ಬೆಂಗಳೂರು: ಏರ್ ಶೋನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಭೀಕರ ಬೆಂಕಿಗೆ ಆಹುತಿಯಾದ 250ಕ್ಕೂ ಹೆಚ್ಚು ಕಾರುಗಳ ಮಾಲೀಕರಿಗೆ ವಿಮೆ ಸಿಗಬೇಕಾದರೆ ದಾಖಲೆಗಳನ್ನು ಅಧಿಕಾರಿಗಳಿಗೆ ಸಲ್ಲಿಸುವ ಸವಾಲು ಎದುರಾಗಿದ್ದು, ಈ ಬಗ್ಗೆ ಸಾರಿಗೆ ಇಲಾಖೆ ಅಧಿಕಾರಿಗಳು ಸಹಕರಿಸುತ್ತಿದ್ದಾರೆ.
ದುರಂತ ನಡೆದ ಸ್ಥಳದಲ್ಲಿರುವ ಕಾರಿನ ಅವಶೇಷಗಳ ಮೇಲೆ ಕಾರಿನ ಸಂಖ್ಯೆಯನ್ನು ಮಾಲೀಕರು ನಮೂದಿಸಿದ್ದಾರೆ. ಈಗಾಗಲೇ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಮಾಲೀಕರೂ ವಿಮೆ ಮೊತ್ತ ದೊರಕಬೇಕಾದರೆ ಪ್ರತ್ಯೇಕವಾಗಿ ಎಫ್ಐಆರ್ ದಾಖಲಿಸಬೇಕಾಗಿದೆ. ಎಫ್ಐಆರ್ ಪ್ರತಿಯೊಂದಿಗೆ ವಿಮೆಯನ್ನು ಕ್ಲೈಂ ಮಾಡಿಕೊಳ್ಳುವ ವೇಳೆ ನೀಡುವುದು ಅಗತ್ಯವಾಗಿದೆ.
ವಿಮಾ ಸಂಸ್ಥೆಯು ನೈಸರ್ಗಿಕ ವಿಕೋಪದ ಅಡಿಯಲ್ಲಿ ವಿಮೆಯನ್ನು ಮಂಜೂರು ಮಾಡುವ ಸಾಧ್ಯತೆಗಳಿದ್ದು , ಮಾಲೀಕರು ಎಲ್ಲಾ ದಾಖಲೆಗಳನ್ನು ಸೂಕ್ತವಾಗಿ ಸಲ್ಲಿಸಿದಲ್ಲಿ ಶೇಕಡಾ 80 ರಿಂದ 90 ರಷ್ಟು ಮೊತ್ತವನ್ನು ನೀಡುವ ಸಾಧ್ಯತೆಗಳಿವೆ.
ಈಗಾಗಲೇ ನೊಂದ ಮಾಲೀಕರಿಗೆ ಅನುಕೂಲವಾಗುವಂತೆ ಸಹಾಯವಾಣಿಯನ್ನು ತೆರೆಯಲಾಗಿದ್ದು , 080-29729908, 29729909 ಮತ್ತು ಮೊಬೈಲ್ 9449864050 ಸಂಖ್ಯೆಗಳನ್ನು ನೀಡಲಾಗಿದೆ.
ರಸ್ತೆ ಸುರಕ್ಷತೆ ಆಯುಕ್ತರು ದಾಖಲಾತಿ ಸಂಗ್ರಹಿಸಲು ಅನುಕೂಲ ಮಾಡಿದ್ದು , ಸಹಾಯವಾಣಿ ಭಾನುವಾರವೂ ಕೆಲಸ ನಿರ್ವಹಿಸಲಿದೆ ಎಂದು ತಿಳಿಸಿದ್ದಾರೆ. ಕಾರಿನ ದಾಖಲೆಗಳು ಮತ್ತು ಚಾಲನಾ ಪರವಾನಿಗೆ ಸಂಗ್ರಹಿಸಲು ನೆರವಾಗಲಿದೆ.