Advertisement

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

11:54 AM Apr 26, 2024 | Team Udayavani |

ಕಲಬುರಗಿ: ಕಾಂಗ್ರೆಸ್ ಮಹಿಳೆಯರ ಮಂಗಳಸೂತ್ರ ಕಿತ್ತುಕೊಳ್ಳಲಾಗುತ್ತದೆ ಎನ್ನುವ ಕುರಿತಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ಸಂಬಂಧ ಚುನಾವಣಾ ಆಯೋಗ ನೋಟಿಸ್ ನೀಡಿರುವುದು ನಾಚಿಗೇಡಿತನ ಸಂಗತಿ ಎಂದು ಕೆಕೆಆರ್ ಡಿಬಿ ಅಧ್ಯಕ್ಷ ಡಾ. ಅಜಯಸಿಂಗ್ ಟೀಕಿಸಿದರು.

Advertisement

ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಕರೆಯಲಾದ ಸುದ್ದಿಗೋಷ್ಟಿ ಯಲ್ಲಿ ಮಾತನಾಡಿದ ಅವರು, ದೇಶದ ಚುನಾವಣಾ ಇತಿಹಾಸದಲ್ಲಿ ಮೊದಲ ಬಾರಿಗೆ ಪ್ರಧಾನಮಂತ್ರಿ ಹೇಳಿಕೆಗೆ ಚುನಾವಣಾ ಆಯೋಗ ನೀಡಿದೆ ಎಂದರು.

60 ವರ್ಷಗಳ ಕಾಲ ಆಡಳಿತ ನಡೆಸಿರುವ ಕಾಂಗ್ರೆಸ್ ಜನಪರ ಆಡಳಿತ ನಡೆಸಿದೆ. ಎಂದಾದರೂ ಮಂಗಳಸೂತ್ರ ಕಿತ್ತು ಕೊಳ್ಳಲಾಗಿದೆಯೇ? ಆದರೆ ಪ್ರಧಾನಿ ಮೋದಿ ಹೇಳಿಕೆನ್ನು ಅವಲೋಕಿಸಿದರೆ ಯಾವ ಕೀಳು ಮಟ್ಟಕ್ಕೆ ಇಳಿದಿರುವುದು ಸಾಬೀತುಪಡಿಸುತ್ತಿದೆ ಎಂದು ಟೀಕಿಸಿದರು.

ತಾಳಿ ಸ್ವಾಭಿಮಾನ ಸಂಕೇತ. ತಾಳಿಯೇ ಅವರ ಸರ್ವಸ್ವ. ತಾಳಿ ಕಿತ್ತುಕೊಳ್ಳಲಾಗುತ್ತದೆ ಜತೆಗೆ ಮುಸ್ಲಿಂ ಓಬಿಸಿ ಮೀಸಲಾತಿ ವಿವಾದ ಕೆದಕುತ್ತಿದ್ದಾರೆ ಎಂದರು.

ಮೇ 1ರಂದು ಜೇವರ್ಗಿಗೆ ಸಿಎಂ: ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಪರ ಚುನಾವಣಾ ಪ್ರಚಾರ ಮಾಡಲು ಬರುವ ಮೇ 1 ರಂದು ಮಧ್ಯಾಹ್ನ 2ಕ್ಕೆ ಜೇವರ್ಗಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಡಾ‌. ಮಲ್ಲಿಕಾರ್ಜುನ ಖರ್ಗೆ ಸೇರಿ ಇತರರು ಆಗಮಿಸುತ್ತಿದ್ದಾರೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

Advertisement

ತಾಳಿ ತೆಗೆಸಿರುವುದು ತಪ್ಪು: ಈಚೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವಿವಿಧ ಹುದ್ದೆಗಳ ನೇಮಕಾತಿ ಸಂಬಂಧ ನಡೆಸಿದ ಪರೀಕ್ಷೆ ಸಂದರ್ಭದಲ್ಲಿ ಹಿಂದೂ ಮಹಿಳೆಯರ ಮಂಗಳಸೂತ್ರ ತೆಗೆಸಿರುವುದು ತಪ್ಪು. ಈ ಕುರಿತು ತನಿಖೆ ನಡೆದು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಡಾ. ಅಜಯಸಿಂಗ್ ಒತ್ತಾಯಿದರು.

ಶಾಸಕ ಅಲ್ಲಮಪ್ರಭು ಪಾಟೀಲ್, ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಚುನಾವಣಾ ಏಜೆಂಟ್ ನೀಲಕಂಠರಾವ ಮೂಲಗೆ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ, ಮುಖಂಡರಾದ ಶರಣು ಭೂಸನೂರ, ವಿಜಯ ಕೇದಾರಲಿಂಗಯ್ಯ ಹಿರೇಮಠ, ಸಿದ್ರಾಮಪ್ಪ ಧಂಗಾಪುರ ಸೇರಿದಂತೆ ಮುಂತಾದವರಿದ್ದರು.

ಇದನ್ನೂ ಓದಿ: ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Advertisement

Udayavani is now on Telegram. Click here to join our channel and stay updated with the latest news.

Next