Advertisement
ವಿಶ್ವ ಗೀತಾ ಪರ್ಯಾಯದಲ್ಲಿ ಭಗವದ್ಗೀತೆಯ ವಿವಿಧ ಆಯಾಮಗಳನ್ನು ತೆರೆದಿಡಲು ಸಂಕಲ್ಪಿಸಿದ ಪರ್ಯಾಯ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾರ ಉಜ್ವಲ ವಿಚಾರ ಧಾರೆಯನ್ನು ಶ್ಲಾ ಸಿ, ಶ್ರೀಪಾದರ ಹಿಂದಿನ ಪರ್ಯಾಯದಲ್ಲಿ ಭವ್ಯ ಗೀತಮಂದಿರವನ್ನೇ ಕಲಾ ವೇದಿಕೆಯನ್ನು ಬಳಸಿ ಭಗವದ್ಗೀತಾ ವಿಶ್ವರೂಪ ದರ್ಶನವನ್ನು ತೋರಿಸಿದ ಅದ್ಭುತ ಪರಿಕಲ್ಪನೆ, ಸಾಕಾರಗೊಳಿಸಿದ ರಂಗಕರ್ಮಿ ಸಾಹಿತಿ ಡಿ| ಉದ್ಯಾವರ ಮಾಧವಾಚಾರ್ಯರ ಅಪೂರ್ವ ಸಾಧನೆಯನ್ನು ವಿವರಿಸಿದರು.
Related Articles
Advertisement
ಉದ್ಯಮಿ ಕೋಲ್ಕತ್ತಾದ ಕಲ್ವಾನಿ ದಂಪತಿಯ ಸಾಧನೆಯನ್ನು ಗಮನಿಸಿ ಶ್ರೀಕೃಷ್ಣಗೀತಾನುಗ್ರಹ ಪ್ರಶಸ್ತಿ ನೀಡಿ ಶ್ರೀಪಾದರು ಹರಸಿದರು.
ಗೀತಾಮೃತಸಾರ ಗ್ರಂಥ ಬಿಡುಗಡೆಬೃಹತ್ ಗೀತೋತ್ಸವ ಪ್ರಯುಕ್ತ ಡಿ.17ರಂದು ಸಂಜೆ 5.30ಕ್ಕೆ ರಾಜಾಂಗಣದಲ್ಲಿ ಶ್ರೀ ಸುಜ್ಞಾನೇಂದ್ರತೀರ್ಥ ವಿರಚಿತ ಗೀತಾಮೃತಸಾರ ಗ್ರಂಥ ಬಿಡುಗಡೆ ನಡೆಯಲಿದೆ. ಶ್ರೀ ಸುಜ್ಞಾನೇಂದ್ರತೀರ್ಥರ ಬದುಕು-ಬರಹದ ಬಗ್ಗೆ ವಿ| ಸುಧೀಂದ್ರ ಆಚಾರ್ಯ ಹೆಜಮಾಡಿ, ಗೀತಾಮೃತಸಾರ ಪರಿಚಯವನ್ನು ಓಂಪ್ರಕಾಶ್ ಭಟ್ಟ ಅವರು ಮಾಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.