Advertisement

6 ಕೋಟಿ ವ್ಯಯಿಸಿ ವಿವಾಹ, 55 ಲಕ್ಷ ರೂ. ಮೌಲ್ಯದ ಕಾರು ಕೊಟ್ಟರೂ ಪತಿಯಿಂದ ವರದಕ್ಷಿಣೆ ಕಿರುಕುಳ

12:44 PM Aug 07, 2022 | Team Udayavani |

ಬೆಂಗಳೂರು: ಕೋಟ್ಯಂತರ ರೂ.ವ್ಯಯಿಸಿ ಅದ್ಧೂರಿಯಾಗಿ ಮದುವೆ ಮಾಡಿ, ಕಾರು, ಚಿನ್ನಾಭರಣ, ನಗದು ನೀಡಿದ್ದರೂ ಪತ್ನಿಗೆ ಕಿರುಕುಳ ನೀಡಿ, ವರದಕ್ಷಿಣೆ ತರುವಂತೆ ಪೀಡಿಸುತ್ತಿರುವ ಘಟನೆ ನಡೆದಿದೆ.

Advertisement

ಹೈದರಾಬಾದ್‌ ಮೂಲದ 28 ವರ್ಷದ ಸಂತ್ರಸ್ತೆ ಕೊಟ್ಟ ದೂರಿನ ಆಧಾರದ ಮೇಲೆ ಖಾಸಗಿ ಕಂಪನಿ ಉದ್ಯೋಗಿ ಸುದೀಪ್‌ ವಿರುದ್ಧ ಬಸವನಗುಡಿ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರುದಾರ ಮಹಿಳೆ ಆರೋಪಿ ಸುದೀಪ್‌ನನ್ನು 2021ರಲ್ಲಿ ವಿವಾಹವಾಗಿದ್ದರು. ಆತನ ಕುಟುಂಬಸ್ಥರ ಒತ್ತಾಯದ ಮೇರೆಗೆ ಕೋಟ್ಯಂತರ ರೂ. ಖರ್ಚು ಮಾಡಿ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಅದ್ಧೂರಿಯಾಗಿ ಸಂತ್ರಸ್ತೆಯ ಪಾಲಕರು ವಿವಾಹ ಮಾಡಿ ಕೊಟ್ಟಿದ್ದರು.

ಇದನ್ನೂ ಓದಿ:  3 ವರ್ಷದಲ್ಲಿ ರೈಲಿಗೆ ಸಿಲುಕಿ 1,455 ಆತ್ಮಹತ್ಯೆ

ಮದುವೆಯ ಸಂದರ್ಭದಲ್ಲಿ 55 ಲಕ್ಷ ರೂ. ಮೌಲ್ಯದ ಮಿನಿ ಕೂಪರ್‌ ಕಾರು, 200 ಕೆಜಿ ಬೆಳ್ಳಿ, 4 ಕೆ.ಜಿ. ಚಿನ್ನಾಭರಣ ವನ್ನು ಸುದೀಪ್‌ಗೆ ವರದಕ್ಷಿಣೆಯಾಗಿ ಕೊಟ್ಟಿದ್ದರು. ಮದುವೆ ಕಾರ್ಯಕ್ರಮಕ್ಕಾಗಿ ಒಟ್ಟಾರೆ 6 ಕೋಟಿ ರೂ. ಖರ್ಚು ಮಾಡಲಾಗಿತ್ತು. ಇಷ್ಟೆಲ್ಲ ಕೊಟ್ಟರೂ ತೃಪ್ತಿದಾಯಕ ನಾಗದ ಪತಿ ಸುದೀಪ್‌, ತವರು ಮನೆಯಿಂದ ಮತ್ತಷ್ಟು ವರದಕ್ಷಿಣೆ ತರುವಂತೆ ಪತ್ನಿಗೆ ಕಿರುಕುಳ ಕೊಡಲು ಆರಂಭಿಸಿದ್ದ.

Advertisement

ಸಾಲದಕ್ಕೆ ದೂರುದಾರ ಮಹಿಳೆಯ ತಂದೆಯ ಹೆಸರಿನಲ್ಲಿದ್ದ 2 ಕಂಪನಿಗಳನ್ನು ಆಕೆಯ ಹೆಸರಿಗೆ ಮಾಡಿಸಿಕೊಂಡು, ಅದರಿಂದ ಬರುವ ಲಾಭವನ್ನು ಆರೋಪಿ ಪಡೆದುಕೊಂಡಿ ದ್ದಾನೆ ಎಂದು ದೂರಿನಲ್ಲಿ ಸಂತ್ರಸ್ತೆ ಆರೋಪಿಸಿದ್ದಾಳೆ.

ಪತ್ನಿ ತಲೆ ಮೇಲೆ ಮೂತ್ರ ವಿಸರ್ಜನೆ:

ಪತಿ ಡ್ರಗ್ಸ್‌ ವ್ಯಸನಿಯಾಗಿದ್ದು, ಸ್ನೇಹಿತರನ್ನು ಮನೆಗೆ ಕರೆಸುತ್ತಿದ್ದ. ಡ್ರಗ್ಸ್‌ ಸೇವಿಸಿದ ಬಳಿಕ ಅಮಲಿನಲ್ಲಿ ಪತ್ನಿಯ ತಲೆಯ ಮೇಲೆ ಮೂತ್ರ ವಿಸರ್ಜನೆ ಮಾಡಿ ವಿಕೃತಿ ಮೆರೆಯುತ್ತಿದ್ದ. ಈ ಬಗ್ಗೆ ಪ್ರಶ್ನಿಸಿದರೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಸುತ್ತಿದ್ದ. ಇದರಿಂದ ನೊಂದ ಪತ್ನಿ ಈ ವಿಚಾರವನ್ನು ಪತಿಯ ಪಾಲಕರಿಗೆ ತಿಳಿಸಿದ್ದಳು. ಆದರೆ, ಅವರು ಪುತ್ರನಿಗೆ ಪ್ರೋತ್ಸಾಹ ಕೊಟ್ಟಿದ್ದಾರೆ. ನನ್ನನ್ನು ಸಾಯಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಎಫ್ಐಆರ್‌ನಲ್ಲಿ ಸಂತ್ರಸ್ತೆ ಉಲ್ಲೇಖೀಸಿದ್ದಾಳೆ. ಬಸವನ ಗುಡಿ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next