ಕ್ಯಾಂಪಸ್‌ನಲ್ಲಿ ಅವತ್ತು ಪರೀಕ್ಷಾ ವಾತಾವರಣಕ್ಕೆ ಬದಲಾಗಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಎಲ್ಲಿ ನೋಡಿದರಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿರುವ ಪೋರಿಯರು, ಪುಸ್ತಕ ಹಿಡಿದು ಓದುವ ನಾಟಕವಾಡುತ್ತಾ ಕದ್ದು ಕದ್ದು ಹುಡುಗೀರನ್ನು ನೋಡುತ್ತಿದ್ದ ಹುಡುಗರು, ಅವರ ಕಳ್ಳ ನೋಟಗಳನ್ನು ನೋಡಿಯೂ ನೋಡದೆ ಪೋಸ್ ಕೊಡುತ್ತಿದ್ದ ಹುಡುಗೀರು… ಸುತ್ತಮುತ್ತಲೆಲ್ಲ ಇಂಥವರೇ ಕಾಣುತ್ತಿದ್ದರು…
ನಾವು ಹಿಂದೆಲ್ಲಾ ಪರೀಕ್ಷೆ ಎಂದರೆ ಗಂಭೀರ ವಾತಾವರಣ ಸೃಷ್ಟಿಯಾಗುತ್ತಿತ್ತು. ಇಡೀ ಕ್ಯಾಂಪಸ್ ಹುಡುಗರು ಪುಸ್ತಕದತ್ತ ಮುಖ ಮಾಡಿ, ಹ್ಯಾಪ್ ಮೋರೆ ಹಾಕಿಕೊಂಡು ಕುಳಿತಿರುತ್ತಿದ್ದೆವು. ಆದರೆ ಇದು ಕಲಿಯುಗ ಅಲ್ಲವೇ? ಪುಸ್ತಕದ ಕಡೆ ಮುಖ ಮಾಡುವುದಿರಲಿ, ಪುಸ್ತಕಗಳೇ ನಮ್ಮತ್ತ ಮುಖ ಮಾಡಿದರೂ ನಾವು ಓದಲ್ಲ. ನಾನ್ ಯಾಕ್ ಈ ವಿಷಯ ಹೇಳ್ದೆ ಅಂದ್ರೆ ನಮ್ಮ ಸ್ನಾತಕೋತ್ತರ ಕಾಲೇಜಿನಲ್ಲಿ ಸಿಇಟಿ ಪರೀಕ್ಷೆ ಬರೆಯಲು ಬಂದ ಹುಡುಗೀರು ತುಂಬಾ ಕಲರ್‌ಫುಲ… ಆಗಿ ಕಾಣಿ¤ದ್ರು. ಅವರು ಪರೀಕ್ಷೆ ಬರೆಯೋಕ್ ಬಂದಿದ್ರೋ ಅಥವಾ ಅಂದ ಚೆಂದದ ಉಡುಗೆಗಳನ್ನು ತೊಟ್ಟು ಫ್ಯಾಷನ್ ಶೋಗೆ ಬಂದಿದ್ದರೋ ನನಗೆ ತಿಳಿದಿಲ್ಲ.
ಕ್ಯಾಂಪಸ್‌ನಲ್ಲಿ ಅವತ್ತು ಪರೀಕ್ಷಾ ವಾತಾವರಣಕ್ಕೆ ಬದಲಾಗಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಎಲ್ಲಿ ನೋಡಿದರಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿರುವ ಪೋರಿಯರು, ಪುಸ್ತಕ ಹಿಡಿದು ಓದುವ ನಾಟಕವಾಡುತ್ತಾ ಕದ್ದು ಕದ್ದು ಹುಡುಗೀರನ್ನು ನೋಡುತ್ತಿದ್ದ ಹುಡುಗರು, ಅವರ ಕಳ್ಳ ನೋಟಗಳನ್ನು ನೋಡಿಯೂ ನೋಡದೆ ಪೋಸ್ ಕೊಡುತ್ತಿದ್ದ ಹುಡುಗೀರು… ಸುತ್ತಮುತ್ತಲೆಲ್ಲ ಇಂಥವರೇ ಕಾಣುತ್ತಿದ್ದರು.
ಒಂದು ದಿನ ಕಳೆಯಿತು, ಎರಡು ದಿನ ಕಳೆಯಿತು. ಆದರೆ ಆ ಸಿಇಟಿ ಎಕ್ಸಾಮ… ಬರೆಯುವವರ ಸೊಬಗು ಮಾತ್ರ ಕಳೆಯಲೇ ಇಲ್ಲ.
ನನಗಂತೂ ಆ ಬೆಡಗಿಯರಲ್ಲಿ ಒಬ್ಬರನ್ನಾದರೂ ಮಾತನಾಡಿಸಲೇಬೇಕೆಂಬ ಹಂಬಲ. ಬೆಡಗು ಬಿನ್ನಾಣ ಮಾಡುವ ಹುಡುಗಿಯರಲ್ಲಿ ಮಾತನಾಡುವುದು ಎಷ್ಟು ಕಷ್ಟವೆಂಬುದು ಹುಡುಗರಿಗೇ ಗೊತ್ತು. ಪಿಂಕ್ ಕಲರ್ ಉಡುಗೆ ತೊಟ್ಟ ಒಬ್ಟಾಕೆ ಹಾಲಿನ ಕೆನೆಯ ಅಂದವ ಹೊತ್ತು ಬರುತ್ತಿದ್ದಳು. ನಾನು ಮೆಲ್ಲನೆ ಹತ್ತಿರ ಹೋದೆ. ಏನು ಮಾತಾಡಬೇಕೆಂದು ತಿಳಿಯಲಿಲ್ಲ. ಒಡನೆಯೇ ಪ್ರಶ್ನೆಯೊಂದು ನನ್ನ ಬಾಯಿಂದ ಹೊರಬಂತು “ರೀ, ನೀವೂನೂ ಫ್ಯಾಷನ್ ಶೋಗೇ ಬಂದ್ರಾ?’. ಪುಣ್ಯಕ್ಕೆ ಆ ಮಾರಾಯಿತಿ ನನ್ನ ಪ್ರಶ್ನೆಗೆ ಮುಖ ಸಿಂಡರಿಸಲಿಲ್ಲ. ಅದಕ್ಕೆ ಬದಲಾಗಿ ನಾಚುತ್ತಲೇ “ಅಯ್ಯೋ ಇಲ್ಲಾಪ್ಪ. ನಾನೂ ಸಿಇಟಿ ಎಕ್ಸಾಂ ಬರೆಯಲು ಬಂದಿರುವವಳೇ.’ ಎಂದಳು.
ಸಿಇಟಿ ಪರೀಕ್ಷೆ ಮುಗಿದು ಮುಂದೆ ವೃತ್ತಿಪರ ಕೋರ್ಸು ಸೇರಿಕೊಂಡಾಗ ಇವಳೇ ನನ್ನ ಸ್ನೇಹಿತೆಯಾಗಿ ಸಿಗಲಪ್ಪಾ ಅಂತ ಪ್ರಾರ್ಥಿಸುತ್ತಾ ಪಕ್ಕಕ್ಕೆ ಸರಿದು ಪುಸ್ತಕ ಬಿಡಿಸಿ ನಿಂತೆ.
ಮೋಹನ ಬಿ.ಎಂ., ಮೈಸೂರು