Advertisement

ಈ ಗ್ರಾಮದ ಜನರಿಗೆ, ಶಾಲಾ ಮಕ್ಕಳಿಗೆ ಮಂಗಗಳದ್ದೇ ಕಿರಿಕಿರಿ : ಮಂಗಗಳ ಸ್ಥಳಾಂತರಕ್ಕೆ ಒತ್ತಾಯ

08:44 AM Aug 04, 2022 | Team Udayavani |

ದೋಟಿಹಾಳ: ಗ್ರಾಮದ ಗ್ರಾಮಸ್ಥರಿಗೆ ಮಂಗಗಳದ್ದೇ ದೊಡ್ಡ ತಲೆನೋವು. ಇಲ್ಲಿನ ಶಾಲಾ ಮಕ್ಕಳು ಶಾಲೆಗೆ ಹೋಗಿ ಬರುವಾಗ ಮಂಗಗಳ(ಕೋತಿ)ನ್ನು ಕಂಡು ಓಡಿಹೋಗುವಂಥ ಭಯದ ಸನ್ನಿವೇಶ ಇದೆ.. ಇನ್ನೂ ಗ್ರಾಮಸ್ಥರು ಕಳೆದ ಒಂದು ತಿಂಗಳಿನಿAದ ಮಂಗಗಳ ಕಾಟಕ್ಕೆ ಬೇಸತ್ತು ಹೋಗಿದ್ದಾರೆ. ಹೀಗಾಗಿ ಅರಣ್ಯ ಇಲಾಖೆಯವರು ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Advertisement

ಕಳೆದ ಒಂದು ವರ್ಷಗಳಿಂದಲೂ ಊರಿನಲ್ಲಿ ಬೀಡು ಬಿಟ್ಟಿರುವ 50ಕ್ಕೂ ಹೆಚ್ಚು ಮಂಗಗಳು ಗ್ರಾಮದ ಜನತೆಗೆ ಒಂದಿಲ್ಲೊAದು ಕಾಟ ನೀಡುತ್ತಾ ಬಂದಿವೆ. ಊರಿನ ಜನರೆಲ್ಲ ಮಂಗಗಳ ಕಾಟಕ್ಕೆ ಬೇಸತ್ತು ಹೋಗಿದ್ದಾರೆ. ಮಕ್ಕಳನ್ನು ರಸ್ತೆಯಲ್ಲಿ ಬಿಡಲಾಗುತ್ತಿಲ್ಲ. ಹೊಲಗಳಲ್ಲಿ ಹಣ್ಣಿನ ಬೆಳೆ ತೆಗೆಯಲಾಗುತ್ತಿಲ್ಲ ಎಂಬುದು ಊರ ಜನರ ಗೋಳು.. ಗ್ರಾಮದಲ್ಲಿ ಸುಮಾರು 400ಕ್ಕೂ ಹೆಚ್ಚು ಮನೆಗಳಿವೆ. ಅಲ್ಲಿರುವ ಜನರು ಹಗಲು ರಾತ್ರಿ ಎನ್ನದೆ ಸದಾಕಾಲ ಬಾಗಿಲು ಮುಚ್ಚಿಕೊಂಡಿರಬೇಕು. ಇನ್ನೂ ಮನೆಗಳ ಮೇಲೆ ಹೊದಿಸಿರುವ ಜಿಂಕ್‌ಶೀಟೆ(ತಗಡು) ಮೇಲೆ ಜಿಗಿಯುತ್ತಿರುವುದರಿಂದ ಶೀಟ್‌ಗಳು ಬೆಂಡಾಗುತ್ತಿವೆ. ಮಂಗಗಳ ಉಪಟಳವನ್ನು ತಪ್ಪಿಸಲು ಗ್ರಾಮಸ್ಥರು ಮನೆಗಳ ಮಾಳಿಗೆ ಏರಿದರೆ. ಜನರನೇ ಮಂಗಗಳು ಎದ್ದರುಸುತ್ತಿವೆ. ಮನೆಗಳ ಮುಂದೇ ಒಣಗಿಸಲು ಇಡುವ ನಾನಾ ಪದಾರ್ಥಗಳನ್ನು ನಿರಾತಂಕವಾಗಿ ಮಂಗಗಳು ಎತ್ತಿಕೊಂಡು ಒಯ್ಯುತ್ತವೆ ಈ ಬಗ್ಗೆ ಗ್ರಾಮಸ್ಥರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಮನೆ ಲೂಟಿ: ಬೆಳಗಾದಂತೆ ಮಂಗಗಳು ಕೆಲವು ಗುಂಪುಗಳಾಗಿ ಗ್ರಾಮದ ಎಲ್ಲಾ ಮನೆಯ ಮೇಲೆ ಸವಾರಿ ಹೊರಡುತ್ತವೆ. ಇಲ್ಲಿನ ಅಷ್ಟೂ ಮನೆಗಳ ಅಡುಗೆ ಕೋಣೆಗಳು ಎಲ್ಲಾ ಕೋತಿಗಳಿಗೂ ಚಿರಪರಿಚಿತವಾಗಿಬಿಟ್ಟಿದೆ. ಮನೆಯವರು ಬಾಗಿಲನ್ನು ತೆರೆದು ಕೆಲಸದಲ್ಲಿ ತೊಡಗಿದ್ದರೆ ಅಡುಗೆ ಮನೆಗೆ ನುಗ್ಗಿ ಎಲ್ಲವನ್ನು ಸೂರೆ ಮಾಡುವುದರೊಂದಿಗೆ ತಮ್ಮ ಕೈಗೆ ಸಿಕ್ಕ ವಸ್ತುಗಳನ್ನು ಹಿಡಿದುಕೊಂಡು ಹೋಗುತ್ತವೆ. ಅಲ್ಲದೆ ಮನೆಯ ಮೇಲಿನ ಹಂಚು ತೆರೆದು ಒಳ ಪ್ರವೇಶಿಸಿ ಎಲ್ಲವನ್ನು ಹಾಳು ಮಾಡುತ್ತಿವೆ. ಇವುಗಳನ್ನು ಓಡಿಸಲು ಮುಂದಾದರೆ ಬೆದರಿಸು ವಷ್ಟು ಗಟ್ಟಿಯಾಗಿ ಬೇರೂರಿವೆ. ನಾವೇನಾದರೂ ಓಡಿಸಲು ಮುಂದಾದರೆ ನಮ್ಮ ಮೇಲೂ ಗುರ್ ಎಂದು ಅಟ್ಟಿ ಬರುತ್ತವೆ. ಹಾಗಾಗಿ ನಾವುಗಳು ಕೈಯಲ್ಲಿ ದೊಣ್ಣೆ ಹಿಡಿದು ಓಡಾಡ ಬೇಕಿದೆ ಎಂದು ಗ್ರಾಮಸ್ಥರು ಅಲವತ್ತುಕೊಳ್ಳುತ್ತಾರೆ.

