ಕತಾರ್:ಇಲ್ಲಿನ ಭಾರತೀಯ ರಾಯಭಾರ ಕಚೇರಿಯು ತನ್ನ ಅಧೀನದಲ್ಲಿರುವ ಇಂಡಿಯನ್ ಸ್ಫೋರ್ಟ್ಸ್ ಸೆಂಟರ್‌ನ ಸಹಯೋಗದೊಂದಿಗೆ ಪ್ರತಿಷ್ಠಿತ ಎಎಫ್ ಸಿ ಪಂದ್ಯವನ್ನು ಆಡಲು ಇತ್ತೀಚೆಗೆ ಕತಾರ್‌ಗೆ ಆಗಮಿಸಿರುವ ಭಾರತೀಯ
ಫುಟ್‌ಬಾಲ್ ತಂಡಕ್ಕೆ ಭವ್ಯವಾದ ಸ್ವಾಗತವನ್ನು ಕೋರಿತು. ಈ ವೇಳೆ ಕತಾರ್‌ನಲ್ಲಿರುವ ಭಾರತದ ರಾಯಭಾರಿ ವಿಪುಲ್, ಕಚೇರಿಯ ಅಧಿಕಾರಿಗಳು, ಅಪೆಕ್ಸ್ ಬಾಡಿ ಸಮುದಾಯದ ಮುಖಂಡರು ಮತ್ತು ಭಾರತೀಯ ಮೂಲದ ಆಯ್ದ ಗಣ್ಯರು ಸ್ವಾಗತದಲ್ಲಿ ಉಪಸ್ಥಿತರಿದ್ದರು.
ಈ ಸ್ವಾಗತ ಕಾರ್ಯಕ್ರಮದ ಸಂದರ್ಭದಲ್ಲಿ ಭಾರತೀಯ ಫುಟ್‌ಬಾಲ್‌ನ ದಂತಕಥೆ ಮಿಡ್‌ಫೀಲ್ಡರ್- ಒಲಿಂಪಿಯನ್ ಎಂ. ಕೆಂಪಯ್ಯ ಅವರ ಜೀವನಚರಿತ್ರೆಯನ್ನು ಭಾರತೀಯ ಫುಟ್‌ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿ, ಭಾರತೀಯ ಫುಟ್‌ಬಾಲ್ ತಂಡದ ಮುಖ್ಯ ಕೋಚ್ ಇಗೊರ್‌ಸ್ಟಿಮ್ಯಾಕ್, ಡಿಸಿಎಂ ಸಂದೀಪ್ ಕುಮಾರ್, ಭಾರತದ ರಾಯಭಾರಿ ಕಚೇರಿ ಸಚಿನ್ ಅವರು ಸೇರಿ ಬಿಡುಗಡೆ ಮಾಡಿದರು.
ಭಾರತದ ಪ್ರಥಮ ರಾಯಭಾರಿ ಕಚೇರಿಯ ಸಂಖ್‌ಪಾಲ್, ಭಾರತೀಯ ಕ್ರೀಡಾ ಕೇಂದ್ರದ ಅಧ್ಯಕ್ಷ ಅಬ್ದುಲ್ ರೆಹೆಮಾನ್, ಭಾರತೀಯ ಕ್ರೀಡಾ ಕೇಂದ್ರದ ಪ್ರಧಾನ ಕಾರ್ಯದರ್ಶಿ ನಿಹಾದ್ ಅಲಿ, ಕರ್ನಾಟಕ ಸಂಘ ಕತಾರ್‌ಅಧ್ಯಕ್ಷ ಮಹೇಶ್ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಜೀವನಚರಿತ್ರೆಯ ಲೇಖಕಿ ಸುಮಾ ಮಹೇಶ್ ಗೌಡ ಅವರು ಕತಾರ್‌ನಲ್ಲಿ ಪ್ರಸಿದ್ಧ ಸಮುದಾಯದ ನಾಯಕರಾಗಿದ್ದಾರೆ ಮತ್ತು ಪ್ರಸ್ತುತ ಭಾರತೀಯ ಸಾಂಸ್ಕೃತಿಕ ಕೇಂದ್ರದಲ್ಲಿ ಸಾಂಸ್ಕೃತಿಕ ಮುಖ್ಯಸ್ಥರಾಗಿದ್ದಾರೆ. ಅವರು ಪ್ರಸಿದ್ಧ ಮಿಡ್‌ಫಿàಲ್ಡರ್‌ಒಲಿಂಪಿಯನ್ ಎಂ. ಕೆಂಪಯ್ಯ ಅವರ ದ್ವಿತೀಯ ಪುತ್ರಿ.
ಪುಸ್ತಕದ ಬಿಡುಗಡೆಯ ಅನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸುಮಾ ಮಹೇಶ್ ಗೌಡ ಅವರು ಪುಸ್ತಕ ಬಿಡುಗಡೆ ಮಾಡಲು ಉಪಕ್ರಮ ಮತ್ತು ಬೆಂಬಲಕ್ಕಾಗಿ ಕತಾರ್‌ನಲ್ಲಿರುವ ಭಾರತದ ರಾಯಭಾರಿ ವಿಪುಲ್ ಅವರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿದರು ಹಾಗೂ ಪುಸ್ತಕದ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಭಾರತೀಯ ಕ್ರೀಡಾ ಕೇಂದ್ರ ಮತ್ತು ಇ.ಪಿ.ಅಬ್ದುಲ್ ರೆಹಮಾನ್ ಅವರಿಗೆ ಧನ್ಯವಾದಗಳನ್ನು ಸಲ್ಲಿಸಿದರು.
ಸ್ವಾಗತ ಸಮಾರಂಭದಲ್ಲಿ ಬ್ಲೂ ಟೈಗರ್ಸ್ ತಂಡವು ಭಾರತೀಯ ಕ್ರೀಡಾ ಕೇಂದ್ರದ ಅಧ್ಯಕ್ಷರಾದ ಇ.ಪಿ. ಅಬ್ದುಲ್ ರೆಹಮಾನ್ ಅವರೊಂದಿಗೆ ವೇದಿಕೆಯಲ್ಲಿದ್ದ ರಾಯಭಾರ ಕಚೇರಿಯ ಅಧಿಕಾರಿಗಳು ಹಾಗೂ ಗೌರವಾನ್ವಿತ ಅತಿಥಿ ವಿಪುಲ್ ಅವರಿಗೆ ಭಾರತೀಯ ಫುಟ್‌ಬಾಲ್ ಜೆರ್ಸಿಗಳನ್ನು ನೀಡಿದರು.