Advertisement
ದೇಶದ ಹೆಸರನ್ನು ಇಂಡಿಯಾದಿಂದ ಭಾರತ ಎಂದು ಬದಲಾವಣೆ ಮಾಡಲಾಗುವುದು ಎಂದು ವರದಿಯಾಗುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ವಾರಾಂತ್ಯದಲ್ಲಿ ಜಿ20 ಶೃಂಗಸಭೆಯಲ್ಲಿ ಭಾಗವಹಿಸುವ ರಾಷ್ಟ್ರಗಳ ಮುಖ್ಯಸ್ಥರಿಗೆ ಅಧಿಕೃತ ಆಹ್ವಾನದಲ್ಲಿ “ಭಾರತದ ಅಧ್ಯಕ್ಷ” ಪದವನ್ನು ಮೊದಲ ಬಾರಿಗೆ ಸಾಂಪ್ರದಾಯಿಕ “ಇಂಡಿಯಾದ ಅಧ್ಯಕ್ಷ” ಬದಲಿಗೆ ಬಳಸಲಾಗಿದೆ.
Related Articles
Advertisement
ಇದನ್ನೂ ಓದಿ:Tirupati temple: ಮಗಳೊಂದಿಗೆ ತಿರುಪತಿ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ಶಾರುಖ್ ಖಾನ್
ದೊಡ್ಡ ಬದಲಾವಣೆಗೆ ಉತ್ತೇಜನ ನೀಡಿದವರಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮೊದಲಿಗರು. “ರಿಪಬ್ಲಿಕ್ ಆಫ್ ಭಾರತ್ – ನಮ್ಮ ನಾಗರೀಕತೆಯು ಅಮೃತ ಕಾಲದ ಕಡೆಗೆ ಧೈರ್ಯದಿಂದ ಮುನ್ನಡೆಯುತ್ತಿರುವುದಕ್ಕೆ ಸಂತೋಷ ಮತ್ತು ಹೆಮ್ಮೆಯಿದೆ” ಎಂದು ಅವರು ಎಕ್ಸ್ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.
ಕಾಂಗ್ರೆಸ್ ನಾಯಕ ಜೈರಾಂ ರಮೇಶ್ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, “ಹಾಗಾದ್ರೆ ಈ ಸುದ್ದಿ ನಿಜಕ್ಕೂ ನಿಜ. ರಾಷ್ಟ್ರಪತಿ ಭವನವು ಸೆ.9 ರಂದು ಜಿ20 ಔತಣಕೂಟಕ್ಕೆ ಸಾಮಾನ್ಯ ‘ಇಂಡಿಯಾದ ರಾಷ್ಟ್ರಪತಿ’ ಬದಲಿಗೆ ‘ಭಾರತದ ಅಧ್ಯಕ್ಷ’ ಎಂಬ ಹೆಸರಿನಲ್ಲಿ ಆಹ್ವಾನವನ್ನು ಕಳುಹಿಸಿದೆ. ಈಗ, ಸಂವಿಧಾನದ 1 ನೇ ವಿಧಿಯು ಹೀಗೆ ಓದಬಹುದು: ‘ಭಾರತ, ಅದು ಇಂಡಿಯಾಗಿತ್ತು, ರಾಜ್ಯಗಳ ಒಕ್ಕೂಟವಾಗಿರುತ್ತದೆ’ ಆದರೆ ಈಗ ಈ “ರಾಜ್ಯಗಳ ಒಕ್ಕೂಟ” ಕೂಡ ಆಕ್ರಮಣಕ್ಕೆ ಒಳಗಾಗಿದೆ” ಎಂದು ಅವರು ಆರೋಪಿಸಿದರು.