Advertisement
“ಉದಯವಾಣಿ’ ಕಚೇರಿಯಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ಬಿ.ವೈ.ವಿಜಯೇಂದ್ರ ಸೇರಿದಂತೆ ಮುಖ್ಯಮಂತ್ರಿ ಕುಟುಂಬದ ಯಾರೂ ಕೂಡ ಸರ್ಕಾರ ಅಥವಾ ಇಲಾಖೆಯ ಕಾರ್ಯಗಳಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ. ಈ ಬಗ್ಗೆ ಆರೋಪ ಮಾಡುವವರು ಪತ್ರ ಬರೆಯುವ ಬದಲು, ಧೈರ್ಯದಿಂದ ಬಹಿರಂಗವಾಗಿ ಹೇಳಿಕೆ ನೀಡಲಿ ಎಂದು ಸವಾಲು ಹಾಕಿದರು.
Related Articles
Advertisement
ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಸಮರ್ಥ ಸರ್ಕಾರ ಮತ್ತು ಉತ್ತಮ ಆಡಳಿತ ನಡೆಯುತ್ತಿದೆ. ದೃಢ ನಿರ್ಧಾರದ ಕೆಲವೊಂದು ಕಾರ್ಯಕ್ರಮಗಳನ್ನು ಅವರು ಕೈಗೊಂಡಿದ್ದಾರೆ. ಮಂತ್ರಿಯಾಗಿಲ್ಲ ಅಥವಾ ಇನ್ನಾವುದೋ ಕಾರಣಕ್ಕೆ ಸಣ್ಣಪುಟ್ಟ ಅಸಮಾಧಾನಗಳು ಇರುವುದು ಸಾಮಾನ್ಯ. ಅದೆಲ್ಲವನ್ನು ಹೊರತುಪಡಿಸಿ, ಸರ್ಕಾರ ಸದೃಢವಾಗಿದೆ. ಜನಪರ ಯೋಜನೆಗಳನ್ನು ಜನ ಸದಾ ನೆನೆಯುತ್ತಿರುತ್ತಾರೆ ಎಂದರು.
ಬಿಜೆಪಿ ಅಥವಾ ಸರ್ಕಾರದಲ್ಲಿ ಹೊಸ ಮತ್ತು ಹಳೇ ಸಚಿವರೆಂಬ ಯಾವುದೇ ತಾರತಮ್ಯವಿಲ್ಲ. ಈಗ ಸಚಿವರಾಗಿರುವವರು ನಮ್ಮ ಜತೆ ಸೇರಿಕೊಂಡಿದ್ದಾರೆ ಮತ್ತು ಅತ್ಯಂತ ಅಲ್ಪಾವಧಿಯಲ್ಲಿ ಅವರು ನಮ್ಮವರಾಗಿ ಬಿಟ್ಟಿದ್ದಾರೆ. ಎಲ್ಲಾ ಕಾರ್ಯಕರ್ತರನ್ನು ಸಮಾನವಾಗಿ ಕಾಣುತ್ತಿದ್ದಾರೆ. ಹೊಸ ಅಥವಾ ಹಳೇ ಸಚಿವರೆಂಬುದು ಇಲ್ಲವೇ ಇಲ್ಲ ಎಂದು ಹೇಳಿದರು.
ಕಾಂಗ್ರೆಸ್ ಅಸಮರ್ಥವಾಗಿದೆ: ಕಾಂಗ್ರೆಸ್‌ನವರೆ ರಾಜೀನಾಮೆ ಕೊಟ್ಟು ಬಂದರೆ ಅದಕ್ಕೆ ಬಿಜೆಪಿ ಹೊಣೆಯಲ್ಲ. ಕಾಂಗ್ರೆಸ್ ಮತ್ತು ಕಾಂಗ್ರೆಸ್ ಪಕ್ಷದ ದೌರ್ಬಲ್ಯವೇ ಇದಕ್ಕೆ ಕಾರಣ. ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಆಗದೇ ಇರುವುದು ಕಾಂಗ್ರೆಸ್‌ನ ಅಸಮರ್ಥತೆಯನ್ನು ತೋರಿಸುತ್ತದೆ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಮಂತ್ರಿ, ನಂತರ ಮುಖ್ಯಮಂತ್ರಿಯಾಗಿದ್ದಾಗ ಮತ್ತು ಈಗ ಸಚಿವನಾಗಿದ್ದರೂ ನನ್ನ ವ್ಯಕ್ತಿತ್ವದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಹಿಂದೆ ಹೇಗೆ ಇದ್ದೆನೋ, ಹಾಗೆಯೇ ಸೌಮ್ಯ ಹಾಗೂ ಸರಳವಾಗಿ ಈಗಲೂ ಇದ್ದೇನೆ.-ಜಗದೀಶ್ ಶೆಟ್ಟರ್, ಕೈಗಾರಿಕೆ ಸಚಿವ