Advertisement

ಪ್ರಧಾನಿಗೆ ಹೂಗುತ್ಛ ಬೇಡ, ಪುಸ್ತಕ ಕೊಡಿ

03:45 AM Jul 18, 2017 | |

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸುವ ಸಂದರ್ಭ ಅವರಿಗೆ ಹೂಗುತ್ಛ ಕೊಡಬೇಡಿ, ಬದಲಿಗೆ ಪುಸ್ತಕ ಕೊಡಿ. ಕೇಂದ್ರ ಸರಕಾರವೇ ಖುದ್ದು ಇಂತಹುದೊಂದು ಆದೇಶವನ್ನು ಸೋಮವಾರ ಹೊರಡಿಸಿದೆ. 

Advertisement

ಈ ಸಂಬಂಧ ಕೇಂದ್ರ ಗೃಹ ಸಚಿವಾಲಯವು  ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸುತ್ತೋಲೆಯನ್ನು ಕಳುಹಿಸಿದೆ. “ಪ್ರಧಾನಿ ಮೋದಿ ಅವರನ್ನ ಸ್ವಾಗತಿಸುವಂಥ ಸಂದರ್ಭದಲ್ಲಿ ಇನ್ನು ಮುಂದೆ ಹೂಗುತ್ಛವನ್ನು ನೀಡಬೇಡಿ. ಅದರ ಬದಲಿಗೆ ಪುಸ್ತಕ, ಕೈಮಗ್ಗದ ಕರವಸ್ತ್ರ ಅಥವಾ ಒಂದು ಹೂವನ್ನು ಕೊಡಿ’ ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ. ಅಲ್ಲದೆ ಭಾರತದಲ್ಲಿ ಪ್ರಧಾನಿ ಅವರು ಎಲ್ಲೇ ಹೋದರೂ, ಈ ಹೊಸ ಪದ್ಧತಿಯನ್ನು ಪಾಲಿಸಬೇಕು ಎಂದು ಗೃಹಖಾತೆ ರಾಜ್ಯ ಸರಕಾರಗಳಿಗೆ ಕಟ್ಟುನಿಟ್ಟಾಗಿ ಸೂಚನೆ ನೀಡಿದೆ.  

ಇದಕ್ಕೂ ಮುನ್ನ ಕಳೆದ ತಿಂಗಳು ಕೊಚ್ಚಿಯಲ್ಲಿ ಪಿ.ಎನ್‌. ಪಣಿಕ್ಕರ್‌ ಓದಿನ ದಿನದ ಅಂಗವಾಗಿ ಮಾತನಾಡಿದ್ದ ಪ್ರಧಾನಿ ಮೋದಿ ಅವರು, ಸ್ವಾಗತದ ವೇಳೆ ಪುಸ್ತಕ ಕೊಡಿ ಎಂದು ಹೇಳಿದ್ದರು. “ಹೂಗುತ್ಛದ ಬದಲು ಪುಸ್ತಕ ನೀಡುವುದು, ದೊಡ್ಡ ಮಟ್ಟದ ಬದಲಾವಣೆಯನ್ನು ತರಬಲ್ಲದು. ಯುವಕರು ನಿರಂತರ ಓದಿನ ಬಗ್ಗೆ ಪ್ರತಿಜ್ಞೆ ಮಾಡಬೇಕು’ ಎಂದೂ ಅವರು ಹೇಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next