Advertisement

Divorce: 29 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ಎ.ಆರ್.ರೆಹಮಾನ್

10:37 PM Nov 19, 2024 | Team Udayavani |

ಚೆನ್ನೈ: ಆಸ್ಕರ್‌ ಪ್ರಶಸ್ತಿ ಪುರಸ್ಕೃತ ಸಂಗೀತ ನಿರ್ದೇಶಕ ಎ.ಆರ್‌.ರೆಹಮಾನ್‌ (A.R.Rahman) ಅವರ ಪತ್ನಿ ಸಾಯಿರಾ ಪತಿಯಿಂದ ದೂರ ಇರುವ ಬಗ್ಗೆ ಘೋಷಣೆ ಮಾಡಿದ್ದಾರೆ. ಈ ಬಗ್ಗೆ ಅವರ ವಕೀಲರು ಹೇಳಿಕೆ ಬಿಡುಗಡೆ ಮಾಡಿದ್ದಾರೆ.

Advertisement

ಪತಿ ಹಾಗೂ ಪತ್ನಿ ನಡುವೆ ಪ್ರೀತಿ ಇದ್ದರೂ ಇಬ್ಬರ ನಡುವೆ ಸುಧಾರಿಸಲಾಗದಷ್ಟು ಬಿರುಕು ಮೂಡಿದೆ. ಹೀಗಾಗಿ, ಪತಿ ರೆಹಮಾನ್‌ರಿಂದ ದೂರ ಇರಲು ಕಕ್ಷಿದಾರರರಾಗಿರುವ ಸಾಯಿರಾ ಬಯಸಿದ್ದಾರೆ ಎಂದು ಹೇಳಿದ್ದಾರೆ.

1995 ಮಾ.12ರಂದು ಇಬ್ಬರ ವಿವಾಹವಾಗಿತ್ತು. ಅವರಿಗೆ ಖತೀಜಾ, ರಹೀಮಾ, ಅಮೀನ್‌ ಎಂಬ ಮೂವರು ಮಕ್ಕಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next