಪ್ರತೀತಿ ಇತ್ತು.

Advertisement

ಇದು ವರನಟನ ಅರಿವಿಗೆ ಬಂದ ಕೂಡಲೇ ಆ ಪ್ರಯತ್ನವನ್ನೂ ಚಿತ್ರೀಕರಣ ಮಾಡಿಕೊಳ್ಳುವ ಮುಂದಾಗಿ ಚಿತ್ರೀಕರಣಕ್ಕೆ ಸಿದ್ಧರಾಗಿಯೇ ಬಿಟ್ಟರು. ಕೊಬ್ಬಿದ ಕೋಣವನ್ನು ತರಿಸಲಾಯಿತು. ರಾಜ್‌ ಅದನ್ನು ಭುಜದ ಮೇಲೆ ಏರಿಸಿಕೊಂಡು ಹತ್ತು ಮೆಟ್ಟಿಲು ಏರಲಾರಂಭಿಸಿದರು. ಡೈರೆಕ್ಟರ್‌ ಕಟ್‌ ಹೇಳಿದ ಮೇಲೆಯೇ ಕೋಣವನ್ನು ಕೆಳಗಿಳಿಸಿದ್ದು. ಅದೇ ಚಿತ್ರದ  ಮತ್ತೂಂದು ದೃಶ್ಯ ರಾಜ್‌ ಅವರ ಕರ್ತವ್ಯ ನಿಷ್ಠೆಯನ್ನು ಎತ್ತಿ ಹಿಡಿಯುತ್ತದೆ.

ಕಂಠೀರವರನ್ನು ಜಟ್ಟಿ ಕಾಳಗದಲ್ಲಿ ಜಯಿಸುವವರೇ ಇರಲಿಲ್ಲ ಎಂದುಇತಿಹಾಸ ಹೇಳುತ್ತದೆ. ಅದನ್ನು ರಾಜ್‌ ಅವರ ಪಾತ್ರನಿರ್ವಹಣೆಯಲ್ಲಿ ತೋರಿಸಿಯೂ ಬಿಟ್ಟರು.ಸುಮಾರು 250 ಕೆ.ಜಿ ತೂಗುತ್ತಿದ್ದ, ಒಬ್ಬ ಜಟ್ಟಿಯನ್ನುಹೆಗಲ ಮೇಲಿರಿಸಿಕೊಂಡು ಮೂರು ಸುತ್ತು ತಿರುಗಿಸಿ ನೆಲಕ್ಕೆ ಒಗೆದೇ ಬಿಟ್ಟರು. ಹೀಗೆ ರಾಜ್‌ ಸಾಹಸ ದೃಶ್ಯಗಳಲ್ಲೂ ನೈಜತೆ ಮೆರೆಯುತ್ತಿದ್ದರು. ಸಿನಿಮಾನೈಜವಾಗಿ ಮೂಡಿ ಬರಲು ಯಾವ ಪ್ರಯತ್ನ, ಸಾಹಸಕ್ಕೂ ಅವರು ಸಿದ್ಧರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next