Advertisement

ಲಿಂಗಾಯತ ಧರ್ಮ ಪ್ರತ್ಯೇಕಿಸಬೇಡಿ:

04:59 PM Aug 09, 2017 | |

ರಂಭಾಪುರಿ ಜಗದ್ಗುರುಗಳ ತೇಜೋವಧೆ ಹಾಗೂ ವೀರಶೈವ ಲಿಂಗಾಯತ ಧರ್ಮ ಪ್ರತ್ಯೇಕಿಸಲು ಹೊರಟ ಮಾತೆ ಮಾಹಾದೇವಿ ಮತ್ತು ಅನುಯಾಯಿಗಳ ಕ್ರಮ ಖಂಡಿಸಿ ವೀರಶೈವ ಲಿಂಗಾಯತ ಸಮುದಾಯದವರು ಮಂಗಳವಾರ ಪಟ್ಟಣದಲ್ಲಿ ಬೃಹತ್‌ ಪ್ರತಿಭಟನೆ ನಡೆಸಿದರು. ಪಟ್ಟಣದ ಮಲ್ಲಿಕಾರ್ಜುನ ದೇವಸ್ಥಾನದಿಂದ ತಡವಲಗಾದ ಅಭಿನವ ರಾಚೋಟೇಶ್ವರ ಶ್ರೀ ಹಾಗೂ ಇಂಚಗೇರಿಯ ರೇಣುಕಾ ಶಿವಾಚಾರ್ಯರ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ನಂತರ ಬಸವೇಶ್ವರ ವೃತ್ತದಲ್ಲಿ ಬಹಿರಂಗ ಸಭೆಯಾಗಿ ಮಾರ್ಪಟ್ಟಿತು. ಈ ವೇಳೆ ಜಂಗಮ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಸ್‌.ಎಲ್‌. ನಿಂಬರಗಿಮಠ ಮಾತನಾಡಿ, ಒಂದಾಗಿರುವ ವೀರಶೈವ ಸಮಾಜ ಒಡೆಯಲು ಹೊರಟಿರುವ ಕ್ರಮ ಖಂಡನೀಯ. ಸರ್ಕಾರ ಲಿಂಗಾಯತರನ್ನು ಒಡೆಯುವ ಹುನ್ನಾರ ನಡೆಸಿದೆ ಎಂದು ಆರೋಪಿಸಿದರು. ಈ ವೇಳೆ ವಿವಿಧ ಮಠಾಧೀಶರು ಮಾತನಾಡಿ, ವೀರಶೈವ ಧರ್ಮಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ವೀರಶೈವ ಲಿಂಗಾಯತ ಧರ್ಮ ಒಡೆಯಲು ಹೊರಟಿರುವ ಮಾತೆ ಮಹಾದೇವಿ ಲಿಂಗಾಯತ ಸಮುದಾಯದಲ್ಲಿ ತಪ್ಪು
ಕಲ್ಪನೆ ಮೂಡಿಸುತ್ತಿದ್ದಾರೆ. ಹಾನಗಲ್‌ ಕುಮಾರಸ್ವಾಮಿಯವರಿಗೆ ತುಚ್ಚವಾಗಿ ಮಾತನಾಡಿರುವುದು ಹಾಗೂ ರಂಭಾಪುರಿ ಜಗದ್ಗುರುಗಳ ತೇಜೋವಧೆ ಮಾಡಲು ಹೊರಟಿರುವ ಕ್ರಮ ಖಂಡನೀಯ ಎಂದರು. ನಾದ ಗ್ರಾಮದ ಶಿವಾನಂದ ಶಿವಾಚಾರ್ಯರು, ಇಂಚಗೇರಿಯ
ರೇಣುಕಾ ಶಿವಾಚಾರ್ಯರು, ಆಲಮೇಲದ ಚಂದ್ರಶೇಖರ ಶಿವಾಚಾರ್ಯರು, ಕನ್ನೂರಿನ ರೇವಣಸಿದ್ಧ ಶಿವಾಚಾರ್ಯರು, ಅಗರಖೇಡದ ಪ್ರಭುಲಿಂಗ ಸ್ವಾಮೀಜಿ, ಹತ್ತಳ್ಳಿಯ ಗುರುಪಾದೇಶ್ವರ ಶಿವಾಚಾರ್ಯರು, ಮಲ್ಲಯ್ಯ ಸಾರಂಗಮಠ ನೇತೃತ್ವ ವಹಿಸಿದ್ದರು. ಎಸ್‌.ಎಲ್‌. ನಿಂಬರಗಿಮಠ, ಬಿ.ಡಿ. ಪಾಟೀಲ, ಶಿವಾನಂದ ಶಾಸ್ತ್ರೀ, ಎಸ್‌.ಎಸ್‌. ಹಿರೇಮಠ, ಚಂದ್ರಕಾಂತ ಹಿರೇಮಠ, ವಿರೂಪಾಕ್ಷಯ್ಯ ವಸ್ತ್ರದ, ರವಿಗೌಡ ಬಿರಾದಾರ ಹಂಜಗಿ, ಶಂಕರಗೌಡ ಬಿರಾದಾರ, ಎಸ್‌.ಬಿ. ಹಿರೇಮಠ, ಬಿ.ಬಿ. ಕೊಟ್ಟಲಗಿ, ನಾಗಪ್ಪ ಬಿರಾದಾರ, ಚಿದಾನಂದ ಹಿರೇಮಠ, ದುಂಡಯ್ಯ ಮಠಪತಿ, ಎಸ್‌.ಎಂ. ಹಿರೇಮಠ, ಗುರುಬಸಯ್ಯ ಮಠಪತಿ, ಮಲ್ಲಯ್ಯ ಪತ್ರಿಮಠ, ಮಹಾಂತೇಶ ಪತ್ರಿಮಠ, ಗುರುಬಸಯ್ಯ ಮಠಪತಿ, ಶರಣಯ್ಯ ಮಠಪತಿ, ಸಿದ್ದಯ್ಯ ಹಿರೇಮಠ, ಮಹಾದೇವ ಪ್ರತ್ಯೇಕಿಸಬೇಡಿ ಕೊಟ್ಟಲಗಿ, ಎಸ್‌.ಸಿ. ಹಿರೇಮಠ, ಆರ್‌.ಎಂ. ಮಠ ಇದ್ದರು

Advertisement
Advertisement

Udayavani is now on Telegram. Click here to join our channel and stay updated with the latest news.

Next