ಶಿರ್ವ: ಕೇಂದ್ರೀಯ ಶಿಕ್ಷಣ ಮಂಡಳಿಯಿಂದ ಗ್ರೇಡ್ 11 ಮತ್ತು 12ರ ಸಿಬಿಎಸ್‌ಇ ಪಠ್ಯಕ್ರಮ ಮಾನ್ಯತೆ ಪಡೆದು, ಶಿರ್ವ ಡಾನ್ ಬೊಸ್ಕೊ ಆಂಗ್ಲ ಮಾಧ್ಯಮ ಶಾಲೆಯು ಸೀನಿಯರ್ ಸೆಕೆಂಡರಿ ಸ್ಕೂಲ್ ಆಗಿ ಮೇಲ್ದರ್ಜೆ ಗೇರಿದ್ದು, ನೂತನ ಶೈಕ್ಷಣಿಕ ವರ್ಷದ ಚಟುವಟಿಕೆಗಳ ಉದ್ಘಾಟನೆಯು ಜೂ. 29 ರಂದು ನೆರವೇರಿತು.
ಶಿರ್ವ ಆರೋಗ್ಯ ಮಾತಾ ದೇವಾಲಯದ ಪ್ರಧಾನ ಧರ್ಮಗುರು, ಶಾಲಾ ಸಂಚಾಲಕ ರೆ| ಫಾ| ಡೆನ್ನಿಸ್ ಡೇಸಾ ಸಂಸ್ಥೆಯ ಗ್ರೇಡ್ 11 ರ ಶೈಕ್ಷಣಿಕ ಚಟುವಟಿಕೆಗಳನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ರಾಷೀrÅಯ ಶಿಕ್ಷಣ ನೀತಿಯಂತೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ನುರಿತ ಶಿಕ್ಷಕ ವರ್ಗದಿಂದ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ಸಿಗಲಿದ್ದು, ವಿದ್ಯಾರ್ಥಿಗಳಲ್ಲಿರುವ ಸೃಜನಶೀಲತೆಯನ್ನು ಹೊರತರಲು ಉತ್ತಮ ಅವಕಾಶ ಲಭಿಸಿದಂತಾಗಿದೆ ಎಂದರು.
ಇದನ್ನೂ ಓದಿ: ಸವಣೂರು: ಕೋವಿಡ್ ವಾರಿಯರ್ಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ ಯುವಕನನ್ನು ಬಂಧಿಸಿದ ಪೊಲೀಸರು
ಉಡುಪಿ ಕೆಥೋಲಿಕ್ ಧರ್ಮಪ್ರಾಂತ್ಯದ ಬಿಷಪ್ ರೈ|ರೆ|ಡಾ| ಜೆಲಾಲ್ಡ್ ಐಸಾಕ್ ಲೋಬೋ ಮತ್ತು ಮಂಗಳೂರು ಕೆಥೋಲಿಕ್ ಶಿಕ್ಷಣ ಮಂಡಳಿಯ ಕಾರ್ಯದರ್ಶಿ ರೆ|ಫಾ| ಅಂಟನಿ ಶೇರಾ ವರ್ಚುವಲ್ ಅಗಿ ಆಶೀರ್ವಚನ ನೀಡಿ ಶುಭ ಹಾರೈಸಿದರು. ಮುಖ್ಯ ಅತಿಥಿ ಶಿರ್ವ ಗ್ರಾ.ಪಂ. ಅಧ್ಯಕ್ಷ ಕೆ.ಆರ್.ಪಾಟ್ಕರ್ ಮಾತನಾಡಿದರು. ಶಾಲೆಯ ಹಿತೈಷಿ ಗ್ರೇಸಿ ಜೆಸಿಂತಾ ಬಬೋìಜಾ ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿ ಬಡ ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗಾಗಿ ಸ್ಥಾಪಿಸಿದ ವಿದ್ಯಾರ್ಥಿ ದತ್ತಿ ನಿಧಿಯನ್ನು ಉದ್ಘಾಟಿಸಿದರು.
ಚರ್ಚ್ ಆರ್ಥಿಕ ಮಂಡಳಿಯ ಕಾರ್ಯದರ್ಶಿ ಲೀನಾ ಮಚಾದೋ,ಸದಸ್ಯರಾದ ಮೆಲ್ವಿನ್ ಅರಾನ್ಹಾ,ನೋರ್ಬರ್ಟ್ ಇ. ಮಚಾದೋ, ಜೂಲಿಯಾನ್ ರೊಡ್ರಿಗಸ್,ಮೆಲ್ವಿನ್ ಡಿ‡ಸೋಜಾ, ವಿಲ್ಸನ್ ರೊಡ್ರಿಗಸ್,ಪುಷ್ಪಾ ಫೆರ್ನಾಂಡಿಸ್, ಕ್ಯಾಂಪಸ್‌ನ ವಿವಿಧ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು,ಶಾಲಾಡಳಿತ ಮಂಡಳಿಯ ಸದಸ್ಯರು,ಉಪಪ್ರಾಂಶುಪಾಲೆ ಐರಿನ್ ಕಾಡೋìಜಾ ಹಾಗೂ ಶಿಕ್ಷಕ-ಶಿಕ್ಷಕೇತರ ವೃಂದ ಉಪಸ್ಥಿತರಿದ್ದರು.
ಪ್ರಾಂಶುಪಾಲೆ ಮರ್ಟಲ್‌ಎಲ್.ಎಫ್.ಲೂವಿಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿಬಿಎಸ್‌ಇ ಗ್ರೇಡ್ 11 ಮತ್ತು 12ರ ಕೋಆರ್ಡಿನೇಟರ್ ರೆ|ಫಾ| ರೊಲ್ವಿನ್ ಅರಾನ್ಹಾ ಸ್ವಾಗತಿಸಿದರು. ಶಿಕ್ಷಕಿ ಜೊಸ್ವಿಟಾ ಡಿ‡ ಸೋಜಾ ಕಾರ್ಯಕ್ರಮ ನಿರೂಪಿಸಿ, ರೂಪಾ ಮಸ್ಕರೇನಸ್ ವಂದಿಸಿದರು.