Advertisement

ಪಠ್ಯ ಪುಸ್ತಕ ವಿಚಾರದಲ್ಲಿ ಸಾಂಸ್ಕೃತಿಕ ಅತ್ಯಾಚಾರ ನಡೆದಿದೆ: ಡಿಕೆ ಶಿವಕುಮಾರ್

12:11 PM Jun 07, 2022 | Team Udayavani |

ಬೆಂಗಳೂರು: ಪಠ್ಯ ಪುಸ್ತಕ ವಿಚಾರದಲ್ಲಿ ಸಾಂಸ್ಕೃತಿಕ ಅತ್ಯಾಚಾರ ನಡೆದಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನೇಕ ಸ್ವಾಮಿಜೀಗಳು ಪಠ್ಯ ಪುಸ್ತಕ ವಿಚಾರವಾಗಿ ಧ್ವನಿ ಎತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಅವರ ಪಾದಾರವಿಂದಗಳಿಗೆ ನಮಸ್ಕರಿಸುತ್ತದೆ. ಸರ್ಕಾರ ಮಾಡಲಾಗದ ಕೆಲಸವನ್ನು ಧರ್ಮ ಗುರುಗಳು ಮಾಡ್ತಿದ್ದಾರೆ. ಅವರ ಧ್ವನಿಗೆ ಪೂರಕವಾಗಿ ಕಾಂಗ್ರೆಸ್ ಕೆಲಸ ಮಾಡುತ್ತದೆ ಎಂದರು.

ಅಂಬೇಡ್ಕರ್ ಅವರ ತಂದೆ, ಹುಟ್ಟಿದ ಊರು ಎಲ್ಲಾ ತೆಗೆಯಲಾಗಿದೆ. ಸಂವಿಧಾನದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡುತ್ತೇವೆ. ಇದು ಭಾರತದ ಪುಣ್ಯ ಭೂಮಿಗೆ ಮಾಡಿದ ಅಪಮಾನ. ಅಂಬೇಡ್ಕರ್ ಈ ದೇಶದ ಆಸ್ತಿ ಎಂದು ಅಭಿಪ್ರಾಯಪಟ್ಟರು.

ಬಸವಣ್ಣನವರ ವಿಚಾರಗಳನ್ನು ತಿರುಚಲು ಸಾಧ್ಯವೇ?: ಬಸವಣ್ಣನವರ ವಿಚಾರ ಗಮನ ಹರಿಸುವುದಾಗಿ ಸಿಎಂ ಹೇಳಿದ್ದಾರೆ. ನಾಗ್ಪುರ ಎಜುಕೇಷನ್ ಪಾಲಿಸಿ ಏನು ಬೇಕಾದರೂ ಮಾಡಿಕೊಳ್ಳಲಿ. ಆದರೆ ಗೌತಮ ಬುದ್ಧ, ಮಹಾವೀರರ ಬಗ್ಗೆ ಏಕವಚನ ಬಳಸಲಾಗಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ ಎಂದರು.

ಇದನ್ನೂ ಓದಿ:ನಾಳೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ: ವಿಪ್ ಜಾರಿಗೊಳಿಸಿದ ಜೆಡಿಎಸ್

Advertisement

ಇದೆಲ್ಲವನ್ನು ಖಂಡಿಸಿ ಜೂನ್ 9ರ ಬೆಳಿಗ್ಗೆ 10ಗಂಟೆಗೆ ವಿಧಾನ ಸೌಧದ ಗಾಂಧಿ ಪ್ರತಿಮೆ ಬಳಿ ಕಾಂಗ್ರೆಸ್ ಶಾಸಕರು ಪ್ರತಿಭಟನೆ ನಡೆಸುತ್ತಾರೆ. ಬಿಜೆಪಿಯವರ ಮನಸ್ಥಿತಿ ಸರಿ ಇಲ್ಲ. ಪರಿಷ್ಕೃತ ಪಠ್ಯವನ್ನು ಕಸದ ಬುಟ್ಟಿಗೆ ಹಾಕಬೇಕು. ಹಳೇ ಪಠ್ಯದಲ್ಲೇ ಶಿಕ್ಷಣ ಮುಂದುವರಿಯಬೇಕು. ಚಕ್ರತೀರ್ಥ ಮನೆಗೆ ಪೊಲೀಸ್ ಭಧ್ರತೆ ಅಲ್ಲ ಪ್ಯಾರ ಮಿಲಿಟರಿ ಹಾಕಿಕೊಳ್ಳಲಿ ಎಂದು ವ್ಯಂಗ್ಯವಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next