Advertisement

ದೇಶಿ ಸಂಸ್ಕೃತಿ ಸಂರಕ್ಷಣೆಗೆ ಪ್ರಾಮಾಣಿಕ ಯತ್ನ ಅವಶ್ಯ: ಪ್ರಸಾದ

04:28 PM Jun 02, 2018 | |

ಹುಬ್ಬಳ್ಳಿ: ದೇಶದ ಸಂಸ್ಕೃತಿ-ಸಂಪ್ರದಾಯ ಬೆಳೆಸುವ, ಕಲೆ ಉಳಿಸಿ-ಬೆಳೆಸು ನಿಟ್ಟಿನಲ್ಲಿ ಎಲ್ಲರೂ ಪ್ರಾಮಾಣಿಕವಾಗಿ ಪ್ರಯತ್ನ ಮಾಡಬೇಕು ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.

Advertisement

ಮೂರುಸಾವಿರ ಮಠದ ಸಭಾಭವನದಲ್ಲಿ ಶುಕ್ರವಾರ ನಡೆದ ಶ್ರೀ ಗುರುಕುಮಾರ ಪಂಚಾಕ್ಷರ ಶಿಕ್ಷಣ ಸಂಸ್ಥೆಯ ಡಾ| ಗುರುಪುಟ್ಟರಾಜ ಗವಾಯಿಗಳ ಸಂಗೀತ ವಿದ್ಯಾಲಯದ 18ನೇ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪಂಚಾಕ್ಷರಿ ಗವಾಯಿಗಳು ಎಂದರೆ ಎಲ್ಲರ ಕಣ್ಮುಂದೆ ಬಂದು ನಿಲ್ಲುವಂತಹ ಮಹಾತ್ಮರು. ಅವರು ಜನ್ಮಥಃ ಅಂಧರಾಗಿದ್ದರೂ ಇಡೀ ಜಗತ್ತಿನಲ್ಲಿರುವ ಅಂಧರಿಗೆ ಬೆಳಕು ನೀಡಿದ ಪುಣ್ಯಾತ್ಮರಾಗಿದ್ದಾರೆ ಎಂದರು.

ಎಲ್ಲರೂ ಹಾಡುತ್ತೇವೆ ಎಂದರೆ ಅದು ಸಾಧ್ಯವಿಲ್ಲ. ಅದಕ್ಕಾಗಿ ಪರಿಶ್ರಮ ಅವಶ್ಯ. ಇಂತಹ ಕಾರ್ಯಕ್ರಮ ಆಯೋಜನೆ ಮೂಲಕ ನಮ್ಮ ದೇಶದ ಸಂಸ್ಕೃತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಂಸ್ಥೆ ಉತ್ತಮ ವೇದಿಕೆ ನೀಡುತ್ತಿದೆ. ಸಮಾಜದಲ್ಲಿರುವ ಪ್ರತಿಭಾನಿತ್ವರನ್ನು ಗುರುತಿಸಿ ಅವರಿಗೆ ವೇದಿಕೆ ಕಲ್ಪಿಸುವಂತಹ ಕೆಲಸವಾಗಬೇಕಿದೆ. ರಾಜ್ಯ ಹಾಗೂ ಕೇಂದ್ರ ಸರಕಾರದಿಂದ ಸಿಗಬೇಕಾದ ಸೌಲಭ್ಯ ಪಡೆಯುವ ಮೂಲಕ ಇನ್ನು ಹೆಚ್ಚಿನ ಸಾಧನೆ ಮಾಡಲಿ ಎಂದರು.

ಮೂರುಸಾವಿರ ಮಠದ ಶ್ರೀ ಜಗದ್ಗುರು ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ದಾನೇಶ ಬುರಡಿ ಹಾಗೂ ಬಸಲಿಂಗಯ್ಯ ಹಿರೇಮಠ ದಂಪತಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಸಂಗಮೇಶ ಸ್ವಾದಿಮಠ, ಶಿವಕುಮಾರ ಹಿರೇಮಠ, ಅಶೋಕ ಬಾದಾಮಿ, ಸಿದ್ದು ಹುಡೇದ, ಶಿವನಗೌಡ ಪಾಟೀಲ, ಲೋಕಮಾನ್ಯ ರಾಮದತ್ತ ಮೊದಲಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next