Advertisement

ಕರುಣಾನಿಧಿ ಮತ್ತೆ ಗಂಭೀರ

06:00 AM Aug 07, 2018 | |

ಚೆನ್ನೈ: ಡಿಎಂಕೆ ಪರಮೋಚ್ಚ ನಾಯಕ ಮುತ್ತುವೇಲು ಕರುಣಾನಿಧಿ (94) ಅವರ ಆರೋಗ್ಯ ಸ್ಥಿತಿ ಸೋಮವಾರ ಮತ್ತೆ ಹದಗೆಟ್ಟಿದೆ. ಸದ್ಯ ಅವರಿಗೆ ಚಿಕಿತ್ಸೆ ನೀಡುತ್ತಿರುವ ಚೆನ್ನೈಯ ಕಾವೇರಿ ಆಸ್ಪತ್ರೆ ಹೊರಡಿಸಿರುವ ಮೆಡಿಕಲ್‌ ಬುಲೆಟಿನ್‌ ಪ್ರಕಾರ “ತಮಿಳುನಾಡು ಮಾಜಿ ಮುಖ್ಯಮಂತ್ರಿಗಳ ಆರೋಗ್ಯ ಹದಗೆಟ್ಟಿದೆ. ಮುಂದಿನ 24 ಗಂಟೆಗಳ ಅವಧಿಯಲ್ಲಿ ಅವರ ಪ್ರಮುಖ ಅಂಗಾಂಗಗಳು ಕೆಲಸ ಮಾಡುವಂತೆ ಮಾಡುವುದು ಸವಾಲಿನ ಕೆಲಸ’ ಎಂದು ಪ್ರಕಟಿಸಲಾಗಿದೆ.

Advertisement

ವೈದ್ಯಕೀಯ ಕ್ರಮಗಳಿಗೆ ಕರುಣಾನಿಧಿ ಯಾವ ರೀತಿ ಸ್ಪಂದಿಸುತ್ತಾರೆ ಎನ್ನುವುದು ಮುಖ್ಯವಾದ ಅಂಶವಾಗಲಿದೆ ಎಂದು ಬುಲೆಟಿನ್‌ನಲ್ಲಿ ಪ್ರಸ್ತಾವಿಸಲಾಗಿದೆ. ಹಿರಿಯ ನಾಯಕನ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ ಎಂಬ ಸುದ್ದಿ ಹಬ್ಬುತ್ತಿದ್ದಂತೆ ಕಾವೇರಿ ಆಸ್ಪತ್ರೆ ಮುಂಭಾಗದಲ್ಲಿ ಡಿಎಂಕೆ ಕಾರ್ಯಕರ್ತರು, ಅಭಿಮಾನಿಗಳು ಸೇರಿದ್ದಾರೆ. ಜು.28ರಂದು ಕರುಣಾ ಅವರನ್ನು ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next