Advertisement

ಇಂದಿನಿಂದ ದೇಶೀಯ ವಿಮಾನಯಾನ

12:25 AM May 25, 2020 | Sriram |

ಹೊಸದಿಲ್ಲಿ/ ಮಂಗಳೂರು: ಲಾಕ್‌ಡೌನ್‌ ಘೋಷಣೆಯಾದ ಬಳಿಕ ಸ್ಥಗಿತವಾಗಿದ್ದ ದೇಶೀಯ ವಿಮಾನ ಯಾನ ಸೋಮವಾರ ಪುನರಾರಂಭಗೊಳ್ಳಲಿದ್ದು, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದಿಂದ 6 ವಿಮಾನ ಗಳು ಹಾರಲಿವೆ.

Advertisement

ಕೆಲವು ರಾಜ್ಯಗಳ ಆಕ್ಷೇಪಣೆ ನಡುವೆಯೂ ನಾಗರಿಕ ವಿಮಾನಯಾನ ಸಚಿವಾಲಯವನ್ನು ಪ್ರಯಾಣ ಸೇವೆಯನ್ನು ಆರಂಭಿಸಲು ನಿರ್ಧರಿಸಿದೆ. ಕ್ವಾರಂ ಟೈನ್‌ ವಿಚಾರದಲ್ಲಿ ಗೊಂದಲಗಳು ಮುಂದುವರಿದಿದ್ದು, ಕೆಲವು ರಾಜ್ಯ ಸರಕಾರಗಳು ತಮ್ಮದೇ ನಿಯಮ ಪಾಲಿಸಲು ಮುಂದಾಗಿವೆ.

ಈಗಾಗಲೇ ಟಿಕೆಟ್‌ ಬುಕ್ಕಿಂಗ್‌ ಆರಂಭವಾಗಿದ್ದು, ಪ್ರಯಾಣದ ವೇಳೆ ಏನು ಮಾಡಬೇಕು, ಮಾಡಬಾರದು ಎಂಬ ಬಗ್ಗೆ ಟಿಕೆಟ್‌ನಲ್ಲೇ ಸಲಹೆ ನೀಡಲಾಗಿದೆ. ರೋಗ ಲಕ್ಷಣಗಳಿಲ್ಲದವರಿಗೆ ಮಾತ್ರ ಪ್ರಯಾಣಿಸಲು ಅವಕಾಶ.

ಮಾಸ್ಕ್ ಕಡ್ಡಾಯ, ವಿಮಾನ ನಿಲ್ದಾಣ ಮತ್ತು ವಿಮಾನದ ಒಳಗೆ ಶುಚಿತ್ವ ಕಾಪಾಡಬೇಕು. ಸಾಮಾಜಿಕ ಅಂತರ ಪಾಲನೆ ಮಾಡಲೇಬೇಕು. ಥರ್ಮಲ್‌ ಸ್ಕ್ರೀನಿಂಗ್‌ಗೆ ಒಳಗಾಗಬೇಕು. ಈ ವೇಳೆ ರೋಗ ಲಕ್ಷಣಗಳು ಕಂಡು ಬಂದರೆ ಪ್ರಯಾಣಕ್ಕೆ ಅನುಮತಿ ನೀಡಲಾಗುವುದಿಲ್ಲ ಎಂದು ಮಾರ್ಗಸೂಚಿಯಲ್ಲಿ ವಿವರಿಸಲಾಗಿದೆ. ಹೊರ ಹೋಗುವ ಬಾಗಿಲಲ್ಲೂ ಥರ್ಮಲ್‌ ಸ್ಕ್ರಿನಿಂಗ್‌ ವ್ಯವಸ್ಥೆ ಮಾಡಬೇಕು ಎಂದು ನಾಗರಿಕ ವಿಮಾನಯಾನ ಸಚಿವಾಲಯ ಸೂಚಿಸಿದೆ.

