Advertisement

ಆ.31ಕ್ಕೆ ಸ್ವದೇಶಿ ಜಿಪಿಎಸ್‌ ಪರ್ಯಾಯ ಉಪಗ್ರಹ ನಭಕ್ಕೆ

07:00 AM Aug 24, 2017 | Team Udayavani |

ಬೆಂಗಳೂರು:  ಸ್ವದೇಶಿ ದಿಕ್ಸೂಚಿ ವ್ಯವಸ್ಥೆಗಾಗಿ ಉಡ್ಡಯನ ಮಾಡಿದ್ದ ಐಆರ್‌ಎನ್‌ಎಸ್‌ಎಸ್‌-1 ಎ ಉಪಗ್ರಹ ತಾಂತ್ರಿಕ ಸಮಸ್ಯೆಗೆ ಈಡಾಗಿರುವುದರಿಂದ ಪರ್ಯಾಯ ಉಪಗ್ರಹ ಹಾರಿಬಿಡಲು ಇಸ್ರೋ ತೀರ್ಮಾನಿಸಿದೆ. 

Advertisement

ಪರ್ಯಾಯ ಐಆರ್‌ಎನ್‌ಎಸ್‌ಎಸ್‌-1ಎಚ್‌ ಅನ್ನು ಆ.31ರಂದು ಪಿಎಸ್‌ಎಲ್‌ವಿ- ಎಸಿ-39 ರಾಕೆಟ್‌ ಮೂಲಕ ಉಡ್ಡಯನ ನಡೆಸಲಾಗುವುದು. 2013 ಜು.1ರಂದು ಹಾರಿಬಿಡಲಾಗಿದ್ದ ಹಳೆಯ ಉಪಗ್ರಹದಲ್ಲಿನ ಮೂರು ಪರಮಾಣು ಗಡಿ ಯಾರಗಳು ಕಾರ್ಯಾಚರಣೆ ಸ್ಥಗಿತಗೊಳಿಸಿದ್ದರಿಂದ ಸಮಸ್ಯೆ ಯಾಗಿದೆ. ಆದ್ದರಿಂದ ಆ.31ರ ಸಂಜೆ 6.59ಕ್ಕೆ ಶ್ರೀಹರಿ ಕೋಟಾದಲ್ಲಿ ಉಡ್ಡಯನ ನಡೆಯಲಿದೆ. ಇದರೊಂದಿಗೆ 6 ಪುಟ್ಟ ಉಪಗ್ರಹಗಳನ್ನೂ ಹಾರಿಬಿಡಲಾಗುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next