Advertisement

ಕೆವಿಜಿ  ಶಿಕ್ಷಣ ಸಂಸ್ಥೆಯಿಂದ ಡಾ|ಚಿದಾನಂದ ಅವರಿಗೆ ಸಮ್ಮಾನ

06:40 AM Jul 23, 2017 | Harsha Rao |

ಸುಳ್ಯ: ಸುಳ್ಯ, ಕೊಡಗು ಮತ್ತು ಬೆಂಗಳೂರಿನಲ್ಲಿರುವ ಕೆವಿಜಿ ಸಮೂಹ ಶಿಕ್ಷಣ ಸಂಸ್ಥೆಯ ಆಡಳಿತ, ಪ್ರಾಂಶುಪಾಲ ಮತ್ತು ಸಿಬಂದಿ ವರ್ಗದವರ ವತಿಯಿಂದ ಸಂಸ್ಥೆಯ ಅಧ್ಯಕ್ಷ ಡಾ| ಬಿ.ಸಿ. ರಾಯ್‌ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ| ಕೆ.ವಿ. ಚಿದಾನಂದ ಅವರನ್ನು ಸಮ್ಮಾನಿಸುವ ಕಾರ್ಯಕ್ರಮ ಅಮರಶ್ರೀ ಬಾಗ್‌ನಲ್ಲಿ  ಶನಿವಾರ ನಡೆಯಿತು.

Advertisement

ಮಂಗಳೂರು  ನಿಟ್ಟೆ ವಿಶ್ವವಿದ್ಯಾಲಯದ ಉಪ ಕುಲಪತಿ  ಡಾ| ರಮಾನಂದ ಶೆಟ್ಟಿ  ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಆಯಾಯ ಊರಿನ ಬೆಳವಣಿಗೆ ಖ್ಯಾತಿಯಲ್ಲಿ ಅಲ್ಲಿನ ಸಾಧಕರ ಪರಿಶ್ರಮವಿರುತ್ತದೆ. 

ಇಂದು ಸುಳ್ಯವನ್ನು ಗುರುತಿಸುವುದು ಡಾ| ಕುರುಂಜಿ ವೆಂಕಟರಮಣ ಗೌಡ ಅವರ ಹೆಸರಲ್ಲಿ. ಅವರು ಸ್ಥಾಪಿಸಿದ ಸಂಸ್ಥೆ ಗಳೆಲ್ಲವನ್ನು ಅವರ ಕಾಲಾನಂತರ ಉನ್ನತ ಸ್ಥಿತಿಯಲ್ಲಿ  ಮುಂದುವರಿಸುತ್ತಿರುವ ಡಾ| ಕೆ.ವಿ.ಚಿದಾನಂದ ಅವರ ಪರಿಶ್ರಮ ಕಾಳಜಿ ಶ್ಲಾಘನೀಯ. ಇಂದು ಪ್ರತಿಷ್ಠಿತ ಪ್ರಶಸ್ತಿ ದೊರೆತಿರುವುದು ಅವರ ಸೇವೆಗೆ ಸಂದ ಗೌರವವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಎ.ಜೆ. ಇನ್ಸಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌ ಮತ್ತು ರೀಸರ್ಚ್‌ ಸೆಂಟರ್‌ನ ಪ್ರೊ| ಡಾ| ಕಲ್ಪನಾ ಶ್ರೀಧರ್‌ ಅವರು ಮಾತನಾಡಿ, ಮಾನವೀಯತೆ, ದಯಾಪರತೆ, ಕಠಿನ ದುಡಿಮೆಯಿಂದ ಆರೋಗ್ಯ ಕ್ಷೇತ್ರಕ್ಕೆ ತಮ್ಮ ಕೊಡುಗೆ ನೀಡುತ್ತಿರುವ ಡಾ|ಚಿದಾನಂದ ಅವರು ಸುಳ್ಯಕ್ಕೊಂದು ಹೆಮ್ಮೆ ಎಂದರು.

