Advertisement

ನಗರಸಭೆ ಗದ್ದುಗೆ ಯಾವ ಪಕ್ಷಕ್ಕೆ?

04:11 PM Sep 14, 2021 | Team Udayavani |

ದೊಡ್ಡಬಳ್ಳಾಪುರ: ಸೆ.3ರಂದು ನಡೆದ ದೊಡ್ಡಬಳ್ಳಾಪುರ ನಗರಸಭೆ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಬಾರದ ಹಿನ್ನಲೆಯಲ್ಲಿ
ನಗರಸಭೆ ಅಧ್ಯಕ್ಷ ಸ್ಥಾನ ಯಾವ ಪಕ್ಷಕ್ಕೆ ಒಲಿಯಲಿದೆ ಎನ್ನುವ ಕುತೂಹಲ ಸಾರ್ವಜನಿಕರಲ್ಲಿ ಕಾಡುತ್ತಿದೆ.

Advertisement

ಚುನಾವಣೆಯಲ್ಲಿ ನಗರಸಭೆಯ ಒತ್ತು 31 ಸ್ಥಾನಗಳಲ್ಲಿ ಬಿಜೆಪಿ-12, ಕಾಂಗ್ರೆಸ್‌-9, ಜೆಡಿಎಸ್‌-7 ಹಾಗೂ ಪಕ್ಷೇತರ -3 ಅಭ್ಯರ್ಥಿಗಳು ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಒಂದು ವಾರ ಕಳೆದರೂ, ಇನ್ನೂ ಹೊಂದಾಣಿಕೆ ತೀರ್ಮಾನವಾಗಿಲ್ಲ.

ದಿನಾಂಕ ನಿಗದಿಯಾಗಿಲ್ಲ: ನಗರಸಭೆಯ ಫಲಿತಾಂಶ ವನ್ನು ರಾಜ್ಯ ಚುನಾವಣ ಆಯೋಗ ರಾಜ್ಯ ಪತ್ರದಲ್ಲಿ ಅಧಿಕೃತವಾಗಿ ಪ್ರಕಟಿಸಿದೆ. ಆದರೆ, ಇನ್ನು ಅಧ್ಯಕ್ಷರ ಆಯ್ಕೆಗೆ ದಿನಾಂಕವನ್ನು ನಿಗದಿಪಡಿಲ್ಲ.ನಗರಸಭೆಯ ಮೊದಲ 24 ತಿಂಗಳ ಅವಧಿಗೆ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ ಮಹಿಳೆಗೆ, ಉಪಾದ್ಯಕ್ಷ ಸ್ಥಾನ ಸಾಮಾನ್ಯ ಮಹಿಳಾ ಅಭ್ಯರ್ಥಿಗೆ ಮೀಸಲಾಗಿದೆ. ಹಿಂದುಳಿದ ವರ್ಗ ಎ ಮೀಸಲಾತಿ ಅಡಿಯಲ್ಲಿ ಬಿಜೆಪಿಯಿಂದ ಮೂವರು, ಕಾಂಗ್ರೆಸ್‌ನಿಂದ ಒಬ್ಬರು ಆಯ್ಕೆಯಾಗಿದ್ದಾರೆ. ಸಾಮಾನ್ಯ ಮಹಿಳೆ ಮೀಸಲಾತಿ ಯಲ್ಲಿ ಜೆಡಿಎಸ್‌ನಿಂದ 4, ಕಾಂಗ್ರೆಸ್‌ನಿಂದ 2, ಬಿಜೆಪಿ ಹಾಗೂ ಪಕ್ಷೇತರರು ತಲಾ ಒಬ್ಬರು ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ:ಯಾದಗಿರಿ ಜಿಲ್ಲೆಯಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ ಬೆಳಕಿಗೆ! ಸೋದರ ಮಾವನಿಂದಲೇ ಕೃತ್ಯ

