Advertisement
ಉಭಯ ದೇಶಗಳ ನಡುವಿನ ಬಾಂಧವ್ಯ ವನ್ನು ಮತ್ತಷ್ಟು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಮಾತುಕತೆ ನಡೆದಿದ್ದು, ಕೃತಕ ಬುದ್ಧಿಮತ್ತೆ, ವಿಜ್ಞಾನ, ರಕ್ಷಣೆ, ಬಾಹ್ಯಾಕಾಶ ಸಹಿತ ವಿವಿಧ ವಿಷಯಗಳ ಕುರಿತು ಸುದೀರ್ಘ ಚರ್ಚೆ ನಡೆದಿದೆ ಎಂದು ಮಾತುಕತೆ ಬಳಿಕ ಬಿಡುಗಡೆ ಮಾಡಿದ ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ.
l ಮುಕ್ತ, ಎಲ್ಲರನ್ನೂ ಒಳಗೊಂಡ ಇಂಡೋ- ಪೆಸಿಫಿಕ್‌ಗೆ ಬೆಂಬಲ ನೀಡುವಲ್ಲಿ ಕ್ವಾಡ್‌ನ ಪ್ರಾಮುಖ್ಯದ ಕುರಿತಾಗಿ ಚರ್ಚೆ.
l ಪರಮಾಣು ಶಕ್ತಿಯಲ್ಲಿ ಭಾರತ- ಅಮೆರಿಕ ಸಹಯೋಗವನ್ನು ಸುಗಮಗೊಳಿಸಲು ಉಭಯ ದೇಶಗಳ ಸಂಸ್ಥೆಗಳ ನಡುವಣ ಸಮಾಲೋಚನೆಗೆ ಸ್ವಾಗತ. ಇಂದು ಶೃಂಗ ಆರಂಭ: ಭಾರತದತ್ತ ವಿಶ್ವದ ಗಮನ
ಭಾರತದ ಆತಿಥ್ಯದಲ್ಲಿ ಮೊದಲ ಬಾರಿಗೆ ನಡೆಯಲಿರುವ 2 ದಿನಗಳ ಜಿ20 ರಾಷ್ಟ್ರಗಳ ಮುಖ್ಯಸ್ಥರ ಶೃಂಗಕ್ಕೆ ಶನಿವಾರ ಅದ್ದೂರಿ ಚಾಲನೆ ಸಿಗಲಿದೆ. “ವಸುಧೈವ ಕುಟುಂಬಕಂ’ ಎಂಬುದು ಸಮ್ಮೇಳನ ಧ್ಯೇಯ. ಶನಿವಾರ ಬೆಳಗ್ಗೆ 9.30 ಕ್ಕೆ ಕಾರ್ಯ ಕ್ರಮಕ್ಕೆ ಚಾಲನೆ. ರವಿವಾರ ಮಧ್ಯಾಹ್ನ 12.30ಕ್ಕೆ “ನಿರ್ಣಯ’ ದೊಂದಿಗೆ ಶೃಂಗಕ್ಕೆ ಸಮಾರೋಪ. ಇದರ ಯಶಸ್ಸು ಭಾರತದ ಮಟ್ಟಿಗೆ ಅತ್ಯಂತ ಮಹತ್ವದ್ದು.
Related Articles
ಯುಕೆ ಪ್ರಧಾನಿ ರಿಷಿ ಸುನಕ್, ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆ್ಯಂಟೋನಿಯೋ ಗುಟೆರಸ್, ಐಎಂಎಫ್ ಮುಖ್ಯಸ್ಥೆ ಕ್ರಿಸ್ಟಲೀನಾ ಜಾರ್ಜಿವಾ, ಇಟಲಿ ಪ್ರಧಾನಿ ಜಿಯೋರ್ಜಿಯಾ ಮೆಲೋನಿ, ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಝಯೇದ್ ಅಲ್ ನಹ್ಯಾನ್, ರಷ್ಯಾ ವಿದೇಶಾಂಗ ಸಚಿವ ಸರ್ಗೆ ಲಾವ್‌ರೋವ್ ಸಹಿತ ಎಲ್ಲ ನಾಯಕರನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಗಿದೆ. ಬಾಂಗ್ಲಾದೇಶ, ಸಿಂಗಾಪುರ ಸೇರಿದಂತೆ 9 ರಾಷ್ಟ್ರಗಳ ಮುಖ್ಯಸ್ಥರಿಗೆ ವಿಶೇಷ ಆಹ್ವಾನ ನೀಡಲಾಗಿದೆ.
Advertisement
ಬೈಡೆನ್ ಅವರೊಂದಿಗಿನ ಮಾತುಕತೆ ಫಲ ಪ್ರದವಾಗಿದೆ. ಭಾರತ ಮತ್ತು ಅಮೆರಿಕದ ನಡುವಿನ ಸ್ನೇಹವು ಜಗತ್ತಿಗೆ ಮತ್ತಷ್ಟು ಒಳಿತು ಮಾಡುವಲ್ಲಿ ಮಹತ್ವದ ಪಾತ್ರ ವಹಿಸಲಿದೆ.
– ನರೇಂದ್ರ ಮೋದಿ, ಪ್ರಧಾನಿ