ಸಮ್ಮಾನ ಸ್ವೀಕರಿಸಿದ ಡಾ| ಕೆ.ವಿ. ಚಿದಾನಂದ ಅವರು ರೋಗಿಗಳೊಂದಿಗೆ ಉತ್ತಮ ಬಾಂಧವ್ಯ ಇಟ್ಟು ಕೊಂಡಿ ರು ವು ದ ರಿಂದ ಅವರನ್ನು ವಿಐಪಿಯಂತೆ ನೋಡಿಕೊಳ್ಳುತ್ತೇವೆ. ಕಡಿಮೆ ವೆಚ್ಚದಲ್ಲಿ ಉತ್ತಮ ಸೇವೆ ನೀಡುವುದು ನಮ್ಮ ಧ್ಯೇಯ. ತಂದೆಯ ಪ್ರೇರಣೆಯಿಂದ ಇದೆಲ್ಲ ಸಾಧ್ಯವಾಗಿದೆ ಎಂದರು.

Advertisement

ಕೆವಿಜಿ ಮೆಡಿಕಲ್‌ ಕಾಲೇಜಿನ ಡೀನ್‌ ಡಾ| ಶೀಲಾ ಜಿ.ನಾಯಕ್‌ ಅಭಿನಂದನ ಭಾಷಣ ಮಾಡಿ, ಸಮ್ಮಾನಿಸಿದರು. ಕೆವಿಜಿ ಕಾನೂನು ಕಾಲೇಜಿನ ಮಾಜಿ ಪ್ರಾಂಶುಪಾಲ ಪಡ್ಡಂಬೈಲ್‌ ವೆಂಕಟ್ರಮಣ ಗೌಡ ಅಧ್ಯ ಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಅಕಾಡೆಮಿ ಆಫ್‌ ಲಿಬರಲ್‌ ಎಜುಕೇಶನ್‌ ಪ್ರಧಾನ ಕಾರ್ಯದರ್ಶಿ ಡಾ| ರೇಣುಕಾಪ್ರಸಾದ್‌ ಕೆ.ವಿ., ಖಜಾಂಚಿ ಶೋಭಾ ಚಿದಾನಂದ, ಶ್ರೀಧರ್‌ ಮುರುಳ್ಯ ಮೊದಲಾದವರು ಭಾಗವಹಿಸಿದ್ದರು.

ಕೆವಿಜಿ ಡೆಂಟಲ್‌ ಕಾಲೇಜಿನ ಪ್ರಾಂಶುಪಾಲೆ ಡಾ| ಮೋಕ್ಷಾ ನಾಯಕ್‌ ಸ್ವಾಗತಿಸಿ, ಕೆವಿಜಿ ಎಂಜಿನಿಯರಿಂಗ್‌ ಕಾಲೇಜಿನ ಪ್ರಾಂಶುಪಾಲ , ಕಾರ್ಯಕ್ರಮ ಸಂಘಟಕ ಡಾ| ಎನ್‌.ಎ. ಜ್ಞಾನೇಶ್‌ ಪ್ರಾಸ್ತಾವಿಸಿದ ರು. ಕೆವಿಜಿ ಆಯುರ್ವೇದ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ| ಎನ್‌.ಎಸ್‌. ಶೆಟ್ಟರ್‌ ವಂದಿಸಿದರು.ಸಂಜೀವ ಕುದ್ಪಾಜೆ, ಬೇಬಿ ವಿದ್ಯಾ, ಲಕ್ಷ್ಮ ಣ ಯೇನೆಕಲ್ಲು ನಿರೂಪಿಸಿದರು. ಡಾ| ಗಿರಿಧರ ಗೌಡ ಸಮ್ಮಾನ ಪತ್ರ ವಾಚಿಸಿದರು. 

ಡಾ| ಗೀತಾ ದೊಪ್ಪ  ಮತ್ತು ಡಾ| ಯಶೋದಾ ರಾಮಚಂದ್ರ  ಅತಿಥಿಗಳನ್ನು ಪರಿಚಯಿಸಿದರು. ಕೆವಿಜಿ ಸಮೂಹ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next