Advertisement
ಗುರುವಾರ ಶ್ವೇತಭವನದ ರೋಸ್ ಗಾರ್ಡನ್‌ನಲ್ಲಿ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಈ ಒಪ್ಪಂದ ಅಮೆರಿಕದ ಪಾಲಿಗೆ “ಆರ್ಥಿಕ ಹೊರೆ’ಯಾಗಲಿದೆ ಎಂಬ ಕಾರಣ ಮುಂದಿಟ್ಟಿದ್ದಾರೆ. ತಮ್ಮ ದೇಶದ ಉದ್ಯಮಿಗಳು, ಕೆಲಸಗಾರರು ಮತ್ತು ತೆರಿಗೆದಾರರಿಗೆ ಅನುಕೂಲವಾಗುವಂತೆ ನಿಯಮಗಳನ್ನು ಮರುರೂಪಿಸಿದರೆ ಮಾತ್ರ ಹೊಸ ಒಪ್ಪಂದ ಮಾಡಿಕೊಳ್ಳುವ ಅಥವಾ ಮತ್ತೆ ಪ್ಯಾರಿಸ್ ಒಪ್ಪಂದದ ಭಾಗವಾಗುವ ಬಗ್ಗೆ ಯೋಚಿಸುವುದಾಗಿ ಹೇಳಿದ್ದಾರೆ. ಒಟ್ಟಲ್ಲಿ ಹಿಂದಿನ ಅಧ್ಯಕ್ಷ ಬರಾಕ್ ಒಬಾಮರ ಮಹತ್ತರ ಪ್ರಯತ್ನಕ್ಕೂ ಎಳ್ಳುನೀರು ಬಿಟ್ಟಿದ್ದಾರೆ ಟ್ರಂಪ್.
Related Articles
Advertisement
ಭಾರತದ ಮೇಲೆ ಗೂಬೆವಾಯುಮಾಲಿನ್ಯದ ವಿಚಾರ ಬಂದಾಗಲೆಲ್ಲ ಭಾರತದ ಮೇಲೆ ಗೂಬೆ ಕೂರಿಸುವ ಪಾಶ್ಚಿಮಾತ್ಯ ಸಂಪ್ರದಾಯವನ್ನೇ ಮುಂದುವರಿಸಿರುವ ಅಮೆರಿಕ ಅಧ್ಯಕ್ಷ, “”ಭಾರತ ಮತ್ತು ಚೀನಾದಂಥ ವಿಶ್ವದ ಅತಿ ಮಾಲಿನ್ಯಕಾರಕ ರಾಷ್ಟ್ರಗಳಿಗೆ ಪ್ಯಾರಿಸ್ ಹವಾಮಾನ ಒಪ್ಪಂದ ಹೆಚ್ಚು ಅನುಕೂಲಕರವಾಗಿದೆ. ಈ ಒಪ್ಪಂದದ ಮೂಲಕ ವಿದೇಶಿ ದೇಣಿಗೆಯ ರೂಪದಲ್ಲಿ ಶತಶತಕೋಟಿ ಮುನ್ನೆರವು ಪಡೆಯುವುದಕ್ಕೆ ಭಾರತಕ್ಕೆ ಸಾಧ್ಯವಾಗುತ್ತದೆ. ಇನ್ನು ಚೀನಾಕ್ಕೆ 13 ವರ್ಷದವರೆಗೆ ನೂರಾರು ಕಲ್ಲಿದ್ದಲು ಗಣಿಗಳನ್ನು ಸ್ಥಾಪಿಸುವುದಕ್ಕೆ ಮತ್ತು ಭಾರತ 2020ರ ವೇಳೆಗೆ ತನ್ನಲ್ಲಿನ ಕಲ್ಲಿದ್ದಲು ಗಣಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸಿಕೊಳ್ಳಲು ಈ ಒಪ್ಪಂದ ಅವಕಾಶ ಕೊಟ್ಟಿದೆ. ಆದರೆ ನಾವು(ಅಮೆರಿಕ) ನಮ್ಮಲ್ಲಿರುವ ಗಣಿಗಳನ್ನು ಕಿತ್ತೆಸೆಯಬೇಕು…” ಎಂದು ದೂಷಿಸಿದ್ದಾರೆ.
ಆದಾಗ್ಯೂ ಜಾಗತಿಕ ಹಸಿರು ಮನೆ ಅನಿಲ ಹೊರಸೂಸುವಿಕೆಯಲ್ಲಿ ವಿಶ್ವದಲ್ಲಿ ಎರಡನೇ ಸ್ಥಾನದಲ್ಲಿರುವ ಅಮೆರಿಕ ಭಾರತದತ್ತ ಕೈ ತೋರಿಸುತ್ತಿರುವುದು ಅಚ್ಚರಿಗೆ ಕಾರಣವಾಗಿದೆ. ಯುರೋಪಿಯನ್ ಕಮಿಷನ್‌ನ ವರದಿಯ ಪ್ರಕಾರ ಜಾಗತಿಕ ಕಾರ್ಬನ್ ಹೊರಸೂಸುವಿಕೆಯಲ್ಲಿ ಚೀನಾ ಮೊದಲ ಸ್ಥಾನದಲ್ಲಿದ್ದು(29.5 ಪ್ರತಿಶತ), ಡೊನಾಲ್ಡ್ ಟ್ರಂಪ್‌ರ ರಾಷ್ಟ್ರ ಅಮೆರಿಕ ಹೊರಸೂಸುವ ಕಾರ್ಬನ್ ಪ್ರಮಾಣ 14.34ರಷ್ಟಿದೆ. ಯುರೋಪಿಯನ್ ಒಕ್ಕೂಟ(ಶೇ.9.6) ಮೂರನೇ ಸ್ಥಾನದಲ್ಲಿದ್ದರೆ, ಭಾರತವಿರುವುದು ನಾಲ್ಕನೇ ಸ್ಥಾನದಲ್ಲಿ. ಪ್ಯಾರಿಸ್ ಒಪ್ಪಂದ ಇದ್ದರೂ, ಇಲ್ಲದಿದ್ದರೂ ಭವಿಷ್ಯದ ತಲೆಮಾರಿಗಾಗಿ ಹವಾಮಾನ ರಕ್ಷಣೆಗೆ ಭಾರತ ಬದ್ಧವಾಗಿದೆ. ಭಾರತ ಹಿಂದಿನಿಂದಲೂ ಪ್ರಕೃತಿಯನ್ನು ಆರಾಧಿಸುವ ಸಂಪ್ರದಾಯವನ್ನು ಹೊಂದಿದೆ.
– ನರೇಂದ್ರ ಮೋದಿ, ಪ್ರಧಾನಿ ಒಪ್ಪಂದದ ಉದ್ದೇಶವೇನು?
ಪ್ಯಾರಿಸ್ ಒಪ್ಪಂದದ ಪ್ರಮುಖ ಉದ್ದೇಶ ಈ ಶತಮಾನದ ಅಂತ್ಯದ ವೇಳೆಗೆ ಜಾಗತಿಕ ಸರಾಸರಿ ತಾಪಮಾನವನ್ನು 2 ಡಿಗ್ರಿ ಹೆಚ್ಚಾಗದಂತೆ(ಕೈಗಾರಿಕಾ ಕ್ರಾಂತಿಯ ಪೂರ್ವಕ್ಕೆ ಹೋಲಿಸಿದಾಗ) ತಡೆಯುವುದು. ಇದು ಒಂದೇ ರಾಷ್ಟ್ರದಿಂದಾಗುವ ಕೆಲಸವಲ್ಲವಾದ್ದರಿಂದ ಜಗತ್ತಿನ ದೇಶಗಳೆಲ್ಲ ಜೊತೆಗೂಡಿ ಈ ಒಪ್ಪಂದಕ್ಕೆ ಬಂದವು(ಸಿರಿಯಾ ಮತ್ತು ನಿಕಾರಾಗ್ವಾ ಹೊರತುಪಡಿಸಿ). ಜಾಗತಿಕ ಸರಾಸರಿ ತಾಪಮಾನ 2 ಡಿಗ್ರಿಗಿಂತಲೂ ಹೆಚ್ಚಾದರೆ ಹಿಮಗಡ್ಡೆಗಳು ಕರಗಿ ಸಮುದ್ರಮಟ್ಟ ಹೆಚ್ಚಾಗುತ್ತದೆ, ಹವಾಮಾನ ವಿಪರೀತ ಬದಲಾಗುತ್ತದೆ, ಆಹಾರ ಮತ್ತು ನೀರಿನ ಅಭಾವ ಎದುರಾಗುತ್ತದೆ. ಇಂದು ಹಸಿರುಮನೆ ಅನಿಲದ ಪ್ರಮಾಣ ಹೆಚ್ಚಾಗಿರುವುದಕ್ಕೆ ಪ್ರಮುಖ ಕಾರಣ ಕೈಗಾರಿಕೀಕರಣ. ಕೈಗಾರಿಕೀಕರಣದಿಂದಲೇ ಜಗತ್ತಿನ ಶ್ರೀಮಂತರಾಷ್ಟ್ರಗಳಾಗಿ ಬದಲಾದ ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟದ ರಾಷ್ಟ್ರಗಳೇ ಈ ಮಾಲಿನ್ಯದ ಪ್ರಮುಖ ಅಪರಾಧಿಗಳು. (ಈಗ ಚೀನಾ ಕಾರ್ಬನ್ ಎಮಿಷನ್‌ನಲ್ಲಿ ನಂಬರ್ ಒನ್ ಸ್ಥಾನದಲ್ಲಿದೆಯಾದರೂ, ಪಾಶ್ಚಿಮಾತ್ಯ ರಾಷ್ಟ್ರಗಳು ಬಳಸುತ್ತಿರುವ ಬಹುತೇಕ ವಸ್ತುಗಳು ಚೀನಾದಲ್ಲೇ ಉತ್ಪಾದನೆಯಾಗುತ್ತಿವೆ ಎನ್ನುವುದನ್ನೂ ಗಮನಿಸಬೇಕು). ಆಗಿರುವ ಅನಾಹುತವನ್ನು ಅರಿತ ಅಭಿವೃದ್ಧಿಹೊಂದಿದ ರಾಷ್ಟ್ರಗಳು ಜಗತ್ತನ್ನು ಉಳಿಸಲು ಇಂಥದ್ದೊಂದು ಕ್ರಮದ ಅಗತ್ಯವಿದೆ ಎಂದೊಪ್ಪಿಕೊಂಡವು. ಈ ಕಾರಣಕ್ಕಾಗಿಯೇ ಅಂದಿನ ಅಧ್ಯಕ್ಷ ಒಬಾಮಾ ಪ್ಯಾರಿಸ್ ಒಪ್ಪಂದಕ್ಕಾಗಿ ಬಹಳ ಶ್ರಮವಹಿಸಿ, ತಮ್ಮ ದೇಶ ಏನೇನು ಮಾಡಲಿದೆ ಎನ್ನುವ ಪಟ್ಟಿಯನ್ನೂ ಒಪ್ಪಿಸಿದ್ದರು. ಈ ಒಪ್ಪಂದಕ್ಕೆ ಸಹಿ ಹಾಕಲು ಹಿಂದೇಟು ಹಾಕುತ್ತಿದ್ದ ಭಾರತದ ಮನವೊಲಿಸುವಲ್ಲೂ ಅವರು ಪ್ರಮುಖ ಪಾತ್ರ ವಹಿಸಿದರು. ಆದರೆ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ತಮ್ಮದೇ ಆದ ಅನಿವಾರ್ಯತೆಗಳಿರುತ್ತವೆ. ಹೀಗಾಗಿ ಜಾಗತಿಕ ತಾಪಮಾನ ತಡೆಯಲ್ಲಿ ಅವುಗಳೂ ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದರೆ ಅವಕ್ಕೆ ಹಣ ಮತ್ತು ತಂತ್ರಜ್ಞಾನದ ಅಗತ್ಯವಿರುತ್ತದೆ. ಇದೇ ಕಾರಣದಿಂದಲೇ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಹಣ ಮತ್ತು ತಂತ್ರಜ್ಞಾನದ ನೆರವು ನೀಡುವ ವಾಗ್ಧಾನ ಮಾಡಿದವು ಅಭಿವೃದ್ಧಿಹೊಂದಿದ ರಾಷ್ಟ್ರಗಳು. ಭಾರತವೇನು ಮಾಡುತ್ತಿದೆ?: 2030ರ ವೇಳೆಗೆ ಸೋಲಾರ್ ಎನರ್ಜಿ, ವಿಂಡ್ ಎನರ್ಜಿಯಂಥ ನವೀಕರಿಸಬಹುದಾದ ಇಂಧನ ಮೂಲಗಳ ಬಳಕೆಯನ್ನು ಹೆಚ್ಚಿಸುತ್ತೇವೆ, 40 ಪ್ರತಿಶತದಷ್ಟು ವಿದ್ಯುತ್ತನ್ನು ಅವುಗಳಿಂದಲೇ ಪಡೆಯುತ್ತೇವೆ, ಅರಣ್ಯ ವಿಸ್ತರಣೆಯ ಮೂಲಕ ಕಾರ್ಬನ್ ಹೊರಸೂಸುವಿಕೆಯನ್ನು ನಿಯಂತ್ರಿಸುತ್ತೇವೆ ಎಂದು ಒಪ್ಪಂದದಲ್ಲಿ ಭರವಸೆ ನೀಡಿದೆ ಭಾರತ. 5 ವರ್ಷದ ಹಿಂದೆ ಭಾರತದ ಆರ್ಥಿಕತೆ ಕಲ್ಲಿದ್ದಲಿನ ಮೇಲೆ ಬಹಳ ಅವಲಂಬಿತವಾಗಿತ್ತು. ಆದರೆ ಪ್ಯಾರಿಸ್ ಒಪ್ಪಂದದ ನಂತರ ಕಲ್ಲಿದ್ದಲು ಯೋಜನೆಗಳನ್ನು ಕೈಬಿಡುತ್ತಾ, ಸೋಲಾರ್ ಶಕ್ತಿಯನ್ನು ಅಪ್ಪಿಕೊಳ್ಳುತ್ತಿದೆ. ಇದೇ ಮೊದಲ ಬಾರಿಗೆ ಸೋಲಾರ್ ವಿದ್ಯುತ್‌ನ ದರ ಸಾಂಪ್ರದಾಯಿಕ ಥರ್ಮಲ್ ವಿದ್ಯುತ್ ದರಕ್ಕಿಂತಲೂ ಕಡಿಮೆಯಾಗಿರುವುದು ವಿಶೇಷ. ಜುಲೈ 1ರಿಂದ ಅನುಷ್ಠಾನಕ್ಕೆ ಬರಲಿರುವ ಜಿಎಸ್‌ಟಿಯಲ್ಲಿ ಎಲೆಕ್ಟ್ರಿಕ್ ಕಾರ್‌ಗಳ ಮೇಲಿನ ತೆರಿಗೆಯನ್ನು 12 ಪ್ರತಿಶತಕ್ಕೆ ನಿಗದಿಗೊಳಿಸಿದ್ದರೆ, ಪೆಟ್ರೋಲ್-ಡೀಸೆಲ್ ಬಳಸುವ ಕಾರ್‌ಗಳಿಗೆ 28 ಪ್ರತಿಶತ ತೆರಿಗೆ ವಿಧಿಸಲಾಗುತ್ತದೆ. ಈ ಮೂಲಕ ತಾನು ತನ್ನ ಮಾತಿಗೆ ಬದ್ಧನಾಗಿದ್ದೇನೆ ಎಂದು ಭಾರತ ಜಗತ್ತಿದೆ ಸಾರುತ್ತಿದೆ. ಅಮೆರಿಕ ನಿರ್ಧಾರದಿಂದ ಏನಾಗಲಿದೆ?
ಸತ್ಯವೇನೆಂದರೆ ಭಾರತವಂತೂ ಟ್ರಂಪ್‌ರ ಈ ನಿರ್ಧಾರದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಏಕೆಂದರೆ ಭಾರತ ಈಗಾಗಲೇ ನಡೆಸಿರುವ ಪ್ರಯತ್ನದಲ್ಲಿ ಅಮೆರಿಕದ ಉಪಕಾರವೇನೂ ಇಲ್ಲ. ತನ್ನದೇ ತಂತ್ರಜ್ಞಾನ ಮತ್ತು ಹಣದ ಮೂಲಕ ಭಾರತ ಜಾಗತಿಕ ತಾಪಮಾನದ ವಿರುದ್ಧ ಸಮರ ಸಾರಿದೆ. ಭಾರತ-ಅಮೆರಿಕ ಜಂಟಿಯಾಗಿ ಸ್ವತ್ಛ ಇಂಧನ ಮತ್ತು ಹವಾಮಾನ ಬದಲಾವಣೆಗಳ ಕುರಿತು ಜಂಟಿ ಕಾರ್ಯಕ್ರಮಗಳನ್ನು ನಡೆಸುತ್ತಿವೆಯಾದರೂ, ಅವಕ್ಕೂ ಪ್ಯಾರಿಸ್ ಒಪ್ಪಂದಕ್ಕೂ ಸಂಬಂಧವಿಲ್ಲ. ಆದರೂ ಈ ಒಪ್ಪಂದದಿಂದ ಅಮೆರಿಕ ಹೊರನಡೆಯಬಾರದಿತ್ತು. ಏಕೆಂದರೆ ಆರ್ಥಿಕ ಮತ್ತು ತಂತ್ರಜ್ಞಾನ ರಿಸೋರ್ಸ್‌ಗಳನ್ನು ಕಲೆಹಾಕುವ ವಿಷಯದಲ್ಲಿ ಅಮೆರಿಕಕ್ಕೆ ಯಾವ ದೇಶವೂ ಸರಿಸಾಟಿಯಲ್ಲ. ಆದರೆ ಅಮೆರಿಕ ಇಲ್ಲವೆಂದರೂ ಉಳಿದ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಂತೂ ಇತರೆ ರಾಷ್ಟ್ರಗಳ ಸಹಾಯಕ್ಕೆ ಬರಲಿವೆ. ಅಮೆರಿಕ ಕೈಕೊಟ್ಟಿರುವುದರಿಂದ ಈಗ ಎಲ್ಲಾ ರಾಷ್ಟ್ರಗಳ ಮೇಲೂ ತುಸು ಹೊರೆ ಹೆಚ್ಚಾಗಲಿದೆ. ಆದರೆ ಅದೆಲ್ಲಕ್ಕಿಂತಲೂ ಮುಖ್ಯವಾಗಿ ಜಾಗತಿಕ ತಾಪಮಾನವನ್ನು “ಚೀನಾ ಹೆಣೆದ ಕಟ್ಟುಕಥೆ’ ಎಂದು ದೂರಿ ನಗೆಪಾಟಲಿಗೀಡಾಗಿದ್ದ ಟ್ರಂಪ್ ಅವರು, ಈಗ ಇಡೀ ದೇಶವನ್ನೇ ಜಗತ್ತಿನ ಮುಂದೆ ನಗೆಪಾಟಲಿಗೀಡಾಗಿಸಿದ್ದಾರೆ. ಕಲ್ಲಿದ್ದಲು ಗಣಿಗಾರಿಕೆಯನ್ನು ಪುನರುತ್ಥಾನಗೊಳಿಸುತ್ತೇನೆ, ಅಮೆರಿಕನ್ನರಿಗೆ ಕೆಲಸ ಕೊಡುತ್ತೇನೆ ಎಂಬ ಚುನಾವಣಾ ಪೂರ್ವ ಭರವಸೆಯನ್ನು ಈಡೇರಿಸುವ ಭರದಲ್ಲಿ ತಮ್ಮ ದೇಶದ ಇಮೇಜ್‌ಗೆ ಹಾನಿ ಮಾಡಿದ್ದಾರೆ ಟ್ರಂಪ್. ಟ್ರಂಪ್ ನಡೆಗೆ ವಿರೋಧ
ಹವಾಮಾನ ಒಪ್ಪಂದದಿಂದ ಹಿಂದೆ ಸರಿಯುವ ಟ್ರಂಪ್ ಸರ್ಕಾರದ ನಿರ್ಧಾರಕ್ಕೆ ಜಾಗತಿಕ ನಾಯಕರಿಂದ ತೀವ್ರ ಟೀಕೆ ಎದುರಾಗಿದೆ. ಆದರೆ ಭಾರತ, ಚೀನಾ, ರಷ್ಯಾ, ಬ್ರಿಟನ್ ಸೇರಿದಂತೆ ಒಪ್ಪಂದಕ್ಕೆ ಸಹಿಹಾಕಿರುವ ರಾಷ್ಟ್ರಗಳೆಲ್ಲ ಜಾಗತಿಕ ತಾಪಮಾನವನ್ನು ತಗ್ಗಿಸುವ ತಮ್ಮ ಪ್ರಯತ್ನಕ್ಕೆ ಬದ್ಧರಾಗಿರುವುದಾಗಿ ಹೇಳಿವೆ. ಕೇಂದ್ರ ಪರಿಸರ ಸಚಿವ ಹರ್ಷವರ್ಧನ್ “”ಯಾವುದೇ ರಾಷ್ಟ್ರ ಏನೇ ನಿರ್ಧಾರ ಮಾಡಲಿ, ಭಾರತ ಮಾತ್ರ ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನದ ಸಮಸ್ಯೆಯನ್ನು ನಿಯಂತ್ರಿಸುವ ಹೋರಾಟಕ್ಕೆ ಬದ್ಧವಾಗಿದೆ” ಎಂದಿದ್ದಾರೆ.
ಟ್ರಂಪ್ ಸರ್ಕಾರದ ನಡೆಗೆ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾರಿಂದಲೂ ವಿರೋಧ ವ್ಯಕ್ತವಾಗಿದೆ. “”ಭವಿಷ್ಯವನ್ನು ನಿರಾಕರಿಸುವ ಬೆರಳೆಣಿಕೆಯ ದೇಶಗಳ ಸಾಲಿನಲ್ಲಿ ಅಮೆರಿಕವನ್ನು ನಿಲ್ಲಿಸಲು ಹೊರಟಿದೆ ಅಮೆರಿಕದ ನಾಯಕತ್ವ. ಆದರೆ ನಮ್ಮ ರಾಜ್ಯಗಳು, ನಗರಗಳು, ಉದ್ಯಮಗಳು ಭವಿಷ್ಯದ ಪೀಳಿಗೆಯನ್ನು ಕಾಪಾಡುವ ಈ ಕಾರ್ಯವನ್ನು ಮುಂದುವರಿಸಲಿದ್ದಾರೆ ಎನ್ನುವ ಭರವಸೆ ನನಗಿದೆ” ಎಂದಿದ್ದಾರೆ. ಅಮೆರಿಕ ಈ ಒಪ್ಪಂದದಿಂದ ಹಿಂದೆ ಸರಿದಿರುವುದರಿಂದ, ಈಗ ಜಾಗತಿಕ ತಾಪಮಾನದ ಹೋರಾಟದಲ್ಲಿ ಜಗತ್ತಿನ ಇತರ ರಾಷ್ಟ್ರಗಳ ಮೇಲೆ ತುಸು ಹೊರೆ ಹೆಚ್ಚಾಗಲಿದೆ. ಆದರೆ ಈ ನಡೆಯ ಮೂಲಕ ವಿಶ್ವದ ಲೀಡರ್ ಆಗಿ ಎಲ್ಲರನ್ನೂ ಮುನ್ನಡೆಸುವ ಅವಕಾಶವನ್ನು ಕಳೆದುಕೊಂಡಿದೆ ಅಮೆರಿಕ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು. ಪ್ಯಾರಿಸ್ ಒಪ್ಪಂದ ಕೈಬಿಟ್ಟ ಅಮೆರಿಕ. ಟ್ವಿಟರ್ ಏನನ್ನುತ್ತದೆ? ಅಮೆರಿಕ ಸರ್ಕಾರ ಪ್ಯಾರಿಸ್ ಹವಾಮಾನ ಒಪ್ಪಂದದಿಂದ ಹಿಂದೆ ಸರಿದಿರುವುದರಿಂದ ನಮಗೆ ತುಂಬಾ ನಿರಾಸೆಯಾಗಿದೆ.
-ಜಸ್ಟಿನ್ ಟ್ರಿಡ್ಯು, ಕೆನಡಾ ಪ್ರಧಾನಿ ಪ್ಯಾರಿಸ್ ಒಪ್ಪಂದವನ್ನು ಅಮೆರಿಕ ವಿರೋಧಿ ಕುತಂತ್ರ ಎನ್ನುವಂತೆ ಬಣ್ಣಿಸಲಾಗುತ್ತಿದೆ. ಏನು ಮೂರ್ಖ ಜನರಪ್ಪಾ ಇವರು!
-ಗಿಜೊ¾àಡು ಈ ಒಪ್ಪಂದದಿಂದ ಹಿಂದೆ ಸರಿಯುವ ಮೂಲಕ ಟ್ರಂಪ್ ಅವರು ಅಮೆರಿಕದ ರಾಜತಾಂತ್ರಿಕತೆಗೆ ಮತ್ತು ವಿಜ್ಞಾನ ವಲಯಕ್ಕೆ ತೀವ್ರ ಮುಖಭಂಗವಾಗುವಂತೆ ಮಾಡಿದ್ದಾರೆ.
-ಅಲನ್‌ಡ್ರೇಕ್ ಪ್ಯಾರಿಸ್ ಒಪ್ಪಂದದಿಂದ ಹಿಂದೆ ಸರಿದರೆ ಅಮೆರಿಕ ಗ್ರೇಟ್ ಆಗುವುದಿಲ್ಲ. ಎಂಥ ಅಧ್ಯಕ್ಷರನ್ನು ನಾವು ಆಯ್ಕೆ ಮಾಡಿದೆವಪ್ಪ!
-ರೆಡ್‌ರೆಕಾಮನ್ ವ್ಯಂಗ್ಯವೇನೆಂದರೆ ಗಾರ್ಡನ್‌ನಲ್ಲಿ ನಿಂತುಕೊಂಡೇ ಟ್ರಂಪ್ ಅವರು ಜಾಗತಿಕ ತಾಪಮಾನ ಏರಿಕೆಯನ್ನು ಅಲ್ಲಗಳೆದದ್ದು!
-ಚೆಲ್ಸಿàಹ್ಯಾಂಡ್ಲರ್ ಈ ಭೂಮಂಡಲ ನಿಮ್ಮ ಆಟಿಕೆಯಲ್ಲ ಮಿಸ್ಟರ್ ಟ್ರಂಪ್. ನೀವು ಹೀಗೇ ಮಾಡುತ್ತಾ ಇದ್ದರೆ ಅಮೆರಿಕ ಅಧೋಗತಿಗಿಳಿಯಲಿದೆ.
-ಸ್ಟ್ರೀಟ್‌ಆರ್ಟ್ ಥ್ಯಾಂಕ್ ಯೂ ಟ್ರಂಪ್. ನಮ್ಮ ಹಣದಲ್ಲಿ ಚೀನಾ ಭಾರತ ಬೆಳೆಯುತ್ತಾ ಹೋಗುವ ಅಗತ್ಯವಿಲ್ಲ. ಅಮೆರಿಕದ ಹಿತಾಸಕ್ತಿಯೇ ನಮ್ಮ ಆದ್ಯತೆಯಾಗಬೇಕು.
-ಆ್ಯಂಡ್ರಿವ್‌ರಾಥ್ ಟ್ರಂಪ್ ಅಮೆರಿಕದ ಪಾಲಿಗೆ ದೊಡ್ಡ ಮುಜುಗರ. ಅವರ ನಾಯಕತ್ವದಲ್ಲಿ ನಾವು ಜಾಗತಿಕ ನಾಯಕತ್ವವನ್ನು ಕಳೆದುಕೊಳ್ಳುವುದು ಖಚಿತ.
-ಡಾಲೇìನ್ ಭಾರತ ಅತಿದೊಡ್ಡ ಮಾಲಿನ್ಯಕಾರಕ ರಾಷ್ಟ್ರವೆನ್ನುತ್ತಾರೆ ಟ್ರಂಪ್. ಸರ್, ನಿಮ್ಮ ದೇಶ ಜಗತ್ತಿಗೆ ಮಾಡಿರುವ ಹಾನಿಯನ್ನು ಮರೆಮಾಚಲು ಪ್ರಯತ್ನಿಸಬೇಡಿ.
-ಸಂಜಯ್ ಸಿಂಗ್ ಅಮೆರಿಕದ ಆರ್ಥಿಕತೆಯನ್ನು ದುರ್ಬಲಗೊಳಿಸುವುದಕ್ಕಾಗಿಯೇ ಪ್ಯಾರಿಸ್ ಒಪ್ಪಂದವನ್ನು ರಚಿಸಲಾಗಿತ್ತು. ಟ್ರಂಪ್ ನಿರ್ಧಾರ ಸರಿಯಾಗಿಯೇ ಇದೆ.
ಜಸ್ಟ್ ಬ್ರಾಂಡಾ ಭಾರತ ತನ್ನಲ್ಲಿರುವ ಕಲ್ಲಿದ್ದಲು ಘಟಕಗಳನ್ನೆಲ್ಲ ಹಿಂದೆ ತಳ್ಳಿ ಸೋಲಾರ್ ಶಕ್ತಿಯನ್ನು ಅಪ್ಪಿಕೊಳ್ಳುತ್ತಿರುವ ವಾಸ್ತವವನ್ನು ಅಮೆರಿಕ ಅರಿಯಲಿ.
-ಸುನಂದಾಶ್ರೀ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಭಾರತದತ್ತ ಬೆರಳು ತೋರಿಸುವ ಚಟ ಬಹಳ ಇದೆ. ಭಾರತ ವಿಶ್ವಶಕ್ತಿಯಾದ ಮೇಲೆ ಇವರು ಬೆರಳು ತೋರಿಸಲಿ ನೋಡೋಣ.
–ಅನಿಲ್‌ಬಯಕ್ಕೊಡನ್