ಮೆಲ್ಬೋರ್ನ್: ಸುಮಾರು ಮೂರು ವರ್ಷಗಳ ಬಳಿಕ ಟೆಸ್ಟ್ ಶತಕ ಸಿಡಿಸಿದ ಡೇವಿಡ್ ವಾರ್ನರ್ ತಮ್ಮ ಶತಕದ ಬರ ನೀಗಿಸಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಮೆಲ್ಬರ್ನ್ ಟೆಸ್ಟ್ ಪಂದ್ಯದಲ್ಲಿ ಡೇವಿಡ್ ವಾರ್ನರ್ ಭರ್ಜರಿ ದ್ವಿಶತಕ ಸಿಡಿಸಿ ಸಂಭ್ರಮಿಸಿದ್ದಾರೆ.
ತನ್ನ ನೂರನೇ ಟೆಸ್ಟ್ ಪಂದ್ಯವಾಡುತ್ತಿರುವ ವಾರ್ನರ್ ದ್ವಿಶತಕದೊಂದಿಗೆ ಎಂಸಿಜಿ ಯಲ್ಲಿ ಮೆರೆದಾಡಿದ್ದಾರೆ.
ಇದನ್ನೂ ಓದಿ:2023ರಲ್ಲಿ ನಡೆಯಲಿದೆ ಸಿವಿಲ್ ವಾರ್…ಬಳಿಕ ಎಲಾನ್ ಮಸ್ಕ್ ಅಮೆರಿಕದ ಅಧ್ಯಕ್ಷರಾಗ್ತಾರೆ: ಡಿಮಿಟ್ರಿ ಭವಿಷ್ಯವಾಣಿ!
254 ಎಸೆತಗಳಲ್ಲಿ ದ್ವಿಶತಕ ಪೂರೈಸಿದ್ದ ಡೇವಿಡ್ ವಾರ್ನರ್ ತಮ್ಮ ಐಕಾನಿಕ್ ಶೈಲಿಯಲ್ಲಿ ಸಂಭ್ರಮಿಸಿದರು. ಹೆಲ್ಮೆಟ್ ಮತ್ತು ಬ್ಯಾಟನ್ನು ಗಾಳಿಯಲ್ಲಿ ಪಂಚ್ ಮಾಡಿ ಕುಣಿದಾಡಿದರು. ಆದರೆ ಈ ಸಂಭ್ರಮ ಹೆಚ್ಚು ಹೊತ್ತು ನಿಲ್ಲಿಲ್ಲ. ಸಂಭ್ರಮಾಚರಣೆ ಮುಗಿಯುತ್ತಿದ್ದಂತೆ ಅವರಿಗೆ ಕಾಲಿನಲ್ಲಿ ಸೆಳೆತ ಕಾಣಿಸಿಕೊಂಡಿತು.
ಇದರಿಂದ ವಾರ್ನರ್ ತನ್ನ ತೊಡೆಗಳನ್ನು ಹಿಡಿದುಕೊಂಡಿರುವುದು ಕಂಡುಬಂತು. ಹೀಗಾಗಿ ವಾರ್ನರ್ ಆಟದಲ್ಲಿ ಮುಂದುವರೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ಅವರು ಗಾಯದಿಂದ ನಿವೃತ್ತಿ ಹೊಂದಬೇಕಾಯಿತು.