Advertisement

ಕಿಶೋರ್‌ -ಕೈಲಾಶ್‌ ವಾಗ್ಯುದ್ಧ

12:26 AM Dec 22, 2020 | mahesh |

ಕೋಲ್ಕತಾ: ಪಶ್ಚಿಮ ಬಂಗಾಲದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ 2 ದಿನಗಳ ಪ್ರವಾಸ ಮುಗಿಯುತ್ತಿದ್ದಂತೆಯೇ, ತೃಣಮೂಲ ಕಾಂಗ್ರೆಸ್‌ನ ಚುನಾವಣ ವ್ಯೂಹ ರಚನೆಕಾರ ಪ್ರಶಾಂತ್‌ ಕಿಶೋರ್‌ ಮತ್ತು ಬಿಜೆಪಿ ನಡುವೆ ವಾಕ್ಸಮರ ಏರ್ಪಟ್ಟಿದೆ.

Advertisement

ಸೋಮವಾರ ಟ್ವೀಟ್‌ ಮಾಡಿದ ಪ್ರಶಾಂತ್‌ ಕಿಶೋರ್‌, “ವಾಸ್ತವದಲ್ಲಿ ಪ.ಬಂಗಾಲದಲ್ಲಿ ಬಿಜೆಪಿ ಎರಡಂಕಿಯನ್ನೂ ದಾಟುವುದಿಲ್ಲ. ಈ ಟ್ವೀಟ್‌ ಅನ್ನು ಸೇವ್‌ ಮಾಡಿಟ್ಟುಕೊಳ್ಳಿ. ನಾನು ಹೇಳಿದ್ದಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಬಿಜೆಪಿ ಪಡೆದರೆ, ನಾನು ಟ್ವಿಟರ್‌ಗೆ ಗುಡ್‌ಬೈ ಹೇಳುತ್ತೇನೆ’ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ ನಾಯಕ ಕೈಲಾಶ್‌ ವಿಜಯವರ್ಗೀಯ, “ಬಂಗಾಲದಲ್ಲಿನ ಬಿಜೆಪಿಯ ಸುನಾಮಿಯನ್ನು ನೋಡಿದರೆ, ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುತ್ತಲೇ, ಈ ದೇಶವು ಚುನಾವಣ ರಣತಂತ್ರಗಾರರೊಬ್ಬರನ್ನು ಕಳೆದುಕೊಳ್ಳಲಿದೆ’ ಎಂದು ಹೇಳಿದ್ದಾರೆ.

ದಾಂಪತ್ಯಕ್ಕೆ ಅಂತ್ಯ ಹಾಡಿದ ರಾಜಕೀಯ?
ಪ.ಬಂಗಾಲದಲ್ಲಿ ದಂಪತಿಯ “ರಾಜಕೀಯ ಒಲವು’ ಅವರ ದಾಂಪತ್ಯಕ್ಕೆ ಹುಳಿ ಹಿಂಡಿದೆ. ಬಿಜೆಪಿ ಸಂಸದ ಸೌಮಿತ್ರ ಖಾನ್‌ ಅವರ ಪತ್ನಿ ಸುಜಾತಾ ಮೊಂಡಲ್‌ ಖಾನ್‌ ಸೋಮವಾರ ಟಿಎಂಸಿಗೆ ಸೇರ್ಪಡೆ ಯಾಗಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆಯೇ ಕೆಂಡಾ ಮಂಡಲರಾದ ಸೌಮಿತ್ರ ಖಾನ್‌, “ನಮ್ಮಿಬ್ಬರ ಸಂಬಂಧ ಇಲ್ಲಿಗೇ ಅಂತ್ಯ ವಾಯಿತು’ ಎಂದು ಹೇಳಿ ಪತ್ನಿಗೆ ವಿಚ್ಛೇದನದ ಅರ್ಜಿಯನ್ನು ರವಾನಿಸಿದ್ದಾರೆ!

Advertisement

Udayavani is now on Telegram. Click here to join our channel and stay updated with the latest news.

Next