1.1 ಕೋಟಿ ರೂ. ನಿರ್ಮಾಣಕ್ಕೆ ಖರ್ಚಾದ ಹಣ
2.2 ಲಕ್ಷ ಫಲಾನುಭವಿ ಸಾಕು ನಾಯಿಗಳು
ದೇಶದಲ್ಲೇ ಮೊದಲ ಬಾರಿಗೆ ಜಾರಿಗೊಂಡಿರುವ ವಿಭಿನ್ನ ಪ್ರಯತ್ನ
ವಾಕಿಂಗ್ ಟ್ರ್ಯಾಕ್, ಕ್ಲಿನಿಕ್, ಜಿಮ್, ಈಜುಕೊಳ ಮುಂತಾದ ಸೌಲಭ್ಯ
Advertisement
ಹೈದರಾಬಾದ್: ವಾಕಿಂಗ್‌ಗಾಗಿಯೇ ಪ್ರತ್ಯೇಕ ಟ್ರ್ಯಾಕ್, ಶೌಚಾಲಯ, ತುರ್ತು ಸಂದರ್ಭಗಳಿಗಾಗಿ ಶುಶ್ರೂಷಾ ಕೇಂದ್ರ. ಇದ್ಯಾವುದೋ ಸಾರ್ವಜನಿಕರಿಗಾಗಿ ಅದರಲ್ಲೂ ವಿಶೇಷವಾಗಿ ಹಿರಿಯ ನಾಗರಿಕ ರಿಗೆಂದೇ ನಿರ್ಮಿಸುತ್ತಿರುವ ಉದ್ಯಾನವನ ವಲ್ಲ, ಶ್ವಾನಗಳಿಗಾಗಿ ಹೈದರಾಬಾದ್‌ನ ಕೊಂಡಾ ಪುರದಲ್ಲಿ ನಿರ್ಮಿಸಲಾಗಿರುವ ಅತ್ಯಾಧುನಿಕ, ಸರಕಾರದಿಂದ ಅಂಗೀಕೃತಗೊಂಡಿರುವ ಉದ್ಯಾನವನ! ಸುಮಾರು 1.3 ಎಕರೆ ವಿಸ್ತೀರ್ಣದಲ್ಲಿ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (ಜಿಎಚ್‌ಎಂಸಿ) 1.1 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಈ ಶ್ವಾನ ಉದ್ಯಾನ, ದೇಶದಲ್ಲೇ ಈ ಮಾದರಿಯ ಮೊದಲ ಪ್ರಯತ್ನವಾಗಿದೆ.
ವಾಕಿಂಗ್ ಟ್ರ್ಯಾಕ್, ಶೌಚಾಲಯ, ಕ್ಲಿನಿಕ್ ಮಾತ್ರವಲ್ಲದೆ, ಇಲ್ಲಿ ಶ್ವಾನಗಳ ನಿತ್ಯ ವ್ಯಾಯಾಮಕ್ಕಾಗಿ ವಿಶೇಷ ಜಿಮ್, ಸ್ವಿಮ್ಮಿಂಗ್ ಪೂಲ್, ವಿಶ್ರಮಿಸಲು ಎರಡು ವಿಶಾಲ ಲಾನ್, ಬಯಲು ರಂಗಮಂದಿರ, ಕೆಫೆ, ದೊಡ್ಡ , ಸಣಕಲು ನಾಯಿಗಳಿಗಾಗಿ ಪ್ರತ್ಯೇಕ ಕೂರುವ ವ್ಯವಸ್ಥೆಗಳಿವೆ. ಹೈದರಾಬಾದ್‌ನ ಪಶ್ಚಿಮ, ಕೇಂದ್ರ ವಲಯಗಳಲ್ಲಿ 2.5 ಲಕ್ಷಕ್ಕೂ ಹೆಚ್ಚು ಸಾಕು ನಾಯಿಗಳಿದ್ದು ಇವುಗಳಿಗೆ ಈ ಪ್ರಯೋಜನ ದೊರಕಲಿದೆ.