ಪ್ರಯಾಣಿಕರು ಆರೋಗ್ಯ ಸೇತು ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಬೇಕಿದೆ. ಇಲ್ಲದಿದ್ದರೆ ಎಲ್ಲ ನಿಯಮ ಪಾಲಿಸುವುದಾಗಿ ಸ್ವಯಂ ಪ್ರಮಾಣಿತ ಪತ್ರ ಬರೆದುಕೊಡಬೇಕಾಗುತ್ತದೆ.

Advertisement

7+7 ದಿನ ಕ್ವಾರಂಟೈನ್‌
ರಾಜ್ಯಗಳು ಎಲ್ಲ ಪ್ರಯಾಣಿಕರನ್ನು 14 ದಿನಗಳ ಕ್ವಾರಂಟೈನ್‌ಗೆ ಒಳಪಡಿಸಬೇಕಿದೆ. ಕ್ವಾರಂಟೈನ್‌ ಅನ್ನು 2 ಭಾಗ ಮಾಡಲಾಗಿದೆ. 7 ದಿನ ಸರಕಾರದ ಪಾವತಿ ಕ್ವಾರಂಟೈನ್‌. ಇದರಲ್ಲಿ ಪ್ರಯಾಣಿಕರು ಹಣ ತೆತ್ತು, ನಿಗದಿತ ಹೊಟೆಧೀಲ್‌ಗಳಲ್ಲಿ ಇರಬೇಕು. ಈ ವೇಳೆ ಸೋಂಕು ಲಕ್ಷಣ ಕಂಡುಬರದೇ ಇದ್ದರೆ 7 ದಿನ ಮನೆ ಕ್ವಾರಂಟೈನ್‌ಗೆ ಕಳುಹಿಸಲಾಗುತ್ತದೆ.

ಬಂಗಾಲದಲ್ಲಿ ಆರಂಭವಿಲ್ಲ
ಕೋವಿಡ್ 19 ಜತೆಗೇ ಅಂಫಾನ್‌ ಚಂಡಮಾರುತದ ಬಿಸಿ ಎದುರಿಸಿರುವ ಪ.ಬಂಗಾಲದಲ್ಲಿ ಸೋಮವಾರದಿಂದ ದೇಶೀಯ ವಿಮಾನಯಾನ ಆರಂಭವಾಗುವುದಿಲ್ಲ. ಸೇವೆ ಆರಂಭಕ್ಕೆ ಇನ್ನೂ ಕೆಲವು ದಿನ ಬೇಕು ಎಂದು ಮಮತಾ ಸರಕಾರ ಹೇಳಿದೆ. ಮೊದಲಿಗೆ ವಿಮಾನಯಾನ ಆರಂಭಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಮಹಾರಾಷ್ಟ್ರ, 25 ವಿಮಾನಗಳಿಗೆ ಅವಕಾಶ ನೀಡುವುದಾಗಿ ಹೇಳಿದೆ.

ಮಕ್ಕಳು, ಗರ್ಭಿಣಿ,
ವೃದ್ಧರಿಗೆ ವಿನಾಯಿತಿ
ಹೊಟೇಲ್‌ ಕ್ವಾರಂಟೈನ್‌ನಿಂದ 10 ವರ್ಷದ ಒಳಗಿನ ಮಕ್ಕಳು, ಇವರನ್ನು ಕರೆದುಕೊಂಡು ಬಂದವರು, ಗರ್ಭಿಣಿಯರು, ವೃದ್ಧರಿಗೆ ವಿನಾಯಿತಿ ನೀಡಲಾಗಿದೆ. ಇವರು 14 ದಿನ ಹೋಮ್‌ ಕ್ವಾರಂಟೈನ್‌ನಲ್ಲಿ ಇರಬೇಕು, ಆರೋಗ್ಯ ಸೇತು ಕಡ್ಡಾಯ.

Advertisement

Udayavani is now on Telegram. Click here to join our channel and stay updated with the latest news.

Next