Advertisement
ಅಂದಿನ ಬ್ರಿಟಿಶ್ ಸರ್ಕಾರದ ಒಡೆದು ಹಾಳುವ ನೀತಿಯಿಂದಾಗಿ ಹಿಂದೂ ಮತ್ತು ಮುಸ್ಲಿಮರ ನಡುವೆ ಉದ್ವಿಗ್ನತೆ ತೀವ್ರಗೊಂಡಿತ್ತು. ಇದೀಗ ಸಾಕ್ಷ್ಯ ಚಿತ್ರದ ಮೂಲಕ ಹಿಂದೂ ಮತ್ತು ಮುಸ್ಲಿಮರ ನಡುವಿನ ಉದ್ವಿಗ್ನತೆಯನ್ನು ಪುನಃ ತೀವ್ರಗೊಳಿಸಲು ಸ್ವತಃ ಬಿಬಿಸಿ ನ್ಯಾಯಾಧೀಶ ಮತ್ತು ತೀರ್ಪುಗಾರರಾಗಿ ವರ್ತಿಸಿದೆ ಎಂದು ಆರೋಪಿಸಿದೆ.
Related Articles
Advertisement
ಟ್ವೀಟ್ ಡಿಲೀಟ್“ಬಿಬಿಸಿ ಸಾಕ್ಷ್ಯ ಚಿತ್ರವು ಅಲ್ಪಸಂಖ್ಯಾತರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ನಿಲುವನ್ನು ಬಹಿರಂಗಪಡಿಸಿದೆ,’ ಎಂದು ಟಿಎಂಸಿ ಸಂಸದ ಡೆರೆಕ್ ಒಬ್ರಿಯನ್ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಅನ್ನು ಟ್ವಿಟರ್ ಡಿಲೀಟ್ ಮಾಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಡೆರೆಕ್, “ಇದು ಸೆನ್ಸಾರ್‌ಶಿಪ್. ನನ್ನ ಟ್ವೀಟ್‌ಗೆ 1 ಲಕ್ಷಕ್ಕೂ ಅಧಿಕ ಪ್ರತಿಕ್ರಿಯೆ ಬಂದಿತ್ತು. ಆದರೆ ನನ್ನ ಟ್ವೀಟ್ ಡಿಲೀಟ್ ಮಾಡಲಾಗಿದೆ,’ ಎಂದು ದೂರಿದ್ದಾರೆ. ಸಾಕ್ಷ್ಯ ಚಿತ್ರದ ಲಿಂಕ್ ಡಿಲೀಟ್‌ಗೆ ಆದೇಶ
ಪ್ರಧಾನಿ ಮೋದಿ ವಿರುದ್ಧ ಬಿಡುಗಡೆ ಸಾಕ್ಷ್ಯ ಚಿತ್ರದ ಮೊದಲ ಭಾಗದ ಲಿಂಕ್‌ಗಳನ್ನು ಡಿಲೀಟ್ ಮಾಡುವಂತೆ ಟ್ವಿಟರ್, ಯೂಟ್ಯೂಬ್‌ಗ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯವು ಬಿಬಿಸಿಯ 50ಕ್ಕೂ ಹೆಚ್ಚು ಟ್ವಿಟರ್ ಲಿಂಕ್‌ಗಳನ್ನು ಡಿಲೀಟ್ ಮಾಡುವಂತೆ ಟ್ವಿಟರ್‌ಗೆ ಸೂಚಿಸಿದೆ. “ಸಾಕ್ಷ್ಯಚಿತ್ರವು ಪ್ರಚಾರದ ಸರಕಾಗಿದೆ. ಇದು ವಸ್ತುನಿಷ್ಠತೆಯನ್ನು ಹೊಂದಿಲ್ಲ. ಇದು ಬ್ರಿಟಿಶ್ ವಸಾಹತುಶಾಹಿ ಮನಸ್ಥಿತಿಯ ಪ್ರತಿಬಿಂಬವಾಗಿದೆ,’ ಎಂದು ಭಾರತ ದೂರಿದೆ.