Advertisement

ಅಂಗವೈಕಲ್ಯ ರೋಗವೆಂದು ಭಾವಿಸಬೇಡಿ: ನಾಡಗೌಡ

11:37 AM Jul 26, 2017 | |

ಮುದ್ದೇಬಿಹಾಳ: ಅಂಗವಿಕಲತೆ ರೋಗವಲ್ಲ. ಅವರನ್ನು ಸಮಾಜದ ಯಾವುದೇ ಅಭಿವೃದ್ಧಿ ಕಾರ್ಯದಲ್ಲೂ ಬೇರೆ ಮಾಡುವುದು ಸರಿಯಲ್ಲ. ಅವರಲ್ಲೂ ಕೂಡಾ ಯಾವುದೇ ಕೆಲಸ ಮಾಡುವ ಸಾಮರ್ಥ್ಯವಿದೆ ಎಂದು ರಾಜ್ಯ ಸರಕಾರದ ದೆಹಲಿ ವಿಶೇಷ ಪ್ರತಿನಿಧಿ,  ಶಾಸಕ ಸಿ.ಎಸ್‌. ನಾಡಗೌಡ ಹೇಳಿದರು. 

Advertisement

ಇಲ್ಲಿಯ ತಾಲೂಕಾಸ್ಪತ್ರೆಯಲ್ಲಿ ಜಿಲ್ಲಾ ಹಾಗೂ ತಾಲೂಕಾಡಳಿತ ಹಾಗೂ ತಾಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯದ ಆಶ್ರಯದಲ್ಲಿ ಮಂಗಳವಾರ ಏರ್ಪಡಿಸಲಾದ ಅಂಗವಿಕಲರ ವೈದ್ಯಕೀಯ ತಪಾಸಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಅಂಗವಿಕಲರಲ್ಲಿ ಸ್ಫೂರ್ತಿ ತುಂಬುವುದನ್ನು ಸರಕಾರದ ಜೊತೆಗೆ ಸಾರ್ವಜನಿಕರೂ ಸಹಕಾರ ನೀಡಬೇಕು. ಈಗಾಗಲೇ ಎಲ್ಲ ಕ್ಷೇತ್ರದಲ್ಲಿಯೂ ಅಂಗವಿಕಲರಿಗೆ ಮೀಸಲಾತಿ ದೊರಕಿದ್ದು ಅದರ ಸದುಪಯೋಗ ಎಲ್ಲರೂ ಪಡೆದುಕೊಳ್ಳಬೇಕು. ಸಂಪೂರ್ಣವಾಗಿ ಬೇರೆಯವರೊಂದಿಗೆ ಅವಲಂಬಿತರಾಗಿರುತ್ತಾರೊ ಅವರಿಗೆ ಸರಕಾರದ ಯೋಜನೆಗಳನ್ನು ನೇರವಾಗಿ ಮುಟ್ಟಿಸುವ ಕೆಲಸ ಅಧಿಕಾರಿಗಳು ಮಾಡಬೇಕು ಎಂದು ಹೇಳಿದರು.

ಅಂಗವಿಕಲರಿಗಾಗಿಯೇ ಮಾಸಿಕವಾಗಿ ಕ್ಯಾಂಪ್‌ಗ್ಳನ್ನು ಆಯೋಜಿಸಲಾಗುತ್ತಿದ್ದು ಪ್ರತಿಯೊಬ್ಬರು ಕಾಂಗ್ರೆಸ್‌ ಸರಕಾರ ಪ್ರಥಮ ಬಾರಿಗೆ ಅನುಷ್ಠಾನಗೊಳಿಸಿದ ಯಶಸ್ವಿನ ಕಾರ್ಡ್‌ನ್ನು ಪ್ರತಿಯೊಬ್ಬ ಅಂಗವಿಕಲರೂ ಪಡೆದುಕೊಳ್ಳಬೇಕು. ಇದರಿಂದ ವೈದ್ಯಕೀಯ ಕ್ಷೇತ್ರದಲ್ಲಿ
ಹೆಚ್ಚಿನ ಸೌಲಭ್ಯ ದೊರಕುವುದು ಎಂದರು. ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಮಾತನಾಡಿದರು. ತಾಪಂ ಉಪಾಧ್ಯಕ್ಷ ಮಂಜುನಾಥಗೌಡ ಪಾಟೀಲ, ಪುರಸಭೆ ಸದಸ್ಯ ಪಿಂಟು ಸಾಲಿಮನಿ, ತಾಲೂಕು ಆರೋಗ್ಯಾಧಿಕಾರಿ ಸತೀಶ ತಿವಾರಿ, ಪಶು ಸಂಗೋಪನಾ ಇಲಾಖೆ ಅಧಿಕಾರಿ ಎಸ್‌.ಸಿ. ಚೌಧರಿ ವೇದಿಕೆಯಲ್ಲಿದ್ದರು. ಎನ್‌.ಎಸ್‌. ಸಂಗಮ ಪ್ರಾರ್ಥಿಸಿದರು. ಎಂ.ಎಸ್‌. ಗೌಡರ ಸ್ವಾಗತಿಸಿದರು. ಡಾ| ಸತೀಶ ತಿವಾರಿ ಪ್ರಾಸ್ತಾವಿಕ ಮಾತನಾಡಿದರು. ಎ.ಎಸ್‌. ತೆರದಾಳ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next