Advertisement

ಮೇ 18ರಿಂದ ದೇಶೀಯ ವಿಮಾನ ಸೇವೆ? ಆರೋಗ್ಯ ಸೇತು ಇದ್ದರಷ್ಟೇ ಪ್ರಯಾಣ ಅವಕಾಶ

09:40 AM May 13, 2020 | Sriram |

ಹೊಸದಿಲ್ಲಿ: ಮಂಗಳವಾರದಿಂದ ಆಯ್ದ ಮಾರ್ಗಗಳಲ್ಲಿ ರೈಲು ಸಂಚಾರ ಆರಂಭವಾಗುತ್ತದೆ. ವಿಮಾನ ಯಾನ ಸಂಸ್ಥೆಗಳು ಮೇ 18ರಿಂದ ಹಂತ ಹಂತವಾಗಿ ದೇಶೀಯ ವೈಮಾನಿಕ ಸೇವೆ ಆರಂಭಿಸುವ ಲಕ್ಷಣಗಳು ನಿಚ್ಚಳವಾಗಿವೆ.

Advertisement

ನಾಗರಿಕ ವಿಮಾನಯಾನ ಖಾತೆ ಸಚಿವಾಲಯ ಈ ಬಗ್ಗೆ ಮಾಹಿತಿ ನೀಡಿದೆ. ಭದ್ರತಾ ವಿಭಾಗ ಮತ್ತು ನಾಗರಿಕ ವಿಮಾನ ಯಾನ ಮಹಾ ನಿರ್ದೇಶನಾಲಯದ ಅಧಿಕಾರಿ ಗಳು ಸೋಮವಾರ ದೇಶದ ವಿವಿಧ ನಗರಗಳ ವಿಮಾನ ನಿಲ್ದಾಣಗಳಿಗೆ ಭೇಟಿ ನೀಡಿ ವಾಣಿಜ್ಯ ವಿಮಾನಗಳ ಸೇವೆ ಆರಂಭಿಸುವ ಕುರಿತ ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ.

ಮೊದಲ ಹಂತದಲ್ಲಿ ಶೇ.25 ಪ್ರದೇಶಗಳಿಗೆ ಮಾತ್ರ ಸೇವೆ ಇರಲಿದೆ. ಈ ವೇಳೆ ಎರಡು ತಾಸುಗಳಿಗಿಂತಲೂ ಕಡಿಮೆ ಪ್ರಯಾಣ ಅವಧಿಯ ವಿಮಾನಗಳಲ್ಲಿ ಆಹಾರ ಸೌಲಭ್ಯ ಒದಗಿಸದೆ ಇರಲು ಚಿಂತನೆ ನಡೆದಿದೆ. ಸ್ಮಾರ್ಟ್‌ ಫೋನ್‌ಗಳಲ್ಲಿ ಆರೋಗ್ಯ ಸೇತು ಆ್ಯಪ್‌ ಇನ್‌ಸ್ಟಾಲ್‌ ಮಾಡಿಕೊಂಡವರಿಗೆ ಮಾತ್ರ ವಿಮಾನ ಏರಲು ಅವಕಾಶ ನೀಡಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

 

Advertisement

Udayavani is now on Telegram. Click here to join our channel and stay updated with the latest news.

Next