ಕಲಬುರಗಿ: ಜೇವರ್ಗಿ ಮತಕ್ಷೇತ್ರದಲ್ಲಿ ಬಿಜೆಪಿ ಪಕ್ಷದಿಂದ ಟಿಕೆಟ್ ವಂಚಿತ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಜೆಡಿಎಸ್ ದತ್ತ ಮುಖ ಮಾಡಿದ್ದಾರೆ.
ಜೇವರ್ಗಿ ಪಟ್ಟಣದ ಭೂತಪುರ ಕಲ್ಯಾಣ ಮಂಟಪದಲ್ಲಿ ಪ್ರಮುಖ ಮುಖಂಡರ ಹಾಗೂ ಕಾರ್ಯಕರ್ತರ ಸಭೆ ನಡೆಸುತ್ತಿದ್ದು, ಸ್ಪರ್ಧೆ ಮಾಡೋದು ಖಚಿತವಾಗಿದೆ.
ಟಿಕೆಟ್ ವಂಚಿತರಾದರೆ ಜೆಡಿ ಎಸ್ ದತ್ತ ಮುಖ ಮಾಡೋದು ನಿಶ್ಚಿತ ಎಂದು ಮನಗಂಡ ಹಿನ್ನೆಲೆಯಲ್ಲಿ ಜೆಡಿಎಸ್ ಇನ್ನೂ ಅಭ್ಯರ್ಥಿ ಯನ್ನು ಘೋಷಣೆ ಮಾಡಿಲ್ಲ. ಹೀಗಾಗಿ ಜೆಡಿಎಸ್ ಸೇರೋದು ಪಕ್ಕಾ ಎನ್ನಲಾಗುತ್ತಿದೆ.
ಕುಮಾರಸ್ವಾಮಿ ಮೊಬೈಲ್ ಕರೆ: ಟಿಕೆಟ್ ವಂಚಿತ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಅವರಿಗೆ ಮಂಗಳವಾರ ತಡರಾತ್ರಿ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಮೊಬೈಲ್ ಕರೆ ಮಾಡಿ, ನಾನಿದ್ದೇನೆ ಬ್ರದರ್ ಎಂದಿದ್ದಾರಂತೆ. ಪ್ರಮುಖ ವಾಗಿ ಇದೇ ಏ. 13 ರಂದು ಕುಮಾರಸ್ವಾಮಿ ಕಲಬುರಗಿಗೆ ಬರುತ್ತಿದ್ದು, ಈ ಸಂದರ್ಭದಲ್ಲಿ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಜೆಡಿಎಸ್ ಸೇರ್ಪಡೆಯಾಗುವ ಸಾಧ್ಯತೆಗಳಿವೆ.