Advertisement
ಅವರು ಬುಧವಾರ ಸಂಜೆ ಕಲ್ಲಡ್ಕ ಶ್ರೀರಾಮ ಮಂದಿರದಲ್ಲಿ ಬಂಟ್ವಾಳ ಬಿಜೆಪಿ ವತಿಯಿಂದ ಶಾಸಕ ರಾಜೇಶ್ ನಾೖಕ್ ಉಳಿಪಾಡಿಗುತ್ತು ಅವರ ನೇತೃತ್ವದಲ್ಲಿ ನಡೆಯುತ್ತಿರುವ ಗ್ರಾಮವಿಕಾಸ ಯಾತ್ರೆ- ಗ್ರಾಮದೆಡೆಗೆ ಶಾಸಕರ ನಡಿಗೆಯ 5ನೇ ದಿನ ಸಮಾರೋಪ ಸಮಾರಂಭದಲ್ಲಿ ಪ್ರಧಾನ ಭಾಷಣ ಮಾಡಿದರು.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಮಾತ ನಾಡಿ, ಬಿಜೆಪಿ ಸರಕಾರವು ನೀಡಿದ ಹಲವಾರು ಯೋಜನೆ, ಮಾಹಿತಿ ಯನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದ್ದು, ಅದನ್ನು ಯಶಸ್ವಿಯಾಗಿ ಮಾಡಿದ್ದೇ ಆದಲ್ಲಿ ನಾವು ಮತ್ತೂಮ್ಮೆ ಅಧಿಕಾರಕ್ಕೆ ಬರುವಲ್ಲಿ ಯಾವುದೇ ಸಂದೇಶ ಬೇಡ ಎಂದರು.
Related Articles
ಬಂದರು, ಮೀನುಗಾರಿಕೆ ಇಲಾಖೆ ಸಚಿವ ಎಸ್. ಅಂಗಾರ ಮಾತನಾಡಿ, ಯುಪಿಎ ಸರಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಹೆದ್ದಾರಿ ಸೇರಿದಂತೆ ಇತರ ಅಭಿವೃದ್ಧಿ ಕಾರ್ಯಗಳ ಕುರಿತು
ಮಾತನಾಡದವರು ಬಿಜೆಪಿ ಸರಕಾರ ಬಂದ ತತ್‌ಕ್ಷಣ ನಮ್ಮ ನಾಯಕರನ್ನು ಗೇಲಿ ಮಾಡುತ್ತಿದ್ದಾರೆ. ಅಭಿವೃದ್ಧಿಯೇ ಅವರ ಟೀಕೆಗಳಿಗೆ ಉತ್ತರವಾಗಿದ್ದು, ರಾಜ್ಯ ಹಾಗೂ ಬಂಟ್ವಾಳದಲ್ಲಿ ವಿಜಯ ನಮ್ಮದೇ ಈ ಕುರಿತು ಯಾರಿಗೂ ಸಂಶಯ ಬೇಡ ಎಂದರು.
Advertisement
ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಎ. ರುಕ್ಮಯ ಪೂಜಾರಿ, ಪಕ್ಷದ ಪ್ರಮುಖರಾದ ಸುಲೋಚನಾ ಜಿ.ಕೆ. ಭಟ್, ಡೊಂಬಯ ಅರಳ, ರವೀಶ್ ಶೆಟ್ಟಿ ಕರ್ಕಳ, ಮಾಧವ ಮಾವೆ, ಯಶೋಧರ ಕರ್ಬೆಟ್ಟು, ಮೋಹನ್ ಪಿ.ಎಸ್., ಸಂದೇಶ್ ಶೆಟ್ಟಿ, ಮೋನಪ್ಪ ದೇವಸ್ಯ, ವಿವಿಧ ಗ್ರಾ.ಪಂ.ಗಳ ಅಧ್ಯಕ್ಷರಾದ ಶಶಿಕಲಾ, ಅಭಿಷೇಕ್ ಶೆಟ್ಟಿ, ಹಿರಣ್ಮಯಿ ಉಪಸ್ಥಿತರಿದ್ದರು.
ಪಾದಯಾತ್ರೆಯ ಸಂಚಾಲಕ ಬಿ. ದೇವದಾಸ್ ಶೆಟ್ಟಿ ಅವರು ಕ್ಷೇತ್ರದ ಅಭಿವೃದ್ಧಿಯ ವಿವರ ನೀಡಿದರು. ಮಾಜಿ ಶಾಸಕ ಕೆ. ಪದ್ಮನಾಭಕೊಟ್ಟಾರಿ ಸ್ವಾಗತಿಸಿದರು. ಕ್ಷೇತ್ರ ಉಪಾಧ್ಯಕ್ಷ ವಜ್ರನಾಥ ಕಲ್ಲಡ್ಕ ವಂದಿಸಿದರು. ಗೋಳ್ತಮಜಲು ಗ್ರಾ.ಪಂ. ಸದಸ್ಯ ರಾಜೇಶ್ ಕೊಟ್ಟಾರಿ ನಿರ್ವಹಿಸಿದರು. ಟಿಕೆಟ್ ಕೊಡಿಸಿದ್ದು ಡಾ| ಪ್ರಭಾಕರ ಭಟ್
ನನಗೆ ಟಿಕೆಟ್ ಕೊಡಿಸಿದವರು ಆಶೀರ್ವಾದ ಮಾಡಿದವರು ಡಾ| ಪ್ರಭಾಕರ ಭಟ್ಟರು. 2008ರಲ್ಲಿ ಟಿಕೆಟ್ ಕೊಡುವ ಸಂದರ್ಭ ನನಗೆ ಕೊಡಬೇಕೋ, ಬೇಡವೋ ಎಂಬ ಗೊಂದಲ ಉಂಟಾದಾಗ ಡಾ| ಭಟ್ಟರು ನನ್ನ ಪರ ನಿಂತು ಟಿಕೆಟ್ ಕೊಡಿಸಿ ಆಶೀರ್ವಾದ ಮಾಡಿದ್ದರು ಎಂದು ಡಾ| ಅಶ್ವತ್ಥನಾರಾಯಣ ನೆನಪಿಸಿಕೊಂಡರು. ಜ. 27ಕ್ಕೆ ಸಮಾರೋಪ
ಶಾಸಕ ರಾಜೇಶ್ ನಾೖಕ್ ಮಾತನಾಡಿ, ಯಾತ್ರೆಯ ಸಮಾರೋಪವು ಬಿ.ಸಿ.ರೋಡಿನಲ್ಲಿ ಜ. 26ರ ಬದಲಿಗೆ 27ಕ್ಕೆ ನಡೆಯುತ್ತಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲು ಸೇರಿದಂತೆ ಮೊದಲಾದ ಗಣ್ಯರು ಭಾಗವಹಿಸಲಿದ್ದಾರೆ ಎಂದರು.