Advertisement

ಕೋವಿಡ್ ಬಂದರೆ ಹೆದರಬೇಕಿಲ್ಲ: ಮಂಜುನಾಥ್‌

07:48 AM Jul 26, 2020 | Suhan S |

ವಿಜಯಪುರ: ಕೋವಿಡ್ ಪಾಸಿಟಿವ್‌ ಬಂದರೆ ಅಂಜ ಬೇಕಿಲ್ಲ. ಆತ್ಮಸ್ಥೈರ್ಯವಿದ್ದರೆ ಕೋವಿಡ್ ಕಾಯಿಲೆ ಗುಣವಾದಂತೆ ಎಂಬ ಧೈರ್ಯವಿರಲಿ ಎಂದು ತಾಪಂ ಸದಸ್ಯಮಂಜುನಾಥ್‌ ತಿಳಿಸಿದರು.

Advertisement

ಚನ್ನರಾಯಪಟ್ಟಣ ಹೋಬಳಿ ದೇವನಾಯಕನ ಹಳ್ಳಿಯಲ್ಲಿ ಕೋವಿಡ್ ಪಾಸಿಟಿವ್‌ ಬಂದ ವ್ಯಕ್ತಿಯ ಕುಟುಂಬಕ್ಕೆ ಅಗತ್ಯವಿರುವ ಪಡಿತರ ಧಾನ್ಯ ವಿತರಿಸಿ ಮಾತನಾಡಿದರು. ಕೋವಿಡ್ ಪಾಸಿಟಿವ್‌ ಬಂದ ವ್ಯಕ್ತಿಯನ್ನು ಯಾರೂ ಕೀಳಾಗಿ ನೋಡುವುದಾಗಲಿ, ಅಥವಾ ಅವರ ಮನೆಯವರ ಬಗ್ಗೆ ಭಯಭೀತರಾಗುವುದು ಬೇಡ. ಕೋವಿಡ್ ಗುಣಮುಖವಾದಗಷ್ಟು ದೊಡ್ಡ ಕಾಯಿಲೆಯಲ್ಲ. ಗ್ರಾಮೀಣ ಭಾಗದಲ್ಲೂ ಜನ ಆರೋಗ್ಯವಂತರಾಗಿದ್ದಾರೆ. ಆದಷ್ಟು ತಿಳಿವಳಿಕೆ ಉಳ್ಳವರಾಗಿದ್ದಾರೆ. ಮನೆಯಿಂದ ಹೊರಬಂದಾಗ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಅಂಗಡಿ ಮುಂಗಟ್ಟುಗಳಲ್ಲಿ ವ್ಯವಹರಿಸುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಕೋವಿಡ್ ಸೋಂಕು ಹರಡದಂತೆ ಮುಂಜಾಗ್ರತೆ ವಹಿಸಬಹುದು ಎಂದು ತಿಳಿಸಿದರು.

ಗ್ರಾಪಂ ಸದಸ್ಯ ನಾಗರಾಜ್‌, ಗ್ರಾಮದಲ್ಲಿ ಕೋವಿಡ್ ಪಾಸಿಟಿವ್‌ ಬಂದ ವ್ಯಕ್ತಿ ಗುಣಮುಖರಾಗಿ ವಾಪಸ್‌ ಬಂದಿದ್ದು, ಯಾರಿಗೂ ಯಾವುದೇ ಸಮಸ್ಯೆ ಇಲ್ಲ. ಗ್ರಾಮ ಸ್ಥರು ಕೊರೊನಾ ಬಗ್ಗೆ ತಪ್ಪು ತಿಳಿವಳಿಕೆ, ಭಯ ಬಿಟ್ಟು ಕಡ್ಡಾಯ ನಿಯಮ ಪಾಲನೆ ಮಾಡಿ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next