Advertisement
ಮಾಜಿ ಸೈನಿಕರ ಕುಟುಂಬಕ್ಕೆ ನಿವೇಶನ ಇಲ್ಲದಿರುವುದು ಗಮನಕ್ಕೆ ಬಂದಿದ್ದು, ನಿವೇಶನ ಒದಗಿಸಲು ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.ವಾರ್ಡ್ ನಂ. 8ರಲ್ಲಿ ನಿರ್ಮಿಸಿರುವ ನೀರಿನ ಟ್ಯಾಂಕ್ ಸೋರಿಕೆಯಾಗುತ್ತಿದ್ದು ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು ಈವರೆಗೆ ಕ್ರಮವಹಿಸಿಲ್ಲ ಎಂದು ಸದಸ್ಯ ಮೊಹ್ಮದ ಚಾವುಷ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕಳೆದ 2 ವರ್ಷಗಳ ಹಿಂದೆ ಚರಂಡಿ ಕಾಮಗಾರಿಗೆ ಟೆಂಡರ್ ಆದರೂ ಈವರೆಗೆ ಕಾಮಗಾರಿ ಆರಂಭಿಸಿಲ್ಲ ಎಂದು ಗಮನ ಸೆಳೆದರು.
ಪೌರಾಯುಕ್ತ ಬಕ್ಕಪ್ಪ ಅವರಿಗೆ ಸೂಚನೆ ನೀಡಿದರು. ಸದಸ್ಯ ಅಂಬಯ್ಯ ಶಾಬಾದಿ ಮಾತನಾಡಿ, ಸಾರ್ವಜನಿಕರಿಗೆ ಖಾತಾ ನಕಲು, ವ್ಯಾಪಾರ ಪರವಾನಗಿ ಪತ್ರ ಸೇರಿದಂತೆ ಇತರೆ ಸೇವೆ ಪಡೆಯಲು ಒಂದೇ ಸೂರಿನಡಿ ಸೌಕರ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಸದಸ್ಯ ಮಂಜುನಾಥ ದಾಸನಕೇರಿ ಮಾತನಾಡಿ, ನಗರಸಭೆಯಲ್ಲಿ ದಲ್ಲಾಳಿಗಳ ಹಾವಳಿ ಸಂಪೂರ್ಣ ತಡೆಯಬೇಕು.
Related Articles
Advertisement
ಇದೇ ವೇಳೆ ನಾಮನಿರ್ದೇಶಿತ ಸದಸ್ಯರಾಗಿ ಆಯ್ಕೆಯಾದ ಆನಂದ ಗಡ್ಡಿಮನಿ, ಸುನಿತಾ ಚವ್ಹಾಣ, ಸಾಬಣ್ಣ ಪರಶುರಾಮ, ಗೋಪಾಲ ದಾಸನಕೇರಿ, ಅಜಯ ಸಿನ್ನೂರ ಅವರನ್ನು ಸನ್ಮಾನಿಸಲಾಯಿತು. ಈ ವೇಳೆ ನಗರಸಭೆ ಉಪಾಧ್ಯಕ್ಷೆ ಪ್ರಭಾವತಿ ಕಲಾಲ್, ಸದಸ್ಯರಾದ ವೆಂಕಟರಡ್ಡಿ, ಗಣೇಶ ದುಪ್ಪಲ್ಲಿ, ಲಲಿತಾ ಅನಪೂರ, ಶಹಿಸ್ತಾ ಸುಲ್ತಾನಾ, ಹಣಮಂತ ನಾಯಕ ಇತರರಿದ್ದರು.
ಪುತ್ಥಳಿ ನಿರ್ಮಾಣಕ್ಕೆ ಕಾನೂನು ಪ್ರಕಾರ ಅನುಮತಿ ಶರಣರು, ಮಹಾ ಪುರುಷರು, ಸ್ವಾತಂತ್ರ್ಯ ಹೋರಾಟಗಾರರ ಪುತ್ಥಳಿ ನಿರ್ಮಾಣಕ್ಕೆ ಸುಪ್ರೀಂಕೋರ್ಟ್ ಆದೇಶ ಮತ್ತು ಸರ್ಕಾರದ ಸುತ್ತೋಲೆಯಂತೆ 9 ನಿಯಮಗಳಿವೆ. ಆಯಾ ಸಂಘ ಸಂಸ್ಥೆಗಳು ಸ್ಥಳ ಹೊಂದಿರುವುದು, ಸೂಕ್ತ ನಿರ್ವಹಣೆ ಹಾಗೂ ಭದ್ರತೆ ಅವರದ್ದೇ ಜವಾಬ್ದಾರಿ ಆಗಿರುವುದರಿಂದ ನಿಯಮಗಳಿಗೆಲ್ಲ ಒಪ್ಪಿಗೆ ಮುಚ್ಚಳಿಕೆಯೊಂದಿಗೆ ಸೂಕ್ತ ದಾಖಲೆ ಸಲ್ಲಿಸಿದವರಿಗೆ ನಿಯಮದಂತೆ ಅವಕಾಶ ನೀಡಲು ಸಭೆಯಲ್ಲಿ ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿದರು.