Advertisement

ಜೂನ್‌ 25-26: ಅಮೆರಿಕ್ಕೆ ಪ್ರಧಾನಿ ಮೋದಿ, ಅಧ್ಯಕ್ಷ ಟ್ರಂಪ್‌ ಆಹ್ವಾನ

07:15 PM Jun 12, 2017 | udayavani editorial |

ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರು ಇದೇ ಜೂನ್‌ 25 ಮತ್ತು 26ರಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಆಹ್ವಾನದ ಮೇರೆಗೆ ಅಮೆರಿಕದಲ್ಲಿರುತ್ತಾರೆ. 

Advertisement

ಜೂನ್‌ 26ರಂದು ಮೋದಿ ಅಮೆರಿಕ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸುತ್ತಾರೆ. ಉಭಯ ನಾಯಕರೊಳಗಿನ ಮೊದಲ ಭೇಟಿ ಇದಾಗಲಿದೆ.

ಈ ವರ್ಷ ಜನವರಿಯಲ್ಲಿ ಟ್ರಂಪ್‌ ಅವರ ಅಧ್ಯಕ್ಷೀಯ ಉದ್ಘಾಟನೆ ಬಳಿಕ ಉಭಯ ನಾಯಕರು ಈ ತನಕ ಮೂರು ಬಾರಿ ಫೋನಿನಲ್ಲಿ ಮಾತನಾಡಿದ್ದಾರೆ. 
 
ಪ್ರಧಾನಿ ಮೋದಿ ಅವರು 2016ರ ಜೂನ್‌ನಲ್ಲಿ ಆಗಿನ ಅಧ್ಯಕ್ಷ ಬರಾಕ್‌ ಒಬಾಮಾ ಅವರ ಆಹ್ವಾನದ ಮೇರೆಗೆ ಅಮೆರಿಕಕ್ಕೆ ಕೊನೆಯ ಬಾರಿ ಭೇಟಿ ನೀಡಿದ್ದರು. ಆಗ ಮೋದಿ ಅವರು ಅಮೆರಿಕದ ಉಭಯ ಸದನಗಳನ್ನು ಉದ್ದೇಶಿಸಿ ಭಾಷಣವನ್ನೂ ಮಾಡಿದ್ದರು. 

ಪ್ರಧಾನಿ ಮೋದಿ ಅವರ ಮುಂಬರುವ ಅಮೆರಿಕ ಭೇಟಿಯನ್ನು ದೃಢೀಕರಿಸಿ ಭಾರತೀಯ ದೂತಾವಾಸ ಟ್ವೀಟ್‌ ಮಾಡಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next