Advertisement

ಮಹಾಮಳೆಗೆ ತತ್ತರಿಸಿದ ಕೇರಳ: 15 ಮಂದಿ ಸಾವು, ಹಲವರು ನಾಪತ್ತೆ! ನೆರವಿನ ಭರವಸೆ ನೀಡಿದ ಶಾ

03:16 PM Oct 17, 2021 | Team Udayavani |

ಕೊಟ್ಟಾಯಂ: ಮಹಾಮಳೆಗೆ ದೇವರ ನಾಡು ಕೇರಳ ತತ್ತರಿಸಿದೆ. ಮಳೆಯ ಕಾರಣದಿಂದ ಕೇರಳದಲ್ಲಿ ಸಾವನ್ನಪ್ಪಿದವರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ. ಇದುವರೆಗೆ ಡಜನ್ ಗೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ.

Advertisement

ಮೃತಪಟ್ಟ 15 ಜನರಲ್ಲಿ ಕೊಟ್ಟಾಯಂ ನಲ್ಲಿ 12 ಮಂದಿ ಮತ್ತು ಇಡುಕ್ಕಿ ಜಿಲ್ಲೆಯಲ್ಲಿ ಮೂರು ಮಂದಿ ಸಾವನ್ನಪ್ಪಿದ್ದಾರೆ.

ಕೊಟ್ಟಾಯಂ ಜಿಲ್ಲೆಯ ಪೂರ್ವ ಭಾಗಗಳಲ್ಲಿ ಮತ್ತು ಇಡುಕ್ಕಿ ಜಿಲ್ಲೆಯ ಪಶ್ಚಿಮ ಭಾಗಗಳಲ್ಲಿ ಸರಣಿ ಭೂಕುಸಿತ, ಗುಡ್ಡ ಕುಸಿತ ಉಂಟಾಗಿದೆ. ಕೊಟ್ಟಾಯಂ ಜಿಲ್ಲೆಯ ಕೂಟ್ಟಿಕ್ಕಲ್ ಪಂಚಾಯತ್ ವ್ಯಾಪ್ತಿಯಲ್ಲಿ ಭೂಕುಸಿತಕ್ಕೆ ಮೂರು ಮನೆಗಳು ಮತ್ತು ಟೀ ಅಂಗಡಿಯೊಂದು ಕೊಚ್ಚಿಹೋಗಿದೆ. ಕೂಟ್ಟಿಕ್ಕಲ್ ನಲ್ಲಿ ಮೂರು ಮಂದಿಯ ಶವಗಳನ್ನು ಹೊರತೆಗೆಯಲಾಗಿದೆ.

ನಾಪತ್ತೆಯಾದವರ ಪತ್ತೆಗೆ ಹುಡುಕಾಟ ನಿರಂತರವಾಗಿ ನಡೆಯುತ್ತಿದೆ. ಕೊಟ್ಟಿಕ್ಕಲ್ ನಲ್ಲಿ ಎಂಟು ಮಂದಿ, ಇಡುಕ್ಕಿಯ ಕೊಕ್ಕಯರ್ ನಲ್ಲಿ ಮಕ್ಕಳೂ ಸೇರಿ ಏಳು ಮಂದಿ ನಾಪತ್ತೆಯಾಗಿದ್ದಾರೆ. ಎನ್ ಡಿಆರ್ ಎಫ್ ಮತ್ತು ಶ್ವಾನದಳದ ರಕ್ಷಣಾ ಕಾರ್ಯಕ್ಕೆ ಭಾರೀ ಮಳೆ ಅಡ್ಡಿಯಾಗಿದೆ.

ಪೂಂಜಾರ್ ತೆಕ್ಕೆಕ್ಕರ ಚೋಳತಡಂ, ಮುಂಡಕ್ಕಾಯಂ ಸಮೀಪದ ಇಂಚಿಯಾನಿ ಮತ್ತು ಇಡುಕ್ಕಿಯ ಪೆರುವಂತನಂ ಸಮೀಪದ ಪುಲ್ಲುಪಾರದಲ್ಲಿ ಭೂಕುಸಿತ ಸಂಭವಿಸಿದರೂ, ಅಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಯೆಂದಾಯಾರ್, ಇಲಂಕಾಡು ಮತ್ತು ಕೊಕ್ಕಾಯಾರ್ ಸೇರಿದಂತೆ ಜನರು ಹಲವಾರು ಸ್ಥಳಗಳಲ್ಲಿ ಸಿಲುಕಿಕೊಂಡಿದ್ದಾರೆ ಎಂದು ವರದಿಗಳು ಹೇಳಿವೆ.

Advertisement

Amit Shah

24 ಗಂಟೆ ಭಾರೀ ಮಳೆ: ಆಗ್ನೇಯ ಅರೇಬಿಯನ್ ಸಮುದ್ರ ಮತ್ತು ಪಕ್ಕದ ಕೇರಳದ ಮೇಲೆ ಕಡಿಮೆ ಒತ್ತಡದ ಪ್ರದೇಶವು ಕಡಿಮೆ ಗುರುತಿಸಲ್ಪಟ್ಟಿದೆ. ಉತ್ತರ ಕೇರಳ-ಕರ್ನಾಟಕ ಕರಾವಳಿಯಲ್ಲಿ ಆಗ್ನೇಯಕ್ಕೆ ಪೂರ್ವ-ಮಧ್ಯ ಅರಬ್ಬಿ ಸಮುದ್ರದ ಮೇಲೆ ಸರಾಸರಿ ಸಮುದ್ರ ಮಟ್ಟದಲ್ಲಿ ಕಡಿಮೆ ತೀವ್ರತೆಯಿದೆ. ಮುಂದಿನ 24 ಗಂಟೆಗಳಲ್ಲಿ ಕೇರಳದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು ನಂತರ ಕಡಿಮೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಅಮಿತ್ ಶಾ ಭರವಸೆ : ಕೇರಳದ ಮಳೆಯಿಂದ ಹಾನಿಗೊಳಗಾದ ಭಾಗಗಳಲ್ಲಿ ಅಗತ್ಯವಿರುವ ಜನರಿಗೆ ಎಲ್ಲಾ ರೀತಿಯ ಬೆಂಬಲ ನೀಡುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಭರವಸೆ ನೀಡಿದ್ದಾರೆ. ಈಗಾಗಲೇ ರಕ್ಷಣಾ ಕಾರ್ಯಾಚರಣೆಗೆ ನೆರವಾಗಲು ಎನ್‌ಡಿಆರ್‌ಎಫ್ ತಂಡಗಳನ್ನು ನಿಯೋಜಿಸಿದ್ದಾರೆ.

ಟ್ವೀಟ್ ಮಾಡಿರುವ ಅವರು, ‘ಭಾರೀ ಮಳೆ ಮತ್ತು ಪ್ರವಾಹದ ಹಿನ್ನೆಲೆಯಲ್ಲಿ ಕೇರಳದ ಕೆಲವು ಭಾಗಗಳ ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಅಗತ್ಯವಿರುವ ಜನರಿಗೆ ಸಹಾಯ ಮಾಡಲು ಕೇಂದ್ರ ಸರ್ಕಾರ ಎಲ್ಲ ರೀತಿಯ ಬೆಂಬಲವನ್ನು ನೀಡುತ್ತದೆ ಎಂದು ಭರವಸೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next