ಮೈತ್ರಿ ಯಾರೊಂದಿಗೆ?: ನಗರಸಭೆಯಲ್ಲಿ 12 ಜನ ಬಿಜೆಪಿ ಸದಸ್ಯರು, 3 ಜನ ಪಕ್ಷೇತರ ಸದಸ್ಯರು, ಸಂಸತ್‌ ಸದಸ್ಯರ ಒಂದು ಮತ ಸೇರಿದರೆ 16 ಮತಗಳಾಗಲಿವೆ. ಆದರೆ, ಕಾಂಗ್ರೆಸ್‌, ಜೆಡಿಎಸ್‌ ಹೊಂದಾಣಿಕೆ ಮಾಡಿಕೊಂಡರೆ ಶಾಸಕರ ಒಂದು ಮತವು ಸೇರಿದಂತೆ 17 ಆಗಲಿದೆ. ಹೀಗಾಗಿ, ಕಾಂಗ್ರೆಸ್‌ ಪಕ್ಷದವರು ಜೆಡಿಎಸ್‌ನೊಂದಿಗೆ ಹೊಂದಾಣಿಕೆ ಮಾಡಿಕೊಂಡು ನಗರಸಭೆ ಆಡಳಿತದ ಚುಕ್ಕಾಣಿ ಹಿಡಿಯಲು ಜೆಡಿಎಸ್‌ ಸದಸ್ಯರು ಹಾಗೂ ಮುಖಂಡರೊಂದಿಗೆ ಪಕ್ಷದ ಮುಖಂಡರು ನಿರಂತರ ಮಾತುಕತೆ ನಡೆಸುತ್ತಲೇ ಇದ್ದಾರೆ ಎಂದುಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ಮತದಾರರ ಭಾವನೆಗೆ ಧಕ್ಕೆ ಆಗದಂತೆ ಹೊಂದಾಣಿಕೆ
: ಜೆಡಿಎಸ್‌ನಿಂದ ಈ ಬಾರಿ ಇಬ್ಬರು ಮುಸ್ಲಿಂ ಮಹಿಳಾ ಸದಸ್ಯರು, ದಲಿತರು ಹಾಗೂ
ಹಿಂದುಳಿದ ವರ್ಗದವರು ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ದಲಿತರು, ಮುಸ್ಲಿಂ ಮತದಾರರು ಕಾಂಗ್ರೆಸ್‌ ಪರವಾಗಿದ್ದಾರೆ ಎನ್ನುವ ಸಂದೇಶ ಅಳಿಸಿದಂತಾಗಿದೆ. ಆದ್ದರಿಂದ, ಈ ಸಮುದಾಯಗಳ ಮತದಾರರ ಭಾವನೆಗೆ ಧಕ್ಕೆ ಬಾರದಂತೆ ಹಾಗೂ ಮುಂಬರುವ ಚುನಾವಣೆಗಳಲ್ಲಿ ಮತದಾರರ ಭಾವನೆಗಳಿಗೆ ಧಕ್ಕೆಯಾಗದಂತೆ ಹೊಂದಾಣಿಕೆ ಅಗತ್ಯವಿದೆ ಎನ್ನುತ್ತಾರೆ ಜೆಡಿಎಸ್‌ ಮುಖಂಡರು.

Advertisement

ಮಾತುಕತೆ ನಡೆಸಿಲ್ಲ: ಸ್ಥಳೀಯ ಜೆಡಿಎಸ್‌ ಮುಖಂಡರೊಬ್ಬರ ಮಾಹಿತಿಯಂತೆ ಮೊದಲ ಅವಧಿಗೆ ಅಧ್ಯಕ್ಷ ಸ್ಥಾನವನ್ನು ನಮ್ಮ ಪಕ್ಷದ ಸದಸ್ಯರಿಗೆ
ನೀಡುವಂತೆ ಹಾಗೂ ಉಪಾಧ್ಯಕ್ಷ, ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಗಳನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡಲು ಸಿದ್ಧರಿದ್ದೇವೆ. ಸ್ಥಳೀಯ ಬಿಜೆಪಿ ಸದಸ್ಯರು ಯಾವುದೇ ರೀತಿಯ ಮಾತುಕತೆಯನ್ನು ನಮ್ಮೊಂದಿಗೆ ನಡೆಸಿಲ್ಲ ಎಂದು ತಿಳಿಸಿದ್ದಾರೆ.