ಇನ್ನೂ ಮನೆಗಳ ಮೇಲೆ ಹೊದಿಸಿರುವ ಜಿಂಕ್‌ಶೀಟೆ(ತಗಡು) ಮೇಲೆ ಜಿಗಿಯುತ್ತಿರುವುದರಿಂದ ಶೀಟ್‌ಗಳು ಬೆಂಡಾಗುತ್ತಿವೆ. ಜನರನೇ ಮಂಗಗಳು ಎದ್ದರುಸುತ್ತಿವೆ. ಗ್ರಾಮದಲ್ಲಿ ಮಂಗಗಳ ಉಪಟಳ ಹೆಚ್ಚಿಗಿದು ಗ್ರಾಮಸ್ಥರಿಗೆ ಸಾಕಾಗಿದೆ. ಹೀಗಾಗಿ ಅರಣ್ಯ ಇಲಾಖೆಯವರು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಪುಲಿಕೇಶ ಕೊಳ್ಳಿ, ಸಂಗನಗೌಡ ಕಡೆಕೊಪ್ಪ, ಖಾಜೆಸಾಬ ಗಚ್ಚಿನಮನಿ, ಅಬ್ದುಲ್ ಖಾದರ ಬಿಜಕತ್ತಿ ಸೇರಿದಂತೆ ಇತರರು ಒತ್ತಾಯಿಸಿದ್ದಾರೆ.

ಗ್ರಾಮದಲ್ಲಿ ಮಂಗಗಳ ಹಾವಳಿ ಹೆಚ್ಚಾಗಿರುವುದು ಗ್ರಾಮಸ್ಥರಿಂದ ತಿಳಿದು ಬಂದಿದ್ದು. ಅವುಗಳನ್ನು ಬೇರೆ ಕಡೆ ಸ್ಥಳಾಂತರಿಸಲು ಅರಣ್ಯ ಇಲಾಖೆಯವರಿಗೆ ಪತ್ರ ಬರೆದು ಸೂಕ್ತ ಕ್ರಮಕೈಗೊಳ್ಳುತ್ತೇವೆ.
– ಮುತ್ತಪ್ಪ ಛಲವಾದಿ. ಪಿಡಿಒ ದೋಟಿಹಾಳ ಗ್ರಾಪಂ.

Advertisement

ದೋಟಿಹಾಳ ಗ್ರಾಮದಲ್ಲಿ ಮಂಗಗಳ ಹಾವಳಿಯ ಬಗ್ಗೆ ಮಾಹಿತಿ ಇಲ್ಲ. ಗ್ರಾಪಂನಿAದ ಅಥವಾ ಗ್ರಾಮಸ್ಥರಿಂದ ದೂರು ಬಂದರೆ ಮಂಗಗಳನ್ನು ಬೇರೆ ಕಡೆಗೆ ಬಿಟ್ಟುಬರಲು ಅವಕಾಶ ಇದೆ. ವೃತ್ತಿನಿರತರನ್ನು ಸ್ಥಳಕ್ಕೆ ಕೆರಯಿಸಿ, ಮಂಗಗಳನ್ನು ಬೇರೆ ಕಡೇಗೆ ಸಾಗಿಸವ ಕೆಲಸ ಮಾಡುತ್ತೇವೆ.
– ಶಿವಶಂಕರ ರ‍್ಯಾವಣಿಕಿ, ಉಪವಲಯ ಅರಣ್ಯ ಅಧಿಕಾರಿ ಕುಷ್ಟಗಿ.

Advertisement

Udayavani is now on Telegram. Click here to join our channel and stay updated with the latest news.

Next