Advertisement

ಲಾಕ್ ಡೌನ್ ಎಫೆಕ್ಟ್ : ಪೆಟ್ರೋಲ್‌, ಡೀಸೆಲ್‌ ಮಾರಾಟ ಕುಸಿತ

02:22 AM Apr 07, 2020 | Hari Prasad |

ಲಾಕ್‌ ಡೌನ್‌ನಿಂದಾಗಿ ಬೇಡಿಕೆ ಕುಸಿದ ಹಿನ್ನೆಲೆಯಲ್ಲಿ ಮಾರ್ಚ್‌ ತಿಂಗಳಿನಲ್ಲಿ ದೇಶಾದ್ಯಂತ ಪೆಟ್ರೋಲ್‌ ಮಾರಾಟದಲ್ಲಿ ಶೇ.17.6, ಡೀಸೆಲ್‌ ಮಾರಾಟದಲ್ಲಿ ಶೇ.26ರಷ್ಟು ಕುಸಿತ ಕಂಡು ಬಂದಿದೆ.  ವಿಮಾನಗಳ ಹಾರಾಟ ಸ್ಥಗಿತಗೊಂಡ ಪರಿಣಾಮ ವಿಮಾನಯಾನ ಇಂಧನ (ಎಟಿಎಫ್) ಮಾರಾಟದಲ್ಲೂ ಶೇ.31.6ರಷ್ಟು ಕುಸಿತವಾಗಿದೆ.

Advertisement

ಮಾರ್ಚ್‌ ತಿಂಗಳಲ್ಲಿ ಪೆಟ್ರೋಲ್‌ ಮಾರಾಟ 1.943 ಮಿಲಿಯ ಟನ್‌ಗಳಿಗೆ, ಡೀಸೆಲ್‌ ಮಾರಾಟ 4.982 ಮಿಲಿಯ ಟನ್‌ಗಳಿಗೆ, ಎಟಿಎಫ್ ಮಾರಾಟ 4,63,000ಟನ್‌ಗಳಿಗೆ ಕುಸಿದಿದೆ ಎಂದು ಮೂಲಗಳು ತಿಳಿಸಿವೆ.

ಆದರೆ ಇದೇ ಅವಧಿಯಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಮಾರಾಟದಲ್ಲಿ ಶೇ.1.9ರಷ್ಟು, 2.286 ಮಿಲಿಯ ಟನ್‌ಗಳಿಗೆ ಏರಿಕೆ ಕಂಡು ಬಂದಿದೆ. ಈ ನಡುವೆ ಜಾಗತಿಕವಾಗಿ ಇಂಧನ ದರ ಕುಸಿಯುತ್ತಲೇ ಇದೆ.

Advertisement

Udayavani is now on Telegram. Click here to join our channel and stay updated with the latest news.

Next