ಬಿಜೆಪಿ ಸದಸ್ಯರಲ್ಲಿ
ಮೂಡಿದ ಉತ್ಸಾಹ
ಕಂದಾಯ ಸಚಿವ ಆರ್‌.ಅಶೋಕ್‌ ಅವರು, ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ದೊಡ್ಡಬಳ್ಳಾಪುರ ಸೇರಿದಂತೆ ರಾಜ್ಯದ ಇತರೆ ಮಹಾನಗರ ಪಾಲಿಕೆಗಳಲ್ಲಿ ಆಡಳಿತ ಹೊಂದಾಣಿಕೆ ಕುರಿತಂತೆ ಮಾತುಕತೆ ನಡೆಸಿರುವುದು ನಗರಸಭೆ ಬಿಜೆಪಿಯ ಸದಸ್ಯರಲ್ಲಿ ಉತ್ಸಾಹ ಮೂಡಿಸಿದೆ. ಆದರೆ, ಎಚ್‌.ಡಿ.ಕುಮಾರಸ್ವಾಮಿ ಸ್ಥಳೀಯ ಸಂಸ್ಥೆಗಳಿಗೆ ಆಡಳಿತಕ್ಕೆ ಜೆಡಿಎಸ್‌ ಬೆಂಬಲ ನೀಡುವ ಬಗ್ಗೆ ಇಂದು ಯಾವುದೇ ನಿರ್ಧಾರವು ಆಗಿಲ್ಲ. ಮುಖಂಡ ರೊಂದಿಗೆ ಸಭೆ ನಡೆಸಿದ ನಂತರ ನಿರ್ಧಾರ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್‌,ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡು ನಗರಸಭೆಯಲ್ಲಿ ಅಧಿಕಾರ ಹಿಡಿಯುವ ಕುರಿತು ಶಾಸಕರು,
ಜೆಡಿಎಸ್‌ ಜಿಲ್ಲಾಧ್ಯಕ್ಷರೊಂದಿಗೆ ಮಾತುಕತೆ ನಡೆಸಲಾಗಿದೆ.ಕಾಂಗ್ರೆಸ್‌ ವರಿಷ್ಠರು, ಜೆಡಿಎಸ್‌ ಪಕ್ಷದ ವರಿಷ್ಠರೊಂದಿಗೆ ಈ ಬಗ್ಗೆ
ಚರ್ಚೆ ನಡೆಸಿ,ಅಂತಿಮ ತೀರ್ಮಾನ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.
– ಕೆ.ಪಿ.ಜಗನ್ನಾಥ್‌,
ಕಾಂಗ್ರೆಸ್‌ ನಗರ ಬ್ಲಾಕ್‌ ಅಧ್ಯಕ್ಷ

ಇಬ್ಬರು ಪಕ್ಷೇತರರು ಬಿಜೆಪಿಗೆ ಬೆಂಬಲ ಸೂಚಿಸಿದ್ದಾರೆ.ಕಂದಾಯ ಸಚಿವ ಆರ್‌.ಅಶೋಕ್‌ ಮೈತ್ರಿ ಬಗ್ಗೆ ಉಸ್ತುವಾರಿ ತೆಗೆದುಕೊಂಡಿದ್ದು, ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ದಿನಾಂಕ ನಿಗದಿಯಾಗುತ್ತಿದ್ದಂತೆ ಅಂತಿಮ ತೀರ್ಮಾನ ಹೊರ ಬೀಳಲಿದೆ.
● ಎಚ್‌.ಎಸ್‌.ಶಿವಶಂಕರ್‌,

ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರನ್ನುಭೇಟಿಮಾಡಿಮಾಹಿತಿ ನೀಡಿದ್ದೇವೆ.ಕಳೆದಅವಧಿಯಲ್ಲಿಜೆಡಿಎಸ್‌ ನೇತೃತ್ವದಲ್ಲಿ ಉತ್ತಮಆಡಳಿತ ನೀಡಲಾಗಿತ್ತು. ಜೆಡಿಎಸ್‌ ಪಕ್ಷಕ್ಕೆ ಅಧಿಕಾರ ನೀಡಿ, ನಗರಾಭಿವೃದ್ಧಿಗೆ ಸಹಕರಿಸುವವರೊಂದಿಗೆ ಮೈತ್ರಿ ಮಾಡಿಕೊಳ್ಳಲಾಗುವುದು. ಈ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
– ವಿ.ಎಸ್‌.ರವಿಕುಮಾರ್‌,
ಜೆಡಿಎಸ್‌ ನಗರ ಘಟಕದ ಅಧ್ಯಕ್ಷ

● ಡಿ.ಶ್ರೀಕಾಂತ

Advertisement

Udayavani is now on Telegram. Click here to join our channel and stay updated with the latest news